AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಣ್ಣೆದುರೇ ಈ ತಪ್ಪು ಪದೇ ಪದೇ ನಡೆಯುತ್ತಿದ್ದರೂ ಬಿಗ್ ಬಾಸ್​ ಕಡೆಯಿಂದ ಮೌನವೇಕೆ?

ಬಿಗ್ ಬಾಸ್ ಮನೆಯಲ್ಲಿ ಕನ್ನಡವನ್ನು ಬೆಳೆಸುವ ಕೆಲಸ ಆಗುತ್ತಿದೆ ಎಂದು ವಾಹಿನಿಯವರು ಹೇಳಿಕೊಂಡಿದ್ದಾರೆ. ಈ ಕಾರಣದಿಂದ ಇಂಗ್ಲಿಷ್ ಬಳಕೆ ಮಾಡದೆ ಕೇವಲ ಕನ್ನಡ ಬಳಕೆ ಮಾಡಬೇಕು ಎನ್ನುವ ನಿಯಮ ಇದೆ. ಈ ಮೊದಲಿನ ಸೀಸನ್​ಗಳಲ್ಲಿ ಇಂಗ್ಲಿಷ್ ಮಾತನಾಡಿದಾಗ ಬಿಗ್ ಬಾಸ್ ಎಚ್ಚರಿಕೆ ನೀಡುತ್ತಿದ್ದರು. ಆದರೆ, ಈಗ ಎಲ್ಲವೂ ಬದಲಾಗಿದೆ.

ಕಣ್ಣೆದುರೇ ಈ ತಪ್ಪು ಪದೇ ಪದೇ ನಡೆಯುತ್ತಿದ್ದರೂ ಬಿಗ್ ಬಾಸ್​ ಕಡೆಯಿಂದ ಮೌನವೇಕೆ?
ಬಿಗ್ ಬಾಸ್
ರಾಜೇಶ್ ದುಗ್ಗುಮನೆ
|

Updated on: Oct 11, 2024 | 7:29 AM

Share

‘ಬಿಗ್ ಬಾಸ್’ನಲ್ಲಿ ಹಲವು ಮೂಲ ನಿಯಮಗಳು ಇವೆ. ಅದನ್ನು ಮೀರಿ ಯಾರು ನಡೆದುಕೊಳ್ಳುವಂತಿಲ್ಲ. ನಿದ್ದೆ ಮಾಡಿದರೆ ಅದು ನಿಯಮ ಬ್ರೇಕ್ ಮಾಡಿದಂತೆಯೇ. ಆಗ ಬಿಗ್ ಬಾಸ್ ಎಚ್ಚರಿಸುತ್ತಾರೆ. ಅದೇ ರೀತಿ ಮತ್ತೊಂದ ನಿಯಮ ಇದೆ. ಆದರೆ, ಈ ನಿಯಮವನ್ನು ಯಾರೂ ಅಷ್ಟು ಗಂಭೀರವಾಗಿ ಸ್ವೀಕರಿಸಿದಂತಿಲ್ಲ. ಬಿಗ್ ಬಾಸ್ ಕೂಡ ಈ ಬಗ್ಗೆ ಎಚ್ಚರಿಕೆ ನೀಡುತ್ತಿಲ್ಲವೇಕೆ ಎನ್ನುವ ಪ್ರಶ್ನೆ ಅನೇಕರಿಗೆ ಮೂಡಿದೆ.

ಬಿಗ್ ಬಾಸ್ ಮನೆಯಲ್ಲಿ ಕನ್ನಡವನ್ನು ಬೆಳೆಸುವ ಕೆಲಸ ಆಗುತ್ತಿದೆ ಎಂದು ವಾಹಿನಿಯವರು ಹೇಳಿಕೊಂಡಿದ್ದಾರೆ. ಈ ಕಾರಣದಿಂದ ಇಂಗ್ಲಿಷ್ ಬಳಕೆ ಮಾಡದೆ ಕೇವಲ ಕನ್ನಡ ಬಳಕೆ ಮಾಡಬೇಕು ಎನ್ನುವ ನಿಯಮ ಇದೆ. ಈ ಮೊದಲಿನ ಸೀಸನ್​ಗಳಲ್ಲಿ ಇಂಗ್ಲಿಷ್ ಮಾತನಾಡಿದಾಗ ಬಿಗ್ ಬಾಸ್ ಎಚ್ಚರಿಕೆ ನೀಡುತ್ತಿದ್ದರು. ಆದರೆ, ಈಗ ಎಲ್ಲವೂ ಬದಲಾಗಿದೆ. ಎಷ್ಟೇ ಇಂಗ್ಲಿಷ್ ಬಳಕೆ ಆದರೂ ಬಿಗ್ ಬಾಸ್ ಮಾತನಾಡುತ್ತಿಲ್ಲ, ಎಚ್ಚರಿಕೆಯನ್ನೂ ನೀಡುತ್ತಿಲ್ಲ. ಬಿಗ್ ಬಾಸ್ ಕಡೆಯಿಂದ ಮೌನವೇಕೆ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ.

ಲಾಯರ್ ಜಗದೀಶ್ ಅವರು ಹೆಚ್ಚೆಚ್ಚು ಇಂಗ್ಲಿಷ್ ಬಳಕೆ ಮಾಡುತ್ತಿದ್ದಾರೆ. ಅವರು 10 ಸಾಲುಗಳನ್ನು ಹೇಳಿದರೆ ಇದರಲ್ಲಿ ಅರ್ಧಕ್ಕಿಂತ ಹೆಚ್ಚಿನದ್ದು ಇಂಗ್ಲಿಷ್ ಇರುತ್ತದೆ. ಇದು ವೀಕ್ಷಕರಿಗೆ ಸಾಕಷ್ಟು ಕಿರಿಕಿರಿ ಎನಿಸುತ್ತಿದೆ. ಅವರಿಗೆ ಕನ್ನಡ ಮಾತನಾಡೋಕೆ ಬರುತ್ತದೆ. ಹೀಗಿರುವಾಗ ಕನ್ನಡದಲ್ಲಿ ಮಾತನಾಡಲು ಸಮಸ್ಯೆ ಏನು ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: ಮೋಕ್ಷಿತಾ ಯಾರಿಗೂ ಕಡಿಮೆ ಇಲ್ಲ; ಸೈಲೆಂಟ್​ ಆಗಿರೋ ನಟಿಯ ಮತ್ತೊಂದು ಮುಖ ನೋಡಿದ ಜಗದೀಶ್

ಕೇವಲ ಜಗದೀಶ್ ಮಾತ್ರವಲ್ಲ ಐಶ್ವರ್ಯಾ ಸೇರಿ ಮೊದಲಾದವರು ಇಂಗ್ಲಿಷ್ ಪದ ಬಳಕೆ ಮಾಡುತ್ತಿದ್ದಾರೆ. ಮೋಕ್ಷಿತಾ, ಚೈತ್ರಾ ಕುಂದಾಪುರ್ ಸೇರಿದಂತೆ ಕೆಲವೇ ಕೆಲವರು ಸಂಪೂರ್ಣವಾಗಿ ಕನ್ನಡದಲ್ಲಿ ಮಾತನಾಡಲು ಪ್ರಯತ್ನಿಸುತ್ತಿದ್ದಾರೆ. ನಿಯಮಗಳನ್ನು ಪಾಲನೆ ಮಾಡಬೇಕು ಎಂದು ಹೇಳುವ ಜಗದೀಶ್ ಅವರೇ ಇಂಗ್ಲಿಷ್​ನಲ್ಲಿ ಮಾತನಾಡೋದು ಎಷ್ಟು ಸರಿ ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.