‘ರಿಲೀಸ್ ಡೇಟ್ ಹೇಳದೇ ನಟಿಸಲ್ಲ’ ಎಂದು ಹಠ ಹಿಡಿದ ‘ಸೀತಾ ರಾಮ’ ರೀತು ಸಿಂಗ್; ವಿಡಿಯೋ ವೈರಲ್  

|

Updated on: Jun 23, 2023 | 7:09 AM

Seetha Raama Kannada Serial : ಪ್ರೋಮೋ ನೋಡಿದವರು ಧಾರಾವಾಹಿ ಕಥೆಯನ್ನು ವಿವಿಧ ರೀತಿಯಲ್ಲಿ ಊಹಿಸಿದ್ದರು. ಎಷ್ಟೇ ಆದರೂ ಧಾರಾವಾಹಿ ರಿಲೀಸ್ ದಿನಾಂಕ ರಿವೀಲ್ ಆಗಿರಲಿಲ್ಲ. ಈಗ ಈ ಬಗ್ಗೆ ಅಪ್​ಡೇಟ್ ಸಿಕ್ಕಿದೆ.

‘ರಿಲೀಸ್ ಡೇಟ್ ಹೇಳದೇ ನಟಿಸಲ್ಲ’ ಎಂದು ಹಠ ಹಿಡಿದ ‘ಸೀತಾ ರಾಮ’ ರೀತು ಸಿಂಗ್; ವಿಡಿಯೋ ವೈರಲ್  
ವೈಷ್ಣವಿ-ರೀತು
Follow us on

‘ಸೀತಾ ರಾಮ’ ಧಾರಾವಾಹಿ ಬಗ್ಗೆ ವೀಕ್ಷಕರಲ್ಲಿ ಸಾಕಷ್ಟು ನಿರೀಕ್ಷೆ ಇದೆ. ವೈಷ್ಣವಿ ಗೌಡ ಹಾಗೂ ಗಗನ್ ಚಿನ್ನಪ್ಪ ಧಾರಾವಾಹಿಯಲ್ಲಿ ಮುಖ್ಯಭೂಮಿಕೆ ನಿರ್ವಹಿಸುತ್ತಿದ್ದಾರೆ. ರೀತು ಸಿಂಗ್ ಹೆಸರಿನ ಬಾಲಕಿ ವೈಷ್ಣವಿ ಗೌಡ ಮಗಳಾಗಿ ಧಾರಾವಾಹಿಯಲ್ಲಿ ನಟಿಸುತ್ತಿದ್ದಾಳೆ. ಈ ಧಾರಾವಾಹಿಯ ಪ್ರೋಮೋ ರಿಲೀಸ್ ಆಗಿದ್ದು ಮಾರ್ಚ್ ತಿಂಗಳಲ್ಲಿ. ಆದರೆ, ಇಲ್ಲಿಯವರೆಗೆ ಸೀರಿಯಲ್ ರಿಲೀಸ್ ಡೇಟ್ ಅನೌನ್ಸ್ ಆಗಿಲ್ಲ. ಈ ಬಗ್ಗೆ ವೀಕ್ಷಕರಿಗೆ ಬೇಸರ ಇದೆ. ಸೋಶಿಯಲ್ ಮೀಡಿಯಾ ಮೂಲಕ ತಂಡವನ್ನು ಪ್ರಶ್ನೆ ಮಾಡಲಾಗುತ್ತಿದೆ. ರೀತು ಸಿಂಗ್​ಗೂ (Ritu Singh) ಪ್ರಶ್ನೆಗಳು ಎದುರಾಗುತ್ತಿವೆ. ಈಗ ‘ಸೀತಾ ರಾಮ’ (Seetha Rama Serial) ರಿಲೀಸ್ ಡೇಟ್ ಹೇಳದೇ ಆ್ಯಕ್ಟ್​​ ಮಾಡುವುದಿಲ್ಲ ಎಂದಿದ್ದಾಳೆ ರೀತು! ಜೀ ಕನ್ನಡ ವಾಹಿನಿ ರಿಲೀಸ್ ಮಾಡಿರುವ ಹೊಸ ಪ್ರೋಮೋ ಗಮನ ಸೆಳೆಯುತ್ತಿದೆ.

ವೈಷ್ಣವಿ ಹಾಗೂ ರೀತು ತಾಯಿ, ಮಗಳ ಪಾತ್ರ ಮಾಡಿದ್ದಾರೆ. ವೈಷ್ಣವಿನ ಮದುವೆ ಆಗಬೇಕು ಎಂದು ಗಗನ್ ಬರುತ್ತಾರೆ. ಗಗನ್ ಹಾಗೂ ರೀತು ಮಧ್ಯೆ ನಡೆಯುವ ಫನ್ನಿ ವಿಚಾರಗಳನ್ನು ಪ್ರೋಮೋದಲ್ಲಿ ತೋರಿಸಲಾಗಿದೆ. ಪ್ರೋಮೋ ನೋಡಿದವರು ಧಾರಾವಾಹಿ ಕಥೆಯನ್ನು ವಿವಿಧ ರೀತಿಯಲ್ಲಿ ಊಹಿಸಿದ್ದರು. ಎಷ್ಟೇ ಆದರೂ ಧಾರಾವಾಹಿ ರಿಲೀಸ್ ದಿನಾಂಕ ರಿವೀಲ್ ಆಗಿರಲಿಲ್ಲ. ಈಗ ಈ ಬಗ್ಗೆ ಅಪ್​ಡೇಟ್ ಸಿಕ್ಕಿದೆ.

ವೈಷ್ಣವಿ ಹಾಗೂ ರೀತು ಕುಳಿತಿರುತ್ತಾರೆ. ‘ಇಂದು ಶಾಲೆಯಲ್ಲಿ ಏನೆಲ್ಲ ಹೇಳಿಕೊಟ್ಟರು?’ ಎಂದು ವೈಷ್ಣವಿ ಅವರು ಮಗಳಿಗೆ ಪ್ರಶ್ನೆ ಮಾಡುತ್ತಾರೆ. ಆದರೆ, ರೀತು ಕಡೆಯಿಂದ ಯಾವುದೇ ಉತ್ತರ ಬರುವುದಿಲ್ಲ. ‘ಏಕೆ, ಏನಾಯ್ತು’ ಎನ್ನುವ ಪ್ರಶ್ನೆ ನಿರ್ದೇಶಕರ ಕಡೆಯಿಂದ ಬರುತ್ತದೆ. ‘ಭೂಮಿಗೆ ಬಂದ ಭಗವಂತ ಬಂತು, ಅಮೃತಧಾರೆ ಕೂಡ ರಿಲೀಸ್ ಆಯ್ತು. ಅವರಿಗಿಂತ ಮೊದಲು ನಮ್ಮ ಸೀರಿಯಲ್ ಆರಂಭ ಆಗಿದ್ದು. ಆದರೆ ಸಾಂಗ್ ಕೂಡ ರಿಲೀಸ್ ಆಗಿಲ್ಲ. ಎಲ್ಲಿವರೆಗೆ ನೀವು ರಿಲೀಸ್ ಡೇಟ್ ಹೇಳಲ್ವೋ ಅಲ್ಲಿವರೆಗೆ ನಾನು ಆ್ಯಕ್ಟ್ ಮಾಡಲ್ಲ’ ಎನ್ನುತ್ತಾಳೆ ರೀತು.

ಇದನ್ನೂ ಓದಿ: ‘ಸೀತಾ ರಾಮ ಧಾರಾವಾಹಿ ಪ್ರಸಾರದ ಬಗ್ಗೆ ಅಪ್​ಡೇಟ್​ ನೀಡಿ’; ವೈಷ್ಣವಿ ಗೌಡ ಬಳಿ ಬೇಡಿಕೆ ಇಟ್ಟ ಫ್ಯಾನ್ಸ್

ಆ ಬಳಿಕ ಡೈರೆಕ್ಟರ್​ಗೆ ತಲೆಬಿಸಿ ಆಗುತ್ತದೆ. ಅವರು ಯಾರಿಗೋ ಕರೆ ಮಾಡುತ್ತಾರೆ. ಅಂತೂ ರಿಲೀಸ್ ಡೇಟ್ ಯಾವಾಗ ಅನೌನ್ಸ್ ಮಾಡಲಾಗುತ್ತದೆ ಎನ್ನುವುದನ್ನು ತಿಳಿಸುತ್ತಾರೆ. ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೀಸನ್ 7’ರ ವೇದಿಕೆ ಮೇಲೆ ಈ ಪ್ರಶ್ನೆಗೆ ಉತ್ತರ ಸಿಗಲಿದೆ.

‘ಚಳಿಗಾಲದಲ್ಲಿ ಟೀಸರ್ ಬಂತು, ಬೇಸಿಗೆಯಲ್ಲಿ ಟ್ರೇಲರ್ ಬಂತು, ಮಳೆಗಾಲದಲ್ಲಿ ಸೀರಿಯಲ್ ಬರೋದು ಪಕ್ಕಾನಾ? ಸೀತಾ ರಾಮ ಯಾವಾಗ್ ಬರತ್ರೀ ಅನ್ನೋ ಮಿಲಿಯನ್ ಡಾಲರ್ ಪ್ರಶ್ನೆಗೆ ಉತ್ತರ ಕೊಡೋ ಟೈಮ್. ಮಿಸ್ ಮಾಡ್ದೇ ನೋಡಿ, ಈ ವಾರದ ಡಿಕೆಡಿ7’ ಎಂದು ಪ್ರೋಮೋಗೆ ಜೀ ಕನ್ನಡ ವಾಹಿನಿ ಅಡಿಬರಹ ನೀಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

 

Published On - 7:08 am, Fri, 23 June 23