ಬಿಗ್ ಬಾಸ್​​ನಿಂದ ವಿನೋದ್ ಗೊಬ್ಬರಗಾಲ ಔಟ್ ಆದ ಬೆನ್ನಲ್ಲೇ ಶುರುವಾಯ್ತು ಹೊಸ ಅಭಿಯಾನ

ವಿನೋದ್ ಗೊಬ್ಬರಗಾಲ ಅವರು ಈ ಮೊದಲ ವಾರಗಳಿಗೆ ಹೋಲಿಕೆ ಮಾಡಿದರೆ ಈ ಬಾರಿ ಕೊಂಚ ಡಲ್ ಆಗಿದ್ದರು. ಅವರ ಆಟ ಅಷ್ಟು ಉತ್ತಮವಾಗಿರಲಿಲ್ಲ. ಇದು ಅವರಿಗೆ ಹಿನ್ನಡೆ ಆಯಿತು.

ಬಿಗ್ ಬಾಸ್​​ನಿಂದ ವಿನೋದ್ ಗೊಬ್ಬರಗಾಲ ಔಟ್ ಆದ ಬೆನ್ನಲ್ಲೇ ಶುರುವಾಯ್ತು ಹೊಸ ಅಭಿಯಾನ
ವಿನೋದ್ ಗೊಬ್ಬರಗಾಲ
Edited By:

Updated on: Nov 28, 2022 | 8:21 AM

ಬಿಗ್ ಬಾಸ್​ನಿಂದ (Bigg Boss) ಹಾಸ್ಯ ಕಲಾವಿದ ವಿನೋದ್​ ಗೊಬ್ಬರಗಾಲ ಅವರು ಔಟ್ ಆಗಿದ್ದಾರೆ. 9ನೇ ವಾರಕ್ಕೆ ಅವರು ತಮ್ಮ ಆಟ ಮುಗಿಸಿ ತಮ್ಮ ಮನೆಗೆ ತೆರಳಿದ್ದಾರೆ. ಬಿಗ್ ಬಾಸ್​ಗೆ ಕಾಲಿಟ್ಟಾಗಿನಿಂದಲೂ ಅವರು ನಗಿಸುವ ಕೆಲಸ ಮಾಡುತ್ತಲೇ ಬರುತ್ತಿದ್ದರು. ಆದರೆ, ಈಗ ಅವರು ದೊಡ್ಮನೆಯಿಂದ ಹೊರಹೋಗಿರುವುದು ಸಹ ಸ್ಪರ್ಧಿಗಳಿಗೆ ಹಾಗೂ ವಿನೋದ್ (Vinod Gobbaragala) ಫ್ಯಾನ್ಸ್​​ಗೆ ಬೇಸರ ಮೂಡಿಸಿದೆ. ಸೋಶಿಯಲ್ ಮೀಡಿಯಾದಲ್ಲಿ ಫ್ಯಾನ್ಸ್​ ಅಭಿಯಾನ ಶುರು ಮಾಡಿದ್ದಾರೆ.

ದೀಪಿಕಾ ದಾಸ್ ಅವರು ಈ ಮೊದಲು ಬಿಗ್ ಬಾಸ್​ನಿಂದ ಎಲಿಮಿನೇಟ್ ಆಗಿದ್ದರು. ಬಳಿಕ ಅವರು ವೈಲ್ಡ್ ಕಾರ್ಡ್ ಎಂಟ್ರಿ ಪಡೆದು ಬಿಗ್ ಬಾಸ್ ಮನೆಗೆ ಕಾಲಿಟ್ಟರು. ಅವರು ಮರಳಿರುವುದು ಅನೇಕರಿಗೆ ಖುಷಿ ನೀಡಿದೆ. ವಿನೋದ್ ಅವರನ್ನೂ ಈ ರೀತಿ ಮತ್ತೆ ಕರೆಸಬೇಕು ಎಂದು ಅವರ ಫ್ಯಾನ್ಸ್ ಕೋರಿಕೊಳ್ಳುತ್ತಿದ್ದಾರೆ. ವಿನೋದ್ ಎಲಿಮಿನೇಟ್ ಆದ ಬಗ್ಗೆ ಕಲರ್ಸ್ ಕನ್ನಡ ವಾಹಿನಿಯ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಮಾಹಿತಿ ನೀಡಲಾಗಿದೆ. ಆ ಪೋಸ್ಟ್​ಗೆ ಫ್ಯಾನ್ಸ್ ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.

ವಿನೋದ್ ಗೊಬ್ಬರಗಾಲ ಅವರು ಈ ಮೊದಲ ವಾರಗಳಿಗೆ ಹೋಲಿಕೆ ಮಾಡಿದರೆ ಈ ಬಾರಿ ಕೊಂಚ ಡಲ್ ಆಗಿದ್ದರು. ಅವರ ಆಟ ಅಷ್ಟು ಉತ್ತಮವಾಗಿರಲಿಲ್ಲ. ಇದು ಅವರಿಗೆ ಹಿನ್ನಡೆ ಆಯಿತು. ಅವರು ಫಿನಾಲೆವರೆಗೆ ಇರಬೇಕಿತ್ತು ಎಂಬುದು ಅನೇಕರ ಕೋರಿಕೆ. ಇನ್ನೂ ಕೆಲವರು ‘ಬಡವರ ಮಕ್ಕಳು ಬೆಳಿಬೇಕ್ ಕಣ್ರಯ್ಯ’ ಎಂಬ ಡೈಲಾಗ್​ನ ಕಮೆಂಟ್ ಬಾಕ್ಸ್​​ನಲ್ಲಿ ಹಾಕುತ್ತಿದ್ದಾರೆ.

ಇದನ್ನೂ ಓದಿ
Bigg Boss Elimination: ಬಿಗ್​ ಬಾಸ್​ನಲ್ಲಿ ದರ್ಶ್​ ಆಟ ಅಂತ್ಯ; 3ನೇ ವಾರದ ಎಲಿಮಿನೇಷನ್​ನಲ್ಲಿ ಮಯೂರಿ ಸೇಫ್​
BBK9: ಬಿಗ್​ ಬಾಸ್​ ಮೇಲೆ ಮ್ಯಾಚ್​ ಫಿಕ್ಸಿಂಗ್​ ಆರೋಪ; ಗುರೂಜಿ ವಿರುದ್ಧ ಗುಡುಗಿದ ಸುದೀಪ್​
BBK9: ಬಿಗ್​ ಬಾಸ್​ 2ನೇ ವಾರ ನವಾಜ್​ ಎಲಿಮಿನೇಟ್​; ದೊಡ್ಮನೆಯಲ್ಲಿ ನಡೆಯಲಿಲ್ಲ ಪ್ರಾಸದ ಆಟ
BBK9: ಬಿಗ್​ ಬಾಸ್​ನಿಂದ ಐಶ್ವರ್ಯಾ ಪಿಸ್ಸೆ ಎಲಿಮಿನೇಟ್​; ಒಂದೇ ವಾರಕ್ಕೆ ಮುಗಿಯಿತು ದೊಡ್ಮನೆ ಆಟ

‘ಬಿಗ್ ಬಾಸ್​’ನಲ್ಲಿ ಕಳೆದ ವಾರ ಎಲ್ಲರೂ ನಾಮಿನೇಟ್ ಆಗಿದ್ದರು. ಆ ವಾರ ಮನೆಗೆ ಯಾರೂ ಕ್ಯಾಪ್ಟನ್ ಇಲ್ಲದ ಕಾರಣ ಯಾರಿಗೂ ಇಮ್ಯೂನಿಟಿ ಸಿಕ್ಕಿರಲಿಲ್ಲ. ಅತೀ ಕಡಿಮೆ ವೋಟ್ ಪಡೆದು ವಿನೋದ್ ಹೊರ ನಡೆದಿದ್ದಾರೆ. ಮನೆಯಿಂದ ಹೊರ ನಡೆವಾಗ ಅವರು ಕಣ್ಣೀರು ಹಾಕಿದ್ದಾರೆ.

ಇದನ್ನೂ ಓದಿ: ತಾನು ಮಾಡಿದ ತಪ್ಪನ್ನು ಬೇರೆಯವರ ಮೇಲೆ ಹೊರಿಸಿದ ವಿನೋದ್​ ಗೊಬ್ಬರಗಾಲ: ಪಾಠ ಹೇಳಿದ ಕಿಚ್ಚ ಸುದೀಪ್​​ 

ಸದ್ಯ ಬಿಗ್ ಬಾಸ್ ಮನೆಯಲ್ಲಿ 11 ಜನ ಇದ್ದಾರೆ. ಇನ್ನು ಒಂದು ತಿಂಗಳಲ್ಲಿ ಬಿಗ್ ಬಾಸ್ ಪೂರ್ಣಗೊಳ್ಳಲಿದೆ. ಇಲ್ಲಿಯವರೆಗೆ ಮನೆಯಲ್ಲಿ ಡಬಲ್ ಎಲಿಮಿನೇಷನ್ ನಡೆದಿಲ್ಲ. ಅದು ಕೂಡ ಶೀಘ್ರವೇ ನಡೆಯಲಿದೆ ಎನ್ನಲಾಗುತ್ತಿದೆ. ಅದು ಯಾವಾಗ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ.

Published On - 8:21 am, Mon, 28 November 22

TV9 Web

TV9 Kannada

Read More
Loading...
Unable to load recommendations.
Follow Us