‘ಬಿಗ್ ಬಾಸ್ ಕನ್ನಡ ಸೀಸನ್ 11’ರಿಂದ ಲಾಯರ್ ಜಗದೀಶ್ ಅವರು ಎಲಿಮಿನೇಟ್ ಆಗಿದ್ದಾರೆ ಎಂದು ವರದಿ ಆಗಿದೆ. ಅವರು ಹಾಗೂ ರಂಜಿತ್ ಮಧ್ಯೆ ಫೈಟ್ ನಡೆದು ಇಬ್ಬರೂ ಹೊರ ಹೋದರು ಎಂದು ಹೇಳಲಾಗುತ್ತಿದೆ. ಅದನ್ನೂ ಇನ್ನೂ ತೋರಿಸಿಲ್ಲ. ಆದರೆ, ಸುಮ್ಮನೆ ಇದ್ದ ಜಗದೀಶ್ ಅವರನ್ನು ಕೆರಳಿಸುವ ಕೆಲಸವನ್ನು ಮಾಡಿದ್ದು ಮಂಜು. ಇದೆಲ್ಲ ದೊಡ್ಡ ರಾಮಾಯಣಕ್ಕೆ ಕಾರಣ ಆಯಿತು.
‘ಬಿಗ್ ಬಾಸ್’ ಮನೆಯಲ್ಲಿ ಜಗದೀಶ್ ಅವರು ಇತಿ-ಮಿತಿ ಕಳೆದುಕೊಂಡು ಕೂಗಾಡುತ್ತಿದ್ದರು. ಈ ಕಾರಣಕ್ಕೆ ಅವರನ್ನು ಕನ್ಫೆಷನ್ ರೂಂಗೆ ಬರುವಂತೆ ಬಿಗ್ ಬಾಸ್ ಸೂಚನೆ ನೀಡಿದರು. ಈ ಸೂಚನೆಯನ್ನು ಅವರು ಪಾಲಿಸಿದರು. ಆಗ ಎಲ್ಲವೂ ಸೈಲೆಂಟ್ ಆಗಿಯೇ ಇತ್ತು. ಮರುದಿನ ಮತ್ತೆ ಸ್ಪರ್ಧಿಗಳ ಮಧ್ಯೆ ಕಿತ್ತಾಟ ಶುರವಾಯಿತು. ಎಲ್ಲರೂ ಕಿತ್ತಾಡಿಕೊಳ್ಳೋಕೆ ಆರಂಭಿಸಿದರು. ಆಗ ಬಿಗ್ ಬಾಸ್ ಮಧ್ಯೆ ಬರಬೇಕಾಯಿತು.
ಪರಿಸ್ಥಿತಿ ಕೈ ಕೈ ಮಿಲಾಯಿಸಿಕೊಳ್ಳುವ ಹಂತಕ್ಕೆ ಹೋದಾಗ ಬಿಗ್ ಬಾಸ್ ಮಧ್ಯೆ ಬಂದು ಎಲ್ಲರನ್ನೂ ಕೂರಿಸಿದರು. ಆಗ ಎಲ್ಲವೂ ಸೈಲೆಂಟ್ ಆಯಿತು. ಇದಾದ ಬಳಿಕ ಮಂಜು ಅವರು ಪದೇ ಪದೇ ಜಗದೀಶ್ ಅವರನ್ನು ಕೆಣಕೋಕೆ ಆರಂಭಿಸಿದರು. ಅವರಿಗೆ ಮನೆಯ ಮತ್ತೊಂದಷ್ಟು ಮಂದಿ ಸಾತ್ ಕೊಟ್ಟರು. ತಾವು ಏಕಾಂಗಿ ಎನ್ನುವ ಫೀಲ್ ಜಗದೀಶ್ಗೆ ಬಂದಿತ್ತು.
ಇದನ್ನೂ ಓದಿ: ಬಿಗ್ ಬಾಸ್ನಲ್ಲಿ ರಂಜಿತ್-ಜಗದೀಶ್ ಮಧ್ಯೆ ಫೈಟ್? ಇಬ್ಬರೂ ಔಟ್
ಮಂಜು ಅವರು ಅಷ್ಟೊಂದು ಕೆಣಕದೇ ಇದ್ದಿದ್ದರೆ ಬಹುಶಃ ಜಗದೀಶ್ ಅವರು ಅಷ್ಟೊಂದು ಉಗ್ರ ಸ್ವರೂಪ ತಾಳುತ್ತಿರಲಿಲ್ಲವೇನೋ. ಮುಂದಾಗುವ ಫೈಟ್ಗೆ ಇದುವೇ ಬುನಾದಿ ಹಾಕಿತ್ತು. ಇನ್ನು ಮಾನಸಾ ಹಾಗೂ ಜಗದೀಶ್ ಮಧ್ಯೆ ಕಿತ್ತಾಟ ನಡೆಯುವಾಗ ರಂಜಿತ್, ತ್ರಿವಿಕ್ರಂ ಹಾಗೂ ಮಂಜು ಮಧ್ಯ ಪ್ರವೇಶ ಮಾಡಿದ್ದು ಕೂಡ ತಪ್ಪು ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ. ಈಗ ಜಗದೀಶ್ ಹಾಗೂ ಮಂಜು ನಿಜಕ್ಕೂ ಹೊರ ಹೋಗಿದ್ದಾರೆ ಎನ್ನುವ ಪ್ರಶ್ನೆ ಮೂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.