ಮೋಕ್ಷಿತಾ, ಐಶ್ವರ್ಯಾಗೆ ಶಾಕ್ ನೀಡಿದ ಬಿಗ್ ಬಾಸ್; ಮುಂದಿನ ಆಟ ಇನ್ನೂ ಕಷ್ಟ

ಕಿರುತೆರೆ ನಟಿಯರಾದ ಮೋಕ್ಷಿತಾ ಪೈ ಮತ್ತು ಐಶ್ವರ್ಯಾ ಸಿಂಧೋಗಿ ಅವರಿಗೆ ಬಿಗ್ ಬಾಸ್​ ಮನೆಯಲ್ಲಿ ದೊಡ್ಡ ಶಾಕ್ ನೀಡಲಾಗಿದೆ. ಇದರಿಂದಾಗಿ ಅವರಿಗೆ ಸಖತ್ ಕಷ್ಟ ಆಗಲಿದೆ. ತ್ರಿವಿಕ್ರಮ್ ತೆಗೆದುಕೊಂಡ ಒಂದು ನಿರ್ಧಾರದಿಂದಾಗಿ ಈ ನಟಿಯರಿಗೆ ಇಂಥ ಪರಿಸ್ಥಿತಿ ಬಂದಿದೆ. ಮೂರನೇ ವಾರದಲ್ಲಿ ಬಿಗ್ ಬಾಸ್ ಆಟಕ್ಕೆ ಹೊಸ ಹೊಸ ಟ್ವಿಸ್ಟ್​ಗಳು ಸಿಗುತ್ತಿವೆ.

ಮೋಕ್ಷಿತಾ, ಐಶ್ವರ್ಯಾಗೆ ಶಾಕ್ ನೀಡಿದ ಬಿಗ್ ಬಾಸ್; ಮುಂದಿನ ಆಟ ಇನ್ನೂ ಕಷ್ಟ
ಮೋಕ್ಷಿತಾ ಪೈ, ಐಶ್ವರ್ಯಾ ಸಿಂಧೋಗಿ
Follow us
|

Updated on: Oct 16, 2024 | 10:50 PM

‘ಬಿಗ್ ಬಾಸ್​ ಕನ್ನಡ ಸೀಸನ್​ 11’ ಕಾರ್ಯಕ್ರಮದಲ್ಲಿ ಸ್ಪರ್ಧಿಗಳ ನಡುವೆ ಕಿತ್ತಾಟವೇ ಜಾಸ್ತಿ ಆಗಿದೆ. ಈ ನಡುವೆ ಮನೆಯ ದಿನಸಿ ವಸ್ತುಗಳು ಖಾಲಿ ಆಗಿವೆ. ಮತ್ತೆ ದಿನಸಿ ವಸ್ತುಗಳನ್ನು ಮರಳಿ ನೀಡಬೇಕು ಎಂದರೆ ಬಿಗ್ ಬಾಸ್ ಕೆಲವು ಕಂಡಿಷನ್​ ಹಾಕಿದ್ದಾರೆ. ಆಯ್ದ ಕೆಲವು ಸ್ಪರ್ಧಿಗಳು ಒಂದಷ್ಟು ವಸ್ತುಗಳನ್ನು ತ್ಯಾಗ ಮಾಡಬೇಕು. ಭವ್ಯಾ ಗೌಡ ಮತ್ತು ಮೋಕ್ಷಿತಾ ಪೈ ಅವರು ಮೇಕಪ್ ಕಿಟ್ ತ್ಯಾಗ ಮಾಡಿದರು. ನಂತರ ಮೋಕ್ಷಿತಾ ಮತ್ತು ಐಶ್ವರ್ಯಾ ಅವರಿಗೆ ಎದುರಾಗಿದ್ದು ರಿಯಲ್ ಶಾಕ್. ಆ ಬಗ್ಗೆ ಇಲ್ಲಿದೆ ವಿವರ.

ಕಳೆದ ಎರಡು ಎಪಿಸೋಡ್​ನಿಂದ ಬಿಗ್ ಬಾಸ್​ ಆದೇಶಗಳು ಟೆಲಿಫೋನ್ ಮೂಲಕ ಬರುತ್ತಿವೆ. ಒಬ್ಬೊಬ್ಬರನ್ನು ಕರೆದು ಒಂದೊಂದು ರೀತಿಯಲ್ಲಿ ಸೂಚನೆಗಳನ್ನು ನೀಡಿದ್ದಾರೆ. ತ್ರಿವಿಕ್ರಮ್ ಅವರನ್ನು ಕರೆದು, ‘ಈ ಮನೆಯಲ್ಲಿ ಇರಲು ಯೋಗ್ಯತೆ ಇಲ್ಲದ ಇಬ್ಬರ ಹೆಸರನ್ನು ಸೂಚಿಸಿ’ ಎಂದರು. ಆಗ ತ್ರಿವಿಕ್ರಮ್ ಅವರು ಮೋಕ್ಷಿತಾ ಪೈ ಮತ್ತು ಐಶ್ವರ್ಯಾ ಸಿಂಧೋಗಿ ಅವರ ಹೆಸರನ್ನು ಹೇಳಿದರು.

‘ಮೋಕ್ಷಿತಾ ಪೈ ಮತ್ತು ಐಶ್ವರ್ಯಾ ಸಿಂಧೋಗಿ ಅವರಿಗೆ ಸಂಬಂಧಿಸಿದ ಯಾವುದೇ ವಸ್ತುಗಳು ಕೂಡ ಈ ಮನೆಯಲ್ಲಿ ಇರಬಾರದು. ಎಲ್ಲವನ್ನೂ ತಂದು ಸ್ಟೋರ್​ ರೂಮ್​ನಲ್ಲಿ ಇರಿಸಿ’ ಎಂದು ಬಿಗ್​ ಬಾಸ್ ಕಡೆಯಿಂದ ಆದೇಶ ಬಂತು. ‘ಒಂದು ಕ್ಲಿಪ್ ಕೂಡ ಇರಬಾರದು’ ಎಂದು ತ್ರಿವಿಕ್ರಮ್ ಹೇಳಿದರು. ಇದರಿಂದಾಗಿ ಮೋಕ್ಷಿತಾ ಹಾಗೂ ಐಶ್ವರ್ಯಾ ಅವರಿಗೆ ಬಿಗ್ ಬಾಸ್ ಮನೆಯಲ್ಲಿ ಕಾಲ ಕಳೆಯುವುದು ಕಷ್ಟ ಆಗಲಿದೆ.

ಇದನ್ನೂ ಓದಿ: ಅಶ್ಲೀಲವಾಗಿ ಬಿಗ್ ಬಾಸ್ ಶೋ ಬಗ್ಗೆ ಮಾತಾಡಿದ ಜಗದೀಶ್; ಮಿತಿ ಮೀರಿತು ವರ್ತನೆ

ಮೊದಲ ವಾರದಲ್ಲಿ ಯಮುನಾ ಶ್ರೀನಿಧಿ ಅವರು ಬಿಗ್ ಬಾಸ್ ಮನೆಯಿಂದ ಔಟ್ ಆದರು. ಎರಡನೇ ವಾರದಲ್ಲಿ ಯಾವುದೇ ಎಲಿಮಿನೇಷನ್​ ಇರಲಿಲ್ಲ. ಮೂರನೇ ವಾರದಲ್ಲಿ ಖಂಡಿತಾ ಎಲಿಮಿನೇಷನ್​ ಇರಲಿದೆ. ಯಾರು ಹೊರಗೆ ಹೋಗುತ್ತಾರೆ ಎಂಬುದನ್ನು ತಿಳಿಯಲು ವೀಕ್ಷಕರು ವಾರಾಂತ್ಯದ ಎಪಿಸೋಡ್​ಗಾಗಿ ಕಾದಿದ್ದಾರೆ. ಜಗಳಗಳ ನಡುವೆ ಬೇರೆ ಯಾವುದೂ ಕೂಡ ಬಿಗ್ ಬಾಸ್ ಮನೆಯಲ್ಲಿ ಹೈಲೈಟ್​ ಆಗುತ್ತಿಲ್ಲ. ಪ್ರತಿ ಮಾತಿಗೂ ಜಗಳ ಆಗುತ್ತಿದೆ. ದೊಡ್ಮನೆ ಸದಸ್ಯರ ಜಗಳಕ್ಕೆ ಸ್ವತಃ ಬಿಗ್ ಬಾಸ್​ ಸುಸ್ತಾಗಿದ್ದಾರೆ. ಕೆಲವು ಸ್ಪರ್ಧಿಗಳನ್ನು ಉಗ್ರಂ ಮಂಜು ಅವರು ಬೇಕಂತಲೇ ಕೆಣಕಿದ್ದಾರೆ. ಆ ಕಾರಣದಿಂದಲೂ ಜಗಳ ಜಾಸ್ತಿ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಆಂಧ್ರಪ್ರದೇಶದಲ್ಲಿ 16ನೇ ಶತಮಾನದ ಆಂಜನೇಯ ದೇವಾಲಯಕ್ಕೆ ಹಾನಿ
ಆಂಧ್ರಪ್ರದೇಶದಲ್ಲಿ 16ನೇ ಶತಮಾನದ ಆಂಜನೇಯ ದೇವಾಲಯಕ್ಕೆ ಹಾನಿ
ಚೆನ್ನೈನಲ್ಲಿ ಭಾರೀ ಮಳೆ; ಪ್ರವಾಹದ ನೀರಿನಿಂದ ಎಂಜಿನಿಯರಿಂಗ್ ಕಾಲೇಜು ಜಲಾವೃತ
ಚೆನ್ನೈನಲ್ಲಿ ಭಾರೀ ಮಳೆ; ಪ್ರವಾಹದ ನೀರಿನಿಂದ ಎಂಜಿನಿಯರಿಂಗ್ ಕಾಲೇಜು ಜಲಾವೃತ
ಬಿಜೆಪಿ, ಜೆಡಿಎಸ್ ಸಂಸದರು ಕೇಂದ್ರದ ಮುಂದೆ ತುಟಿಬಿಚ್ಚಲ್ಲ: ಸಿದ್ದರಾಮಯ್ಯ
ಬಿಜೆಪಿ, ಜೆಡಿಎಸ್ ಸಂಸದರು ಕೇಂದ್ರದ ಮುಂದೆ ತುಟಿಬಿಚ್ಚಲ್ಲ: ಸಿದ್ದರಾಮಯ್ಯ
ನೂರೈವತ್ತು ಜನಕ್ಕೆ ತಯಾರಿಸಿದ ಬಾಡೂಟ ಸೀಜ್ ಮಾಡಿದ ಚುನಾವಣಾಧಿಕಾರಿಗಳು
ನೂರೈವತ್ತು ಜನಕ್ಕೆ ತಯಾರಿಸಿದ ಬಾಡೂಟ ಸೀಜ್ ಮಾಡಿದ ಚುನಾವಣಾಧಿಕಾರಿಗಳು
ಮುಡಾ ಪ್ರಕರಣ ಮತ್ತು ಈಡಿ ನಡುವೆ ಎಲ್ಲಿಯ ಸಂಬಂಧ? ಸಂತೋಷ್ ಲಾಡ್, ಸಚಿವ
ಮುಡಾ ಪ್ರಕರಣ ಮತ್ತು ಈಡಿ ನಡುವೆ ಎಲ್ಲಿಯ ಸಂಬಂಧ? ಸಂತೋಷ್ ಲಾಡ್, ಸಚಿವ
ಜಗಳಗಳೇ ತುಂಬಿದ್ದ ಬಿಗ್​ಬಾಸ್ ಮನೆಯಲ್ಲಿ ಮಗುವಿನ ಅಳು
ಜಗಳಗಳೇ ತುಂಬಿದ್ದ ಬಿಗ್​ಬಾಸ್ ಮನೆಯಲ್ಲಿ ಮಗುವಿನ ಅಳು
ಟಿಕೆಟ್ ಸಿಗದಿದ್ದರೆ ಕಾರ್ಯಕರ್ತರು ಹೇಳಿದಂತೆ ಕೇಳುವೆ: ಸಿಪಿ ಯೋಗೇಶ್ವರ್
ಟಿಕೆಟ್ ಸಿಗದಿದ್ದರೆ ಕಾರ್ಯಕರ್ತರು ಹೇಳಿದಂತೆ ಕೇಳುವೆ: ಸಿಪಿ ಯೋಗೇಶ್ವರ್
ನಿರಂತರ ಮಳೆಗೆ ಗಿಡದಲ್ಲಿಯೇ ಕೊಳೆಯುತ್ತಿರೋ ದಾಳಿಂಬೆ; ಕಂಗಾಲಾದ ರೈತರು
ನಿರಂತರ ಮಳೆಗೆ ಗಿಡದಲ್ಲಿಯೇ ಕೊಳೆಯುತ್ತಿರೋ ದಾಳಿಂಬೆ; ಕಂಗಾಲಾದ ರೈತರು
ಸಿದ್ದರಾಮಯ್ಯರನ್ನು ಸಿಲುಕಿಸುವ ಪ್ರಯತ್ನದಲ್ಲಿ ಬಿಜೆಪಿ ಸಫಲವಾಗಲ್ಲ:ನಾಗೇಂದ್ರ
ಸಿದ್ದರಾಮಯ್ಯರನ್ನು ಸಿಲುಕಿಸುವ ಪ್ರಯತ್ನದಲ್ಲಿ ಬಿಜೆಪಿ ಸಫಲವಾಗಲ್ಲ:ನಾಗೇಂದ್ರ
ಸಿದ್ದರಾಮಯ್ಯ ಅತ್ಯಾಪ್ತ ಮರಿಗೌಡರನ್ನು ನಿಜಕ್ಕೂ ಅನಾರೋಗ್ಯ ಕಾಡುತ್ತಿದೆಯೇ?
ಸಿದ್ದರಾಮಯ್ಯ ಅತ್ಯಾಪ್ತ ಮರಿಗೌಡರನ್ನು ನಿಜಕ್ಕೂ ಅನಾರೋಗ್ಯ ಕಾಡುತ್ತಿದೆಯೇ?