ಮೋಕ್ಷಿತಾ ಯಾರಿಗೂ ಕಡಿಮೆ ಇಲ್ಲ; ಸೈಲೆಂಟ್​ ಆಗಿರೋ ನಟಿಯ ಮತ್ತೊಂದು ಮುಖ ನೋಡಿದ ಜಗದೀಶ್

‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ 16 ಸ್ಪರ್ಧಿಗಳ ಮಧ್ಯೆ ಆಟ ಮುಂದುವರಿದಿದೆ. ಸ್ಪರ್ಧಿಗಳಿಗೆ ಎಲಿಮಿನೇಷನ್ ಬಗ್ಗೆ ಹೆಚ್ಚು ಆತಂಕ ವ್ಯಕ್ತವಾಗಿದೆ. ಈ ಮಧ್ಯೆ ಜಗದೀಶ್ ಅವರು ಬಾಯಿಗೆ ಬಂದಂತೆ ಮಾತನಾಡುತ್ತಾ ಕಿರುಚಾಡುತ್ತಿದ್ದಾರೆ. ಇವರನ್ನು ಎದುರಿಸೋಕೆ ಉಗ್ರಂ ಮಂಜು ಇದ್ದಾರೆ. ಅದರ ಜೊತೆಗೆ ಮೋಕ್ಷಿತಾ ಪೈ ಕೂಡ ಜಗದೀಶ್ ವಿರುದ್ಧ ಮಾತಿಗೆ ನಿಲ್ಲುತ್ತಿದ್ದಾರೆ.

ಮೋಕ್ಷಿತಾ ಯಾರಿಗೂ ಕಡಿಮೆ ಇಲ್ಲ; ಸೈಲೆಂಟ್​ ಆಗಿರೋ ನಟಿಯ ಮತ್ತೊಂದು ಮುಖ ನೋಡಿದ ಜಗದೀಶ್
ಮೋಕ್ಷಿತಾ
Follow us
ರಾಜೇಶ್ ದುಗ್ಗುಮನೆ
|

Updated on: Oct 11, 2024 | 6:48 AM

‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಸ್ಪರ್ಧಿಗಳ ಮಧ್ಯೆ ಕಿತ್ತಾಟ ಜೋರಾಗಿದೆ. ಎಲ್ಲರೂ ಕಿತ್ತಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಕೇವಲ ಎರಡನೇ ವಾರಕ್ಕೆ ಒಬ್ಬರನ್ನು ಕಂಡರೆ ಮತ್ತೊಬ್ಬರಿಗೆ ಆಗುವುದೇ ಇಲ್ಲ ಎನ್ನುವ ಪರಿಸ್ಥಿತಿ ನಿರ್ಮಾಣ ಆಗಿದೆ. ಕೆಲವರು ಸೈಲೆಂಟ್ ಆಗಿರೋದನ್ನು ನೋಡಿ ಅವರ ಮೇಲೆ ದಬ್ಬಾಳಿಕೆ ಮಾಡಲು ಜಗದೀಶ್ ಹೋಗಿದ್ದರು. ಈ ಸಾಲಿನಲ್ಲಿ ಮೋಕ್ಷಿತಾ ಕೂಡ ಇದ್ದರು. ಆದರೆ, ಅವರು ಅಸಲಿಗೆ ಹಾಗಿಲ್ಲ. ಅಗತ್ಯಬಂದಾಗ ಅವರು ಸಿಡಿದೇಳುತ್ತಾರೆ. ಇದು ಜಗದೀಶ್​ಗೆ ಸ್ಪಷ್ಟವಾಗಿ ಅರ್ಥವಾಗಿದೆ.

ಬಿಗ್ ಬಾಸ್​ನಲ್ಲಿ ಕಲಹ ಏರ್ಪಟ್ಟಿತ್ತು. ಸ್ವರ್ಗ ಹಾಗೂ ನರಕದ ಕ್ಯಾಪ್ಟನ್​ಗಳಾದ ಗೌತಮಿ ಹಾಗೂ ಮೋಕ್ಷಿತಾ ಮಾತನಾಡಿ ಸಮಸ್ಯೆ ಪರಿಹರಿಸಿಕೊಳ್ಳಬೇಕು ಎನ್ನುವ ನಿರ್ಧಾರಕ್ಕೆ ಬರಲಾಯಿತು. ಇದರ ಮಧ್ಯೆಯೂ ಜಗದೀಶ್ ಬಂದುಕೊಂಡು ಕೂಗಾಡೋಕೆ ಆರಂಭಿಸಿದರು. ಇದರಿಂದ ಮೋಕ್ಷಿತಾ ಸಿಟ್ಟಾದರು. ಅವರು ಖಡಕ್ ಎಚ್ಚರಿಕೆಯನ್ನು ಕೊಟ್ಟಿದ್ದಾರೆ.

ಇಂಗ್ಲಿಷ್​ನಲ್ಲಿ ಜೋರಾಗಿ ಮಾತನಾಡುತ್ತಾ, ‘ನಾನು ನಿನ್ನ ಮಾತನ್ನು ಕೇಳಲ್ಲ’ ಎಂದರು ಜಗದೀಶ್. ಇದಕ್ಕೆ ಮೋಕ್ಷಿತಾ ಸೈಲೆಂಟ್ ಆಗಿ ಉಳಿದುಕೊಂಡಿಲ್ಲ. ಬದಲಿಗೆ ಖಡಕ್ ಎಚ್ಚರಿಕೆ ಕೊಟ್ಟರು. ಅವರು ಇಷ್ಟು ಸಿಟ್ಟಿನಿಂದ, ಜೋರು ಧ್ವನಿಯಲ್ಲಿ ಮಾತನಾಡಿದ್ದು ಈ ಸೀಸನ್​ನಲ್ಲಿ ಇದೆ ಮೊದಲು. ಅವರ ಖಡಕ್ ಎಚ್ಚರಿಕೆ ಬಳಿಕ ಜಗದೀಶ್ ಅವರು ಬದಿಗೆ ಸರಿದರು.

ಇದನ್ನೂ ಓದಿ: ‘ನಿಮ್ಮ ರೀತಿಯ ಫೂಟೇಜ್ ನನಗೆ ಬೇಡ’; ಮೋಕ್ಷಿತಾ ಮಾತಿಗೆ ಜಗದೀಶ್ ಗಪ್​ಚುಪ್

ಮೋಕ್ಷಿತಾ ಅವರು ನರಕ ತಂಡದ ಕ್ಯಾಪ್ಟನ್ ಆಗಿದ್ದರು. ಒಂದು ಪಂದ್ಯವನ್ನು ಅವರು ಗೆದ್ದರೆ ಮತ್ತೊಂದು ಪಂದ್ಯವನ್ನು ಸೋತಿದ್ದಾರೆ. ಸೋತಾಗ ಜಗದೀಶ್ ಅವರು ಕೋಪ ಹೊರಹಾಕಿದ್ದರು. ಈ ಸೋಲಿಗೆ ಮೋಕ್ಷಿತಾ ಕಾರಣ ಎಂದು ನೇರವಾಗಿ ಆರೋಪಿಸಿದ್ದರು. ಆದರೆ, ಈ ಆರೋಪಗಳನ್ನು ಅವರು ಒಪ್ಪಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.