ಮಾತಿನ ಭರಾಟೆಯಲ್ಲಿ ಕೇಳಿಸಿಕೊಳ್ಳಲು ಸೋಲುತ್ತಿರುವ ಚೈತ್ರಾ ಕುಂದಾಪುರ
ಚೈತ್ರಾ ಕುಂದಾಪುರ ಅವರಿಗೆ ಮೂರನೇ ವಾರದ ಕ್ಯಾಪ್ಟೆನ್ ಆಗಲು ಸಾಧ್ಯವಾಗಿಲ್ಲ. ಮಾತಿನ ಕಾರಣದಿಂದ ಅವರು ಇನ್ನುಳಿದ ಸ್ಪರ್ಧಿಗಳ ಟೀಕೆಗೆ ಗುರಿ ಆಗುತ್ತಿದ್ದಾರೆ. ಅವರು ಕ್ಯಾಪ್ಟೆನ್ಸಿ ಟಾಸ್ಕ್ ಆಡಬಾರದು ಎಂದು ಬಹುತೇಕರು ಹೇಳಿದರು. ಅದಕ್ಕೆ ಕಾರಣ ನೀಡಿದ್ದು ಕೂಡ ಮಾತಿನ ಸಮಸ್ಯೆ. ಚೈತ್ರಾಗೆ ಇತರರ ಮಾತು ಕೇಳಿಸಿಕೊಳ್ಳುವ ತಾಳ್ಮೆ ಇಲ್ಲ ಎಂಬುದೇ ಮೈನಸ್ ಪಾಯಿಂಟ್.
ಹೊರ ಜಗತ್ತಿನಲ್ಲಿ ಮಾತುಗಾರ್ತಿ ಎಂದು ಗುರುತಿಸಿಕೊಂಡ ಚೈತ್ರಾ ಕುಂದಾಪುರ ಅವರ ‘ಬಿಗ್ ಬಾಸ್ ಕನ್ನಡ ಸೀಸನ್ 11’ ರಿಯಾಲಿಟಿ ಶೋನಲ್ಲಿ ತಮ್ಮದೇ ರೀತಿ ಹೈಲೈಟ್ ಆಗುತ್ತಿದ್ದಾರೆ. ಕ್ಯಾಪ್ಟನ್ ಆಗಬೇಕು ಎಂಬ ಆಸೆ ಅವರಿಗೆ ಇದೆ. ಅವರು ಕ್ಯಾಪ್ಟನ್ ಆಗಬೇಕೋ ಬೇಡವೋ ಎಂಬ ಬಗ್ಗೆ ಚರ್ಚೆ ನಡೆಯಿತು. ಆಗ ಅವರು ತಮ್ಮ ಮಾತುಗಾರಿಕೆಯಿಂದ ಕ್ಯಾಪ್ಟೆನ್ಸಿ ಟಾಸ್ಕ್ಗೆ ಅರ್ಹತೆ ಪಡೆಯಲು ಪ್ರಯತ್ನಿಸಿದರು. ಗೌತಮಿ ಜಾದವ್, ಉಗ್ರಂ ಮಂಜು, ಶಿಶಿರ್ ಮುಂತಾದವರು ಚೈತ್ರಾ ಅವರ ಅರ್ಹತೆಯನ್ನು ಟೀಕಿಸಿದರು.
ಮಾತಿನಲ್ಲಿ ತಾವು ಮುಂದಿದ್ದೇವೆ ಎಂಬುದನ್ನೇ ಮುಖ್ಯವಾಗಿಟ್ಟುಕೊಂಡು ಚೈತ್ರಾ ಕುಂದಾಪುರ ಅವರು ಎಲ್ಲರ ಮೇಲೆ ಹಿಡಿಯ ಸಾಧಿಲು ನೋಡುತ್ತಿದ್ದಾರೆ. ಆದ್ರೆ ಆ ಮಾತೇ ಅವರಿಗೆ ಮುಳುವಾಗುವ ಸಾಧ್ಯತೆ ಕೂಡ ಇದೆ. ಎಲ್ಲ ವಿಷಯದಲ್ಲೂ ಮಾತನಾಡುವ ಅವರಿಂದಾಗಿ ಇನ್ನುಳಿದ ಸ್ಪರ್ಧಿಗಳಿಗೆ ಕಿರಿಕಿರಿ ಆಗಿದೆ. ಅದನ್ನು ಅನೇಕರು ನೇರವಾಗಿಯೇ ಹೇಳಿದ್ದಾರೆ. ಶುಕ್ರವಾರದ ಸಂಚಿಕೆಯಲ್ಲೂ ಅದು ರಿಪೀಟ್ ಆಯ್ತು.
ಚೈತ್ರಾ ಕುಂದಾಪುರ ಅವರಿಗೆ ಕೇಳಿಸಿಕೊಳ್ಳುವ ತಾಳ್ಮೆ ಇಲ್ಲ ಎಂದು ಶಿಶಿರ್ ಹೇಳಿದ್ದಾರೆ. ಒಂದು ವೇಳೆ ಚೈತ್ರಾ ಕ್ಯಾಪ್ಟನ್ ಆದರೆ ಅನಗತ್ಯವಾಗಿ ಮಾತಿನ ಮಳೆ ಸುರಿಸುತ್ತಾರೆ ಎಂಬ ಅಭಿಪ್ರಾಯ ಹಲವರಿಗೆ ಇದೆ. ‘ಚೈತ್ರಾಗೆ ತಾಳ್ಮೆ ಕಡಿಮೆ’ ಎಂದು ರಂಜಿತ್ ಮತ್ತು ಧರ್ಮ ಕೀರ್ತಿರಾಜ್ ಅವರು ಹೇಳಿದ್ದಾರೆ. ‘ಚೈತ್ರಾ ಕುಂದಾಪುರ ಅವರು ಮಾತನಾಡುವಾಗ ಬೇರೆಯವರ ಧ್ವನಿ ಕೇಳಿಸಲ್ಲ. ಬೇರೆಯವರ ಮಾತನ್ನು ಅವರು ಕೇಳಿಸಿಕೊಳ್ಳಲ್ಲ’ ಎಂದು ಹಂಸಾ ಹೇಳಿದ್ದಾರೆ.
ಇದನ್ನೂ ಓದಿ: ಜಗದೀಶ್ ಎದುರು ಮಾತಾಡಲು ಸಾಧ್ಯವಾಗದೇ ಸೋತ ಚೈತ್ರಾ ಕುಂದಾಪುರ; ಆಗಿದ್ದೇನು?
ಕಡೆಗೂ ಹೆಚ್ಚು ಓಟ್ ಬಂದಿದ್ದರಿಂದ ಕ್ಯಾಪ್ಟೆನ್ಸಿ ಟಾಸ್ಕ್ನಲ್ಲಿ ಗೌತಮಿ ಜಾದವ್, ಶಿಶಿರ್ ಜೊತೆ ಸ್ಪರ್ಧಿಸುವ ಅವಕಾಶ ಚೈತ್ರಾ ಕುಂದಾಪುರ ಅವರಿಗೆ ಸಿಕ್ಕಿತು. ಆದ್ರೆ ಇದು ಫಿಸಿಕಲ್ ಟಾಸ್ಕ್ ಆದ್ದರಿಂದ ಚೈತ್ರಾ ಅವರು ಗೆಲ್ಲಲು ಸಾಧ್ಯವಾಗಲಿಲ್ಲ. ಹಾಗಾಗಿ ಅವರಿಗೆ ಕ್ಯಾಪ್ಟನ್ ಆಗಲು ಸಾಧ್ಯವಾಗಲಿಲ್ಲ. ಮನೆಯ ಒಳಗೆ ಇರುವ ಹಲವರಿಂದ ಚೈತ್ರಾಗೆ ವಿರೋಧ ವ್ಯಕ್ತವಾಗುತ್ತಿದೆ. ಮುಂದಿನ ದಿನಗಳಲ್ಲಿ ಅವರು ತಮ್ಮ ಮಾತಿನ ಶೈಲಿ ಬದಲಾಯಿಸಿಕೊಂಡರೆ ಮಾತ್ರ ಜನರ ಮನಸ್ಸು ಗೆಲ್ಲಲು ಸಾಧ್ಯ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.