ದೊಡ್ಮನೆಯಿಂದ ಹೊರ ಬಂದ ಜಗದೀಶ್? ಬಿಗ್ ಬಾಸ್ ವಿರುದ್ಧ ಅವಾಚ್ಯ ಬಳಸಿದ್ದಕ್ಕೆ ಶಿಕ್ಷೆ?

‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಕಿತ್ತಾಟ ಜೋರಾಗಿದೆ. ಇದರಿಂದ ಇಡೀ ಮನೆಯ ವಾತಾವರಣ ಹದಗೆಡುತ್ತಿದೆ. ಪ್ರತಿ ವಿಚಾರಕ್ಕೆ ಜಗದೀಶ್ ಅವರು ಮೂಗು ತೂರಿಸುತ್ತಿದ್ದಾರೆ. ಇದು ಮನೆಯವರಿಗೆ ಇಷ್ಟ ಆಗುತ್ತಿಲ್ಲ. ಜಗದೀಶ್ ಹಾಗೂ ಮಂಜು ಏಕವಚನದಲ್ಲಿ ಕೂಗಾಡಿಕೊಂಡಿದ್ದಾರೆ. ಹೀಗಿರುವಾಗಲೇ ಅವರು ಮನೆಯಿಂದ ಹೊರ ಹೋಗಿದ್ದಾರೆ ಎನ್ನಲಾಗುತ್ತಿದೆ.

ದೊಡ್ಮನೆಯಿಂದ ಹೊರ ಬಂದ ಜಗದೀಶ್? ಬಿಗ್ ಬಾಸ್ ವಿರುದ್ಧ ಅವಾಚ್ಯ ಬಳಸಿದ್ದಕ್ಕೆ ಶಿಕ್ಷೆ?
ಜಗದೀಶ್
Follow us
ರಾಜೇಶ್ ದುಗ್ಗುಮನೆ
|

Updated on:Oct 16, 2024 | 1:00 PM

‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಜಗದೀಶ್ ಅವರು ಸಾಕಷ್ಟು ಸದ್ದು ಮಾಡಿದ್ದರು. ಅವರು ಎರಡೇ ವಾರ ಇದ್ದರೂ ಸಾಕಷ್ಟು ಚರ್ಚೆ ಹುಟ್ಟುಹಾಕಿದ್ದರು. ಈಗ ಜಗದೀಶ್ ಅವರು ಬಿಗ್ ಬಾಸ್ ಮನೆಯಿಂದ ಹೊರಹೋಗಿದ್ದಾರೆ ಎನ್ನಲಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಹೀಗೊಂದು ಚರ್ಚೆ ನಡೆದಿದೆ. ಅವರನ್ನು ಕೆಲವರು ಸಾರ್ವಜನಿಕವಾಗಿ ನೋಡಿದ್ದಾರೆ ಎನ್ನಲಾಗಿದೆ.

‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಜಗದೀಶ್ ಅವರು ದೊಡ್ಮನೆಯಲ್ಲಿ ಸಾಕಷ್ಟು ಕಿರಿಕ್ ಮಾಡಿಕೊಂಡಿದ್ದರು. ಅಕ್ಟೋಬರ್ 15ರ ಎಪಿಸೋಡ್​ನಲ್ಲಿ ಅವರು ಬಿಗ್ ಬಾಸ್​ ವಿರುದ್ಧವೇ ಅವಾಚ್ಯ ಶಬ್ದ ಬಳಕೆ ಮಾಡಿದ್ದರು. ಇದು ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು. ಈಗ ಅವರು ಬಿಗ್ ಬಾಸ್​ನಿಂದಲೇ ಔಟ್ ಆಗಿದ್ದಾರೆ.

ಬಿಗ್ ಬಾಸ್​ನಲ್ಲಿ ಜಗದೀಶ್ ಅವರ ಮಿತಿಮೀರಿದ ವರ್ತನೆ ಅನೇಕರಿಗೆ ಇಷ್ಟ ಆಗಿಲ್ಲ. ಈಗ ಅವರು ಹೊರ ಹೋಗುತ್ತಿದ್ದಂತೆ ಮನೆಯಲ್ಲಿ ಶಾಂತಿಯ ವಾತಾವರಣ ನಿರ್ಮಾಣ ಆಗಲಿದೆಯೇ ಎನ್ನುವ ಕುತೂಹಲ ಮೂಡಿದೆ. ಇದರ ಜೊತಗೆ ಅವರು ಹೋಗಿದ್ದು ಏಕೆ ಎನ್ನುವ ಪ್ರಶ್ನೆಯೂ ಕಾಡಿದೆ.

ಜಗದೀಶ್ ಅವರು ಈ ಮೊದಲು ‘ಬಿಗ್ ಬಾಸ್’ ವಿರುದ್ಧವೇ ಅವಾಚ್ಯ ಶಬ್ದ ಬಳಕೆ ಮಾಡಿದ್ದರು. ಬಿಗ್ ಬಾಸ್​ನ ಬೈದಿದ್ದರು. ಇದನ್ನು ಬಿಗ್ ಬಾಸ್ ಸಹಿಸಿಲ್ಲ ಎಂದು ಹೇಳಲಾಗುತ್ತಿದೆ. ಈ ಮಧ್ಯೆ ‘ಬಿಗ್ ಬಾಸ್’ ಮಿಡ್ ವೀಕ್ ಎಲಿಮಿನೇಷನ್ ನಡೆಯಬಹುದು ಎಂಬ ಎಚ್ಚರಿಕೆಯನ್ನೂ ನೀಡಿದ್ದರು.

ಇದನ್ನೂ ಓದಿ: ಹದಗೆಡುತ್ತಲೇ ಇದೆ ಮನೆಯ ವಾತಾವರಣ; ಸಿಟ್ಟಲ್ಲಿ ಕೂಗಾಡಿದ ಬಿಗ್ ಬಾಸ್

ಕಳೆದ ವಾರ ಬಿಗ್ ಬಾಸ್​ನಲ್ಲಿ ಯಾವುದೇ ಎಲಿಮಿನೇಷನ್ ನಡೆದಿಲ್ಲ. ಈ ವಾರದ ಮಧ್ಯದಲ್ಲಿ ಎಲಿಮಿನೇಷನ್ ನಡೆಯಬಹುದು ಎಂದು ಹೇಳಲಾಗಿತ್ತು. ಆ ಎಲಿಮಿನೇಷನ್ ನಡೆದಿದೆಯೇ ಎಂಬ ಪ್ರಶ್ನೆ ವೀಕ್ಷಕರದ್ದು. ಇನ್ನು, ದೊಡ್ಮನೆಯಲ್ಲಿ ಹೊಡೆದಾಟ ನಡೆದಿದೆ ಎಂದುಕೂಡ ಹೇಳಲಾಗುತ್ತಿದೆ. ರಂಜಿತ್ ಕೂಡ ಔಟ್ ಆಗಿದ್ದಾರೆ ಎನ್ನಲಾಗಿದೆ. ಇದಕ್ಕೆ ಇಂದಿನ ಎಪಿಸೋಡ್​ನಲ್ಲಿ ಉತ್ತರ ಸಿಗಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 12:47 pm, Wed, 16 October 24