ಜಗದೀಶ್​ನ ಚಪ್ಪಲಿಗೆ ಹೋಲಿಕೆ ಮಾಡಿದ ಗೋಲ್ಡ್ ಸುರೇಶ್

‘ಬಿಗ್ ಬಾಸ್ ಕನ್ನಡ ಸೀಸನ್​ 11’ ಕಾರ್ಯಕ್ರಮದಲ್ಲಿ ಲಾಯರ್ ಜಗದೀಶ್ ವರ್ತನೆ ಮಿತಿ ಮೀರಿದೆ. ಮಂಗಳವಾರದ ಎಪಿಸೋಡ್​ನಲ್ಲಿ ಅವರು ಕೆಲವು ಅಶ್ಲೀಲ ಪದಗಳನ್ನು ಕೂಡ ಬಳಸಿದ್ದಾರೆ. ಕ್ಯಾಮೆರಾ ಮುಂದೆ ನಿಂತು ಅವರು ಕಾರ್ಯಕ್ರಮವನ್ನು ಟೀಕಿಸಿದ್ದಾರೆ.

ಜಗದೀಶ್​ನ ಚಪ್ಪಲಿಗೆ ಹೋಲಿಕೆ ಮಾಡಿದ ಗೋಲ್ಡ್ ಸುರೇಶ್
ಜಗದೀಶ್
Follow us
ರಾಜೇಶ್ ದುಗ್ಗುಮನೆ
|

Updated on:Oct 16, 2024 | 7:01 AM

‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಜಗದೀಶ್ ಅವರ ವರ್ತನೆ ಮಿತಿ ಮೀರುತ್ತಿದೆ. ಅವರು ಬೇಕಂತಲೇ ಎಲ್ಲರನ್ನೂ ಕೆರಳಿಸುತ್ತಿದ್ದಾರೆ. ಇದು ಅನೇಕರ ಕೋಪಕ್ಕೆ ಕಾರಣ ಆಗಿದೆ. ಈ ಮಧ್ಯೆ ಅವರು ಬಿಗ್ ಬಾಸ್ ವಿರುದ್ಧ ಅಶ್ಲೀಲ ಪದ ಬಳಕೆ ಮಾಡಿದ್ದಾರೆ. ಮನೆ ಮಂದಿಗೆ ಬಿಗ್ ಬಾಸ್​ ಬಗ್ಗೆ ವಿಶೇಷ ಪ್ರೀತಿ ಇದೆ. ಈ ಕಾರಣಕ್ಕೆ ಯಾರೊಬ್ಬರೂ ಇದನ್ನು ಸಹಿಸಿಲ್ಲ. ಇಡೀ ಮನೆ ಜಗದೀಶ್ ವಿರುದ್ಧ ಒಂದಾಗಿದೆ.

ಜಗದೀಶ್ ಅವರು ಬಿಗ್ ಬಾಸ್ ವಿರುದ್ಧವೇ ಅವಾಚ್ಯ ಶಬ್ದ ಬಳಕೆ ಮಾಡಿದ್ದಾರೆ. ಇದಕ್ಕೆ ಬಿಗ್ ಬಾಸ್ ಬೀಪ್ ಹಾಕಿದ್ದಾರೆ. ಮನೆಯಲ್ಲಿ ಯಾರೂ ತಮ್ಮನ್ನು ಗೌರವಿಸುತ್ತಿಲ್ಲ ಅನ್ನೋದು ಅವರ ವಾದ. ಈ ಕಾರಣಕ್ಕೆ ಮತ್ತೆ ಮನೆಯಿಂದ ಹೊರ ಹೋಗುವುದಾಗಿ ಪಣ ತೊಟ್ಟಿದ್ದಾರೆ. ಅವರ ವಿರುದ್ಧ ಇಡೀ ಮನೆ ಒಂದಾಗಿದೆ.

ಮಂಜು ಅವರು ಜಗದೀಶ್​ಗೆ ಬುದ್ಧಿ ಹೇಳುವ ಪ್ರಯತ್ನ ಮಾಡಿದರು. ‘ಇಲ್ಲಿನ ಅನ್ನ ತಿಂದಿದ್ದಕ್ಕಾದರೂ ಬಿಗ್ ಬಾಸ್ ಬಗ್ಗೆ ನೀಯತ್ತಾಗಿ ಇರಬೇಕು’ ಎಂದು ಮಂಜು ಪಾಠ ಮಾಡಿದರು. ಆದರೆ, ಇದನ್ನು ಕೇಳಿಸಿಕೊಳ್ಳುವ ವ್ಯವಧಾನ ಅವರಿಗೆ ಇರಲಿಲ್ಲ. ಆ ಬಳಿಕ ಶಿಶಿರ್ ಅವರು ಜಗದೀಶ್​ನ ಸಮಾಧಾನ ಮಾಡುವ ಪ್ರಯತ್ನ ಮಾಡಿದರು.

ನಂತರ ಚೈತ್ರಾ ಹಾಗೂ ಜಗದೀಶ್ ಮಧ್ಯೆ ಮಾತಿನ ಫೈಟ್ ನಡೆಯಿತು. ಚೈತ್ರಾ ಅವರ ಕೇಸ್ ಬಗ್ಗೆ ಮಾತನಾಡಿ ಕಿರಿಕ್ ಮಾಡಿಕೊಂಡರು. ಆ ಬಳಿಕ ಜಗದೀಶ್ ಅವರಿಗೆ ಬಿಗ್ ಬಾಸ್ ಕನ್​ಫೆಷನ್​ ರೂಂಗೆ ಬರುವಂತೆ ಹೇಳಿದರು. ಅಲ್ಲಿ ಹೋಗಿ ಕೆಲ ಹೊತ್ತು ಕೂತರು ಜಗದೀಶ್.

ಇದನ್ನೂ ಓದಿ: ಅಶ್ಲೀಲವಾಗಿ ಬಿಗ್ ಬಾಸ್ ಶೋ ಬಗ್ಗೆ ಮಾತಾಡಿದ ಜಗದೀಶ್; ಮಿತಿ ಮೀರಿತು ವರ್ತನೆ

ಆ ಸಂದರ್ಭದಲ್ಲಿ ಇಡೀ ಮನೆ ಜಗದೀಶ್ ಬಗ್ಗೆ ಚರ್ಚೆ ನಡೆಸಿತು. ‘ನನಗೆ ಬಹಳ ಸಿಟ್ಟು ಬರುತ್ತಿದೆ. ಎಷ್ಟು ಅಂತ ಕಂಟ್ರೋಲ್ ಮಾಡೋಕೆ ಆಗುತ್ತೆ. ಅವರು ಮತ್ತೆ ಕಿರಿಕ್ ಮಾಡಿದ್ರೆ ನಾನು ಅವರ ಎದೆಮೇಲೆ ಕಾಲಿಟ್ಟೇ ಹೋಗೋದು’ ಎಂದು ರಂಜಿತ್ ಶಪಥ ಮಾಡಿದರು. ಗೋಲ್ಡ್ ಸುರೇಶ್ ಅವರು ಜಗದೀಶ್ ಬಳಿ ಮಾತನಾಡುತ್ತಿಲ್ಲ. ‘ನನ್ನ ತಪ್ಪು, ಚಪ್ಪಲಿನ ಎಲ್ಲಿ ಬಿಡಬೇಕೋ ಅಲ್ಲಿಯೇ ಬಿಡಬೇಕಿತ್ತು’ ಎಂದು ಸಿಟ್ಟಿನಿಂದ ಹೇಳಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 6:58 am, Wed, 16 October 24