AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಶ್ಲೀಲವಾಗಿ ಬಿಗ್ ಬಾಸ್ ಶೋ ಬಗ್ಗೆ ಮಾತಾಡಿದ ಜಗದೀಶ್; ಮಿತಿ ಮೀರಿತು ವರ್ತನೆ

ಜಗದೀಶ್ ಅವರು ಈ ಮೊದಲು ಕೂಡ ಬಿಗ್ ಬಾಸ್ ಬಗ್ಗೆ ಹಗುರವಾಗಿ ಮಾತನಾಡಿದ್ದರು. ಈಗ ಅವರು ಅಶ್ಲೀಲವಾಗಿ ಮಾತನಾಡಿದ್ದಾರೆ. ಅವರ ಮಾತುಗಳಿಂದ ಇನ್ನುಳಿದ ಸದಸ್ಯರಿಗೆ ಕೋಪ ಬಂದಿದೆ. ಉಗ್ರಂ ಮಂಜು ಅವರು ಉಗ್ರಾವರಾತ ತಾಳಿದ್ದಾರೆ. ರಂಜಿತ್ ಕೂಡ ಜಗದೀಶ್ ವಿರುದ್ಧ ತಿರುಗಿ ಬಿದ್ದಿದ್ದಾರೆ. ಪರಿಸ್ಥಿತಿ ಕೈ ಮೀರಿದ್ದರಿಂದ ಸ್ವತಃ ಬಿಗ್ ಬಾಸ್ ಮಧ್ಯ ಪ್ರವೇಶ ಮಾಡಿದ್ದಾರೆ.

ಅಶ್ಲೀಲವಾಗಿ ಬಿಗ್ ಬಾಸ್ ಶೋ ಬಗ್ಗೆ ಮಾತಾಡಿದ ಜಗದೀಶ್; ಮಿತಿ ಮೀರಿತು ವರ್ತನೆ
ಜಗದೀಶ್
ಮದನ್​ ಕುಮಾರ್​
|

Updated on: Oct 15, 2024 | 10:19 PM

Share

‘ಬಿಗ್ ಬಾಸ್ ಕನ್ನಡ ಸೀಸನ್​ 11’ ಕಾರ್ಯಕ್ರಮದಲ್ಲಿ ಲಾಯರ್ ಜಗದೀಶ್ ವರ್ತನೆ ಮಿತಿ ಮೀರಿದೆ. ಮಂಗಳವಾರದ (ಅಕ್ಟೋಬರ್ 15) ಎಪಿಸೋಡ್​ನಲ್ಲಿ ಅವರು ಕೆಲವು ಅಶ್ಲೀಲ ಪದಗಳನ್ನು ಕೂಡ ಬಳಸಿದ್ದಾರೆ. ಕ್ಯಾಮೆರಾ ಮುಂದೆ ನಿಂತು ಅವರು ಕಾರ್ಯಕ್ರಮವನ್ನು ಟೀಕಿಸಿದ್ದಾರೆ. ಅವರು ಹೇಳಿದ ಕೆಲವು ಪದಗಳಿಗೆ ಬೀಪ್ ಹಾಕಲಾಗಿದೆ. ಜಗದೀಶ್ ಇಷ್ಟು ಕೆಟ್ಟದಾಗಿ ಮಾತನಾಡಿದ್ದಕ್ಕೆ ದೊಡ್ಮನೆಯ ಬೇರೆ ಸದಸ್ಯರಿಗೆ ಬೇಸರ ಆಗಿದೆ. ಜಗದೀಶ್ ಎದುರು ರಂಜಿತ್, ಉಗ್ರಂ ಮಂಜು ಅವರು ಉಗ್ರ ರೂಪ ತಾಳಿದ್ದಾರೆ. ಮನೆಯ ಕ್ಯಾಪ್ಟನ್ ಶಿಶಿರ್ ಅವರು ಪರಿಸ್ಥಿತಿ ಸುಧಾರಿಸಲು ಕಷ್ಟಪಟ್ಟಿದ್ದಾರೆ.

‘ನಿನ್ನ ಪ್ರೋಗ್ರಾಂ ನೀನೇ ಮಾಡಿಕೋ. ನಾನು ಹೊರಗೆ ಹೋಗ್ತೀನಿ. ಇಮೇಜ್​ಗೆ ಡ್ಯಾಮೇಜ್ ಮಾಡಿಕೊಂಡು ನಾನು ಇಲ್ಲಿ ಇರಲ್ಲ. ಹೊರಗೆ ನೂರು ಜನಕ್ಕೆ ನಾನು ಊಟ ಹಾಕಿದ್ದೇನೆ. ಇಲ್ಲಿ ಊಟಕ್ಕೆ ರೂಲ್ಸ್ ಮಾಡ್ತಾರೆ. ಈಗಲೇ ಬಾಗಿಲು ತೆರೆಯಿರಿ. ನಾನು ನೇರವಾಗಿ ಹೊರಗೆ ಹೋಗುತ್ತೇನೆ. ಕಿರಿಕ್ ಮಾಡಿಕೊಂಡು ಮಜಾ ತೆಗೆದುಕೊಳ್ಳುವವರಿಗೆ ಬೆಲೆ ಜಾಸ್ತಿ. ಬಿಟ್ಟರೆ ನಾನು ಬ್ಯಾಗ್ ತೆಗೆದುಕೊಂಡು ಹೋಗುತ್ತೇನೆ’ ಎಂದು ಜಗದೀಶ್ ಹೇಳಿದ್ದಾರೆ.

ಜಗದೀಶ್ ಅವರಿಂದ ಪದೇ ಪದೇ ಈ ರೀತಿ ವರ್ತನೆ ಬಂದಿದ್ದಕ್ಕೆ ಬೇರೆ ಸ್ಪರ್ಧಿಗಳಿಗೆ ಕೋಪ ಬಂದಿದೆ. ಆದರೆ ತಮ್ಮನ್ನು ಖಂಡಿಸಿದವರ ವಿರುದ್ಧವೂ ಜಗದೀಶ್ ತಿರುಗಿ ಬಿದ್ದಿದ್ದಾರೆ. ‘ನನ್ನ ತಕರಾರು ಇರುವುದು ಬಿಗ್ ಬಾಸ್ ಬಳಿ. ನೀವು ಯಾರೂ ಮಾತನಾಡಬೇಕಿಲ್ಲ. ಟೈಮ್​ ಪಾಸ್​ ಮಾಡಲು ನಾನು ಬಂದಿಲ್ಲ. ಇಲ್ಲಿ ಬಂದು ಪರ್ಫಾರ್ಮೆನ್ಸ್​ ಮಾಡಿದ್ದೇನೆ. ನಾನು ಗುಲಾಮಗಿರಿ ಮಾಡಲ್ಲ. ಬಿಗ್ ಬಾಸ್​ ಮನೆಯಿಂದ ನಾನು ಹೀರೋ ಆಗಬೇಕಿಲ್ಲ. 50 ಲಕ್ಷ ರೂಪಾಯಿ ಆಸೆ ನನಗೆ ಇಲ್ಲ. ಕಪ್​ ಗೆಲ್ಲುವುದು ಕೂಡ ಬೇಕಿಲ್ಲ’ ಎಂದಿದ್ದಾರೆ ಜಗದೀಶ್​.

ಇದನ್ನೂ ಓದಿ: ‘ಇವರ ಅಪ್ಪನಿಗೆ ಹೊಡೆದು ನಾನು ಕೇಸ್ ಹಾಕಿಸಿಕೊಂಡಿಲ್ಲ’: ಜಗದೀಶ್​ಗೆ ಚೈತ್ರಾ ಕ್ಲಾಸ್

ಈ ಹಿಂದೆ ಕೂಡ ಬಿಗ್ ಬಾಸ್ ಶೋ ಬಗ್ಗೆ ಜಗದೀಶ್ ಅವರು ಕೆಟ್ಟದಾಗಿ ಮಾತನಾಡಿದ್ದರು. ಹೊರಗೆ ಹೋಗಿ ಈ ಕಾರ್ಯಕ್ರಮವನ್ನು ಬಯಲಿಗೆ ಎಳೆಯುವುದಾಗಿ ಅವರು ಹೇಳಿದ್ದರು. ಆದರೆ ಅದನ್ನು ಒಂದು ಜೋಕ್ ರೀತಿಯಲ್ಲಿ ಸುದೀಪ್ ಟ್ರೀಟ್ ಮಾಡಿದ್ದರು. ತಾನಾಗಿಯೇ ಹೊರಗೆ ಹೋಗುತ್ತೇನೆ ಎಂದರೂ ಕೂಡ ಜಗದೀಶ್ ಅವರಿಗೆ ಸಮಾಧಾನ ಮಾಡಿ ಬಿಗ್ ಬಾಸ್ ಕೂರಿಸಿದ್ದರು. ಆದರೆ ಈ ವಾರ ಬಿಗ್ ಬಾಸ್ ನಿರ್ಧಾರ ಏನಾಗಿರಲಿದೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ. ಸದ್ಯಕ್ಕಂತೂ ಇದು ಸೂಕ್ಷ್ಮ ವಿಷಯ ಆಗಿರುವುದರಿಂದ ಬೇರೆ ಸದಸ್ಯರು ಈ ವಿಚಾರದಲ್ಲಿ ತಲೆ ಹಾಕುವುದು ಬೇಡ ಎಂದು ಬಿಗ್ ಬಾಸ್​ ಆದೇಶ ನೀಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.