‘ಜಗದೀಶ್ ಮನೆಗೆ ಬರಲೇ ಇಲ್ಲ’; ಎಲಿಮಿನೇಷನ್ ಬಗ್ಗೆ ಪತ್ನಿಯ ಪ್ರತಿಕ್ರಿಯೆ
‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಜಗದೀಶ್ ಅವರು ಸಾಕಷ್ಟು ಸದ್ದು ಮಾಡಿದ್ದರು. ಅವರು ಎರಡೇ ವಾರ ಇದ್ದರೂ ಸಾಕಷ್ಟು ಚರ್ಚೆ ಹುಟ್ಟುಹಾಕಿದ್ದರು. ಈಗ ಜಗದೀಶ್ ಅವರು ಬಿಗ್ ಬಾಸ್ ಮನೆಯಿಂದ ಹೊರಹೋಗಿದ್ದಾರೆ ಎನ್ನಲಾಗಿದೆ. ಆದರೆ, ಇದನ್ನು ಅವರ ಪತ್ನಿ ಒಪ್ಪಿಲ್ಲ.
‘ಬಿಗ್ ಬಾಸ್ ಕನ್ನಡ ಸೀಸನ್ 11’ರಿಂದ ಜಗದೀಶ್ ಹಾಗೂ ರಂಜಿತ್ ಎಲಿಮಿನೇಟ್ ಆಗಿದ್ದಾರೆ ಎನ್ನುವ ಸುದ್ದಿ ಜೋರಾಗಿದೆ. ಇಬ್ಬರ ಮಧ್ಯೆ ನಡೆದ ಫೈಟ್ನಿಂದ ಈ ಕಿರಿಕ್ ಆಗಿದೆ ಎಂದು ಹೇಳಲಾಗುತ್ತಿದೆ. ಹೀಗಿರುವಾಗಲೇ ಜಗದೀಶ್ ಅವರು ಮನೆಗೆ ಬಂದಿಲ್ಲ, ಅವರು ನನಗೆ ಯಾವುದೇ ಕರೆಯನ್ನು ಕೂಡ ಮಾಡಿಲ್ಲ ಎಂದಿದ್ದಾರೆ ಅವರ ಪತ್ನಿ. ಇದರಿಂದ ವೀಕ್ಷಕರಲ್ಲಿ ಗೊಂದಲ ಮೂಡಿದೆ.
‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದು ಜಗದೀಶ್ ಅವರು. ಆದರೆ, ಅವರು ಕಿರಿಕ್ ಮಾಡಿಕೊಂಡಿದ್ದಾರೆ. ಮಹಿಳೆಯರ ಬಗ್ಗೆ ಅವಾಚ್ಯ ಶಬ್ದ ಬಳಕೆ ಮಾಡಿದ್ದಾರೆ. ಇದರಿಂದಲೇ ಅವರನ್ನು ಮನೆಯಿಂದ ಹೊರಕ್ಕೆ ಹಾಕಲಾಗಿದೆ ಎಂದು ಹೇಳಲಾಗುತ್ತಿದೆ. ಈ ಕಿರಿಕ್ ಮಿತಿಮೀರಿದ್ದು, ಫೈಟ್ ನಡೆದಿದೆ ಎನ್ನಲಾಗಿದೆ. ಬಿಗ್ ಬಾಸ್ ಮನೆಯಲ್ಲಿರೋ ಕನ್ನಡಿ ಹಾಗೂ ಕ್ಯಾಮೆರಾಗಳಿಗೆ ರಂಜಿತ್ ಹಾಗೂ ಜಗದೀಶ್ ಹಾನಿ ಮಾಡಿದ್ದಾರಂತೆ. ಇದರಿಂದ ಅವರು ಎಲಿಮಿನೇಟ್ ಆಗಿದ್ದಾರೆ ಎನ್ನಲಾಗುತ್ತಿದೆ.
‘ಜಗದೀಶ್ ಹೊರಕ್ಕೆ ಬಂದಿದ್ದು ಗೊತ್ತೇ ಇಲ್ಲ’ ಎಂದು ಜಗದೀಶ್ ಪತ್ನಿ ಹೇಳಿದ್ದಾರೆ. ಅಲ್ಲದೆ, ತಮಗೆ ಕರೆ ಮಾಡಿಲ್ಲ ಎಂದು ಕೂಡ ಅವರು ಹೇಳಿದ್ದಾರೆ. ಆದರೆ, ಜಗದೀಶ್ ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು. ಹೀಗಾಗಿ, ಅವರು ಎಲಿಮಿನೇಟ್ ಆಗಿದ್ದು ಖಚಿತ ಎನ್ನಲಾಗುತ್ತಿದೆ.
ಇದನ್ನೂ ಓದಿ: ಮೋಕ್ಷಿತಾ, ಐಶ್ವರ್ಯಾಗೆ ಶಾಕ್ ನೀಡಿದ ಬಿಗ್ ಬಾಸ್; ಮುಂದಿನ ಆಟ ಇನ್ನೂ ಕಷ್ಟ
ಬಿಗ್ ಬಾಸ್ನಲ್ಲಿ ಈ ಎಪಿಸೋಡ್ ಪ್ರಸಾರ ಕಂಡಿಲ್ಲ. ಹೀಗಾಗಿ, ಇದನ್ನು ಮನೆಯ ಸದಸ್ಯರು ಓಪನ್ ಆಗಿ ಹೇಳಿಕೊಳ್ಳೋಕೆ ಬರಲ್ಲ. ಹೀಗಾಗಿ, ಜಗದೀಶ್ ಪತ್ನಿ ಈ ರೀತಿಯ ಹಾರಿಕೆ ಉತ್ತರ ಕೊಟ್ಟಿರಬಹುದು ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.