ಚೈತ್ರಾ ಮೇಲಿನ ಪ್ರಕರಣದ ಲೆಕ್ಕ ಕೊಟ್ಟ ಜಗದೀಶ್; ‘ನಿಮ್ಮಪ್ಪನಿಗೆ ಹುಟ್ಟಿದ್ರೆ..’ ಎಂದು ಲೇಡಿ ಸ್ಪರ್ಧಿ ಸವಾಲ್  

ಹೊರ ಜಗತ್ತಿನಲ್ಲಿ ಮಾತುಗಾರ್ತಿ ಎಂದು ಗುರುತಿಸಿಕೊಂಡ ಚೈತ್ರಾ ಕುಂದಾಪುರ ಅವರ ‘ಬಿಗ್​ ಬಾಸ್​ ಕನ್ನಡ ಸೀಸನ್​ 11’ ರಿಯಾಲಿಟಿ ಶೋನಲ್ಲಿ ತಮ್ಮದೇ ರೀತಿ ಹೈಲೈಟ್ ಆಗುತ್ತಿದ್ದಾರೆ. ಅವರು ಈಗ ಒಂದು ವಿಚಾರದಲ್ಲಿ ಜಗದೀಶ್ ವಿರುದ್ಧ ತೊಡೆ ತಟ್ಟಿ ನಿಂತಿದ್ದಾರೆ.

ಚೈತ್ರಾ ಮೇಲಿನ ಪ್ರಕರಣದ ಲೆಕ್ಕ ಕೊಟ್ಟ ಜಗದೀಶ್; ‘ನಿಮ್ಮಪ್ಪನಿಗೆ ಹುಟ್ಟಿದ್ರೆ..’ ಎಂದು ಲೇಡಿ ಸ್ಪರ್ಧಿ ಸವಾಲ್  
ಚೈತ್ರಾ-ಜಗದೀಶ್
Follow us
ರಾಜೇಶ್ ದುಗ್ಗುಮನೆ
|

Updated on: Oct 15, 2024 | 2:28 PM

‘ಬಿಗ್ ಬಾಸ್ ಕನ್ನಡ ಸೀಸನ್ 11’ರ ಸ್ಪರ್ಧಿಗಳ ಪಟ್ಟಿ ರಿವೀಲ್ ಆದಾಗ ಅಚ್ಚರಿ ಎನಿಸಿದ್ದು ಚೈತ್ರಾ ಕುಂದಾಪುರ ಅವರ ಹೆಸರು. ಸಾಕಷ್ಟು ವಿವಾದ ಮಾಡಿಕೊಂಡಿದ್ದ ಅವರು ಬಿಗ್ ಬಾಸ್ ಮನೆಗೆ ಹೋದ ಬಳಿಕ ಸೈಲೆಂಟ್ ಆಗಿದ್ದರು. ಚೈತ್ರಾ ಹೊರಗಡೆ ಮಾಡಿಕೊಂಡ ವಿವಾದಗಳು ಒಂದೆರಡಲ್ಲ. ಬಿಗ್ ಬಾಸ್​ನಲ್ಲಿ ಇದರ ಲೆಕ್ಕವನ್ನು ಜಗದೀಶ್ ಅವರು ನೀಡಿದ್ದಾರೆ. ಇದರಿಂದ ಇಬ್ಬರ ಮಧ್ಯೆ ದೊಡ್ಡ ಜಗಳವೇ ನಡೆದು ಹೋಗಿದೆ.

ಚೈತ್ರಾ ತಮ್ಮ ಸಹೋದರಿ ಎಂದು ಹೇಳಿಕೊಳ್ಳುತ್ತಾ ಬರುತ್ತಿದ್ದವರು ಜಗದೀಶ್. ಇದಕ್ಕೆ ಹಲವು ಕಾರಣಗಳು ಇದ್ದವು. ಇಬ್ಬರೂ ಜೈಲಿಗೆ ಹೋಗಿ ಬಂದಿದ್ದರು. ಇದನ್ನು ಜಗದೀಶ್ ಅವರು ಹೆಚ್ಚು ಹೈಲೈಟ್ ಮಾಡುತ್ತಾ ಇದ್ದರು. ಈಗ ಅವರು ಚೈತ್ರಾ ವಿರುದ್ಧವೇ ತಿರುಗಿ ಬಿದ್ದಿದ್ದಾರೆ. ಕಲರ್ಸ್ ಕನ್ನಡದಲ್ಲಿ ಈ ಕುರಿತು ಹೊಸ ಪ್ರೋಮೋ ಹಾಕಲಾಗಿದೆ.

ಚೈತ್ರಾ ಹಾಗೂ ಜಗದೀಶ್ ಮಧ್ಯೆ ಯಾವುದೋ ವಿಚಾರಕ್ಕೆ ಕಿರಿಕ್ ಆಗಿದೆ. ‘ನನಗೆ ಫಾಲೋವರ್ಸ್ ಇದಾರೆ. ಆಕೆ ಮೇಲೆ 28 ಕೇಸ್ ಇದೆ’ ಎಂದರು ಜಗದೀಶ್. ಇದು ಚೈತ್ರಾ ಅವರನ್ನು ಕೆರಳಿಸಿತು. ‘ತಾಕತ್ ಇದ್ರೆ ನನ್ನ ಎದುರಿಗೆ ಬಂದು ಮಾತನಾಡಲಿ. ನನ್ ಕೇಸ್ ಬಗ್ಗೆ ಮಾತನಾಡೋ ಅಧಿಕಾರ ಯಾರಿಗೂ ಇಲ್ಲ. 50 ಅಲ್ಲ 100 ಕೇಸ್ ಹಾಕಿಸಿಕೊಳ್ಳುತ್ತೇನೆ. ಇವರಪ್ಪನಿಗೆ ಹೊಡೆದು ಕೇಸ್ ಹಾಕಿಸಿಕೊಂಡಿಲ್ಲ. ಅಪ್ಪನಿಗೆ ಹುಟ್ಟಿದ್ರೆ ನನ್ನ ಎದುರು ಬಂದು ಮಾತನಾಡಲಿ’ ಎಂದು ಸವಾಲು ಹಾಕಿದ್ದಾರೆ ಚೈತ್ರಾ.

ಇದನ್ನೂ ಓದಿ: ಮಾತಿನ ಭರಾಟೆಯಲ್ಲಿ ಕೇಳಿಸಿಕೊಳ್ಳಲು ಸೋಲುತ್ತಿರುವ ಚೈತ್ರಾ ಕುಂದಾಪುರ

ಕುಂದಾಪುರದ ಉದ್ಯಮಿಗೆ ಬಿಜೆಪಿ ಟಿಕೆಟ್ ಕೊಡಿಸೋ ಭರವಸೆ ನೀಡಿ ಹಣ ಪಡೆದ ಆರೋಪ ಚೈತ್ರಾ ಮೇಲೆ ಇದೆ. ಈ ಕೇಸ್​ನಲ್ಲಿ ಅವರು ಜೈಲಿನಿಂದ ಜಾಮೀನು ಪಡೆದು ಹೊರ ಬಂದಿದ್ದಾರೆ. ಇತ್ತೀಚೆಗೆ ಅವರು ಬಿಗ್ ಬಾಸ್ ಮನೆಯಲ್ಲಿ ಸೈಲೆಂಟ್ ಆಗಿದ್ದರು. ‘ನೀವು ಮಾತನಾಡಬೇಕು’ ಎಂದು ಜನರಿಂದ ಪತ್ರ ಬಂದ ಬಳಿಕ ಅವರು ವೈಲೆಂಟ್ ಆಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ
ಮೆಟ್ರೋನಲ್ಲಿ ಪ್ರಯಾಣಿಸುವ ಮನೋವಿಕಾರ ವ್ಯಕ್ತಿಗಳ ಸಂಖ್ಯೆ ಹೆಚ್ಚುತ್ತಿದೆ
ಮೆಟ್ರೋನಲ್ಲಿ ಪ್ರಯಾಣಿಸುವ ಮನೋವಿಕಾರ ವ್ಯಕ್ತಿಗಳ ಸಂಖ್ಯೆ ಹೆಚ್ಚುತ್ತಿದೆ
ಶಾಟ್ ಸರ್ಕ್ಯೂಟ್ ನಿಂದ ಅಗ್ನಿ ಅವಘಡ ಸಂಭವಿಸಿರುವ ಗುಮಾನಿ
ಶಾಟ್ ಸರ್ಕ್ಯೂಟ್ ನಿಂದ ಅಗ್ನಿ ಅವಘಡ ಸಂಭವಿಸಿರುವ ಗುಮಾನಿ
ನಮ್ಮಣ್ಣ ಹುಟ್ಟೇ ಇರಲಿಲ್ಲ ಅಂತ ಸರ್ಕಾರ ಹೇಳಬಹುದು: ಸಚಿನ್ ಸಹೋದರಿ
ನಮ್ಮಣ್ಣ ಹುಟ್ಟೇ ಇರಲಿಲ್ಲ ಅಂತ ಸರ್ಕಾರ ಹೇಳಬಹುದು: ಸಚಿನ್ ಸಹೋದರಿ
ಹುಲಿ ಹಿಂಸ್ರಪಶುವಾದರೂ ತನ್ನ ಮರಿಗಳ ವಿಷಯದಲ್ಲಿ ಮಮತಾಮಯಿ
ಹುಲಿ ಹಿಂಸ್ರಪಶುವಾದರೂ ತನ್ನ ಮರಿಗಳ ವಿಷಯದಲ್ಲಿ ಮಮತಾಮಯಿ
ಐಶ್ವರ್ಯಾಗೆ ಲೈನ್ ಹೊಡೀತಿದ್ರಾ ಧನರಾಜ್? ಪತ್ನಿಗೆ ಮೂಡಿದೆ ಅನುಮಾನ
ಐಶ್ವರ್ಯಾಗೆ ಲೈನ್ ಹೊಡೀತಿದ್ರಾ ಧನರಾಜ್? ಪತ್ನಿಗೆ ಮೂಡಿದೆ ಅನುಮಾನ
ಕಾಶಿ ಕ್ಷೇತ್ರಕ್ಕೆ ಹೋದಾಗ ಏನನ್ನು ಬಿಟ್ಟು ಬಂದರೆ ಒಳ್ಳೆಯದು?
ಕಾಶಿ ಕ್ಷೇತ್ರಕ್ಕೆ ಹೋದಾಗ ಏನನ್ನು ಬಿಟ್ಟು ಬಂದರೆ ಒಳ್ಳೆಯದು?