ಬಿಗ್ ಬಾಸ್ನಲ್ಲಿ ಈ ವಾರ ಇರಲ್ಲ ಯಾವುದೇ ಎಲಿಮಿನೇಷನ್; ಕಾರಣ ಏನು?
ಕಳೆದ ನವರಾತ್ರಿ ಸಂದರ್ಭದಲ್ಲಿ ಬಿಗ್ ಬಾಸ್ ಯಾವುದೇ ಎಲಿಮಿನೇಷನ್ ಮಾಡಿರಲಿಲ್ಲ. ಎಲಿಮಿನೇಷನ್ ಪ್ರಕ್ರಿಯೆ ನಡೆಸಿದ್ದರೂ ಕೊನೆಯಲ್ಲಿ ಡ್ರಾಮಾ ಮಾಡಿ ಸ್ಪರ್ಧಿಗಳನ್ನು ಹಿಂದಕ್ಕೆ ಕರೆಯಲಾಯಿತು. ಈ ಬಾರಿಯೂ ಅದೇ ರೀತಿಯಲ್ಲಿ ನಡೆಯಬಹುದು ಎಂದು ಊಹಿಸಿಲಾಗಿದೆ.
‘ಬಿಗ್ ಬಾಸ್ ಕನ್ನಡ ಸೀಸನ್ 11’ರ ಎರಡನೇ ವಾರಾಂತ್ಯಕ್ಕೆ ಸ್ಪರ್ಧಿಗಳು ರೆಡಿ ಆಗಿದ್ದಾರೆ. ಈಗಾಗಲೇ ಸ್ಪರ್ಧಿಗಳ ಮಧ್ಯೆ ಸಾಕಷ್ಟು ಕಾಂಪಿಟೇಷನ್ ಮೂಡಿದ್ದು, 16 ಮಂದಿ ಮಾತ್ರ ಉಳಿದುಕೊಂಡಿದ್ದಾರೆ. ಈ ವಾರ ಬಹುತೇಕರು ನಾಮಿನೇಟ್ ಆಗಿದ್ದು, ಹೊರ ಹೋಗುವವರು ಯಾರು ಎನ್ನುವ ಪ್ರಶ್ನೆ ಮೂಡಿದೆ. ಈ ಬಾರಿ ಯಾವುದೇ ಎಲಿಮಿನೇಷನ್ ಇರುವುದಿಲ್ಲ ಎನ್ನುವ ಮಾತು ಕೂಡ ಕೇಳಿ ಬಂದಿದೆ.
ಈ ವಾರ ನಿಯಮ ಬ್ರೇಕ್ ಮಾಡಿ ಬಿಗ್ ಬಾಸ್ನಲ್ಲಿ ಎಲ್ಲರೂ ನಾಮಿನೇಟ್ ಆದರು. ನಂತರ ಬಿಗ್ ಬಾಸ್ ನಾಮಿನೇಷನ್ನಿಂದ ಬಚಾವ್ ಆಗಲು ಕೆಲವು ಚಾನ್ಸ್ ಕೊಟ್ಟರು. ಅಂತಿಮವಾಗಿ ಭವ್ಯಾ ಗೌಡ, ಧನರಾಜ್, ಧರ್ಮ ಕೀರ್ತಿರಾಜ್, ರಂಜಿತ್, ತ್ರಿವಿಕ್ರಂ, ಮಾನಸಾ, ಐಶ್ವರ್ಯಾ, ಗೋಲ್ಡ್ ಸುರೇಶ್, ಹಂಸಾ, ಜಗದೀಶ್, ಅನುಷಾ ರೈ ನಾಮಿನೇಷನ್ ಲಿಸ್ಟ್ನಲ್ಲಿ ಇದ್ದಾರೆ.
ಹಾಗಾದರೆ ಇವರ ಪೈಕಿ ಹೊರ ಹೋಗುವವರು ಯಾರು? ಈ ಪ್ರಶ್ನೆಗೆ ಉತ್ತರ ಸಿಗಬೇಕು ಎಂದರೆ ಭಾನುವಾರ (ಅಕ್ಟೋಬರ್ 13) ರಾತ್ರಿವರೆಗೆ ಕಾಯಲೇಬೇಕು. ಈ ವಾರ ನಾಮಿನೇಷನ್ ಇಲ್ಲದೆಯೂ ಇರಬಹುದು ಎಂದು ಕೆಲವರು ಅಭಿಪ್ರಾಯವನ್ನು ಹೊರಹಾಕಿದ್ದಾರೆ. ಏಕೆಂದರೆ ಜಿಯೋ ಸಿನಿಮಾದಲ್ಲಿ ಈವರೆಗೆ ಯಾವುದೇ ವೋಟಿಂಗ್ ಲೈನ್ ಬಿಟ್ಟಿಲ್ಲ.
ಕಳೆದ ನವರಾತ್ರಿ ಸಂದರ್ಭದಲ್ಲಿ ಬಿಗ್ ಬಾಸ್ ಯಾವುದೇ ಎಲಿಮಿನೇಷನ್ ಮಾಡಿರಲಿಲ್ಲ. ಎಲಿಮಿನೇಷನ್ ಪ್ರಕ್ರಿಯೆ ನಡೆಸಿದ್ದರೂ ಕೊನೆಯಲ್ಲಿ ಡ್ರಾಮಾ ಮಾಡಿ ಸ್ಪರ್ಧಿಗಳನ್ನು ಹಿಂದಕ್ಕೆ ಕರೆಯಲಾಯಿತು. ಈ ಬಾರಿಯೂ ಅದೇ ರೀತಿಯಲ್ಲಿ ನಡೆಯಬಹುದು ಎಂದು ಊಹಿಸಿಲಾಗಿದೆ. ಇಂದು (ಅಕ್ಟೋಬರ್ 12) ಸುದೀಪ್ ಈ ಬಗ್ಗೆ ಅನೌನ್ಸ್ ಕೂಡ ಮಾಡಬಹುದು.
ಇದನ್ನೂ ಓದಿ: ರಾತ್ರೋರಾತ್ರಿ ಬಿಗ್ ಬಾಸ್ ಮನೆ ಅಸ್ತವ್ಯಸ್ತ; ಮಾಸ್ಕ್ ಧರಿಸಿದ ವ್ಯಕ್ತಿಗಳಿಂದ ವಸ್ತುಗಳಿಗೆ ಹಾನಿ
ಸದ್ಯ ಇರುವ ಎಲ್ಲರೂ ಸ್ಟ್ರಾಂಗ್ ಸ್ಪರ್ಧಿಗಳು ಎನಿಸಿಕೊಂಡಿದ್ದಾರೆ. ಯಾರೇ ಎಲಿಮಿನೇಟ್ ಆದರೂ ಅದು ಮನೆಗೆ ನಷ್ಟವೇ. ಈ ಕಾರಣಕ್ಕೆ ಈ ಬಾರಿ ಯಾವುದೇ ಎಲಿಮಿನೇಷನ್ ನಡೆಸದೇ ಇರಲು ನಿರ್ಧರಿಸಲಾಗಿದೆಯೇ ಎನ್ನುವ ಪ್ರಶ್ನೆ ಮೂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.