‘ಜಗದೀಶ್ ಇಷ್ಟು ದಿನ ಯಾವ ದೃಷ್ಟಿಯಲ್ಲಿ ನೋಡಿದಾರೆ ಎಂಬುದು ನೆನಸಿಕೊಂಡ್ರೆ ಸಿಟ್ಟು ಬರುತ್ತದೆ’; ಗೌತಮಿ ಅಸಮಾಧಾನ

ಗೌತಮಿ ಅವರು ಕಣ್ಣೀರು ಹಾಕುತ್ತಾ ಬಂದು ಮೋಕ್ಷಿತಾ ಬಳಿ ಈ ಬಗ್ಗೆ ಮಾತನಾಡಿದ್ದಾರೆ. ‘ಗೌತಮಿಯವರ ಬಗ್ಗೆ ಜಗದೀಶ್ ಕೆಟ್ಟದಾಗಿ ಮಾತನಾಡಿದ್ದರ ಬಗ್ಗೆ ಇಲ್ಲಿ ಮಾತನಾಡಲಾಗುತ್ತಿದೆ’ ಎಂದು ತೋರಿಸಲಾಗಿದೆ. ಅವರು ಮಾಡಿರುವ ಕಮೆಂಟ್ ಏನು ಎಂಬುದನ್ನು ತೋರಿಸಿಲ್ಲ.

‘ಜಗದೀಶ್ ಇಷ್ಟು ದಿನ ಯಾವ ದೃಷ್ಟಿಯಲ್ಲಿ ನೋಡಿದಾರೆ ಎಂಬುದು ನೆನಸಿಕೊಂಡ್ರೆ ಸಿಟ್ಟು ಬರುತ್ತದೆ’; ಗೌತಮಿ ಅಸಮಾಧಾನ
ಜಗದೀಶ್-ಗೌತಮಿ
Follow us
ರಾಜೇಶ್ ದುಗ್ಗುಮನೆ
|

Updated on:Oct 12, 2024 | 12:00 PM

ಬಿಗ್ ಬಾಸ್ ಮನೆಯಲ್ಲಿ ಲಾಯರ್ ಜಗದೀಶ್ ಅವರು ಬೇಕಾಬಿಟ್ಟಿ ನಡೆದುಕೊಳ್ಳುತ್ತಿದ್ದಾರೆ ಎಂದು ಕೆಲವರು ಆರೋಪಿಸಿದ್ದು ಇದೆ. ಅವರು ಕೋಪ ಮಾಡಿಕೊಂಡರೆ ಇಡೀ ಮನೆ ನಡುಗುತ್ತದೆ. ಅದೇ ರೀತಿ ಅವರು ಸಾಕಷ್ಟು ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದೂ ಇದೆ. ಈಗ ಅವರು ಗೌತಮಿ ಜಾಧವ್ ಬಗ್ಗೆ ಕೆಟ್ದಾಗಿ ಕಮೆಂಟ್ ಮಾಡಿ ಚರ್ಚೆ ಆಗಿದ್ದಾರೆ. ಈ ಬಗ್ಗೆ ಬಿಗ್ ಬಾಸ್ ಮನೆಯಲ್ಲಿ ಜೋರಾಗಿ ಚರ್ಚೆ ನಡೆದಿದೆ.

ಬಿಗ್ ಬಾಸ್ ಎಂದಾಗ ವಿವಾದಗಳು ಸಾಮಾನ್ಯ. ಈಗಾಗಲೇ ‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಸಾಕಷ್ಟು ವಿವಾದಗಳು ನಡೆದು ಹೋಗಿವೆ. ಅದೇ ರೀತಿ ಗೌತಮಿ ಬಗ್ಗೆ ಜಗದೀಶ್ ಕೆಟ್ಟದಾಗಿ ಮಾತನಾಡಿದ್ದಾರೆ ಎನ್ನಲಾಗಿದೆ. ಅದು ಏನು ಎಂಬುದನ್ನು ರಿವೀಲ್ ಮಾಡಿಲ್ಲ. ವಿವಾದ ಆಗಬಾರದು ಎನ್ನುವ ಕಾರಣಕ್ಕೆ ಈ ರೀತಿ ಮಾಡಲಾಗಿದೆ ಎನ್ನಲಾಗಿದೆ.

ಗೌತಮಿ ಅವರು ಕಣ್ಣೀರು ಹಾಕುತ್ತಾ ಬಂದು ಮೋಕ್ಷಿತಾ ಬಳಿ ಈ ಬಗ್ಗೆ ಮಾತನಾಡಿದ್ದಾರೆ. ‘ಗೌತಮಿಯವರ ಬಗ್ಗೆ ಜಗದೀಶ್ ಕೆಟ್ಟದಾಗಿ ಮಾತನಾಡಿದ್ದರ ಬಗ್ಗೆ ಇಲ್ಲಿ ಮಾತನಾಡಲಾಗುತ್ತಿದೆ’ ಎಂದು ತೋರಿಸಲಾಗಿದೆ. ಅವರು ಮಾಡಿರುವ ಕಮೆಂಟ್ ಏನು ಎಂಬುದನ್ನು ತೋರಿಸಿಲ್ಲ. ಗೌತಮಿ ಕಣ್ಣೀರು ಹಾಕುವಾಗ ಮೋಕ್ಷಿತಾ ಸಮಾಧಾನ ಮಾಡುವ ಪ್ರಯತ್ನ ಮಾಡಿದ್ದಾರೆ.

‘ಜಗದೀಶ್ ಅವರು ಹೇಳಬೇಕು ಎಂದು ಹೇಳಿರುವುದಿಲ್ಲ. ನಿಮಗೇ ಗೊತ್ತಲ್ಲ, ಅವರು ಏನು ಮಾತಾಡ್ತಾರೆ ಎನ್ನುವುದು ಅವರಿಗೆ ಗೊತ್ತಾಗಲ್ಲ’ ಎಂದರು ಮೋಕ್ಷಿತಾ. ಜಗದೀಶ್ ಬಗ್ಗೆ ಗೌತಮಿ ಕೋಪ ಹೊರಹಾಕಿದರು. ‘ಅವರು ಕಂಟೆಂಟಿಂಗೆ ನಮ್ಮನ್ನು ಬೆಳೆಸಿಕೊಳ್ಳೋದು ಸರಿ ಅಲ್ಲ. ಅವರು ಯಾವ ದೃಷ್ಟಿಯಲ್ಲಿ ನೋಡಿದಾರೆ ಎಂಬುದು ನೆನಸಿಕೊಂಡ್ರೆ ಸಿಟ್ಟು ಬರುತ್ತದೆ. ಈ ರೀತಿ ಆದಾಗ ಮೊದಲು ಅಳು ಬರುತ್ತದೆ. ಆಮೇಲೆ ಸರಿಯಾದ ಸಮಯ ನೋಡಿಕೊಂಡು ತಿರುಗೇಟು ಕೊಡ್ತೀನಿ’ ಎಂದರು ಗೌತಮಿ.

ಇದನ್ನೂ ಓದಿ: ಮೋಕ್ಷಿತಾ ಯಾರಿಗೂ ಕಡಿಮೆ ಇಲ್ಲ; ಸೈಲೆಂಟ್​ ಆಗಿರೋ ನಟಿಯ ಮತ್ತೊಂದು ಮುಖ ನೋಡಿದ ಜಗದೀಶ್

‘ಎಲ್ಲರೂ ನೋಡ್ತಾರೆ ಅನ್ನೋದು ಗೊತ್ತು. ಕೆಲವರು ಹೇಳೋದಿಲ್ಲ. ಕಮೆಂಟ್ ಮಾಡುವಷ್ಟು ಧೈರ್ಯ ನೀನು ಮಾಡ್ತೀಯಾ ಅಂದ್ರೆ ಕೈಕೊಂಡು ಕೂರುವಳು ನಾನಲ್ಲ. ನೀನಾಗೆ ಹಳ್ಳ ತೋಡಿಕೊಂಡಿದ್ದೀಯಾ. ನಾನು ಕೊಡ್ತೀನಿ’ ಎಂದು ಗೌತಮಿ ಅವರು ಸಿಟ್ಟು ಹೊರಹಾಕಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 11:59 am, Sat, 12 October 24