‘ನಿಮ್ಮ ರೀತಿಯ ಫೂಟೇಜ್ ನನಗೆ ಬೇಡ’; ಮೋಕ್ಷಿತಾ ಮಾತಿಗೆ ಜಗದೀಶ್ ಗಪ್​ಚುಪ್

ಜಗದೀಶ್ ಅವರು ಬಿಗ್ ಬಾಸ್ ಮನೆಯಲ್ಲಿ ಮೈಂಡ್​ಗೇಮ್ ಆಡುತ್ತಿದ್ದಾರೆ. ಒಬ್ಬರ ವಿರುದ್ಧ ಮತ್ತೊಬ್ಬರನ್ನು ಎತ್ತಿ ಕಟ್ಟುವ ಕೆಲಸವನ್ನು ಅವರು ಮಾಡುತ್ತಿದ್ದಾರೆ. ಈ ಕಾರಣಕ್ಕೆ ಅವರು ಸಾಕಷ್ಟು ಚರ್ಚೆ ಆಗಿದ್ದೂ ಇದೆ. ಈಗ ಮೋಕ್ಷಿತಾ ಪೈ ಜಗದೀಶ್ ವಿರುದ್ಧ ಮಾತಿಗೆ ನಿಲ್ಲುತ್ತಿದ್ದಾರೆ.

‘ನಿಮ್ಮ ರೀತಿಯ ಫೂಟೇಜ್ ನನಗೆ ಬೇಡ’; ಮೋಕ್ಷಿತಾ ಮಾತಿಗೆ ಜಗದೀಶ್ ಗಪ್​ಚುಪ್
ಮೋಕ್ಷಿತಾ-ಜಗದೀಶ್
Follow us
ರಾಜೇಶ್ ದುಗ್ಗುಮನೆ
|

Updated on: Oct 09, 2024 | 6:51 AM

‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ 16 ಸ್ಪರ್ಧಿಗಳ ಮಧ್ಯೆ ಆಟ ಮುಂದುವರಿದಿದೆ. ಕಳೆದ ವಾರ ಯಮುನಾ ಶ್ರೀನಿಧಿ ಎಲಿಮಿನೇಟ್ ಆಗಿದ್ದಾರೆ. ಇದಾದ ಬಳಿಕ ಸ್ಪರ್ಧಿಗಳಿಗೆ ಎಲಿಮಿನೇಷನ್ ಬಗ್ಗೆ ಹೆಚ್ಚು ಆತಂಕ ವ್ಯಕ್ತವಾಗಿದೆ. ಈ ಮಧ್ಯೆ ಜಗದೀಶ್ ಅವರು ಬಾಯಿಗೆ ಬಂದಂತೆ ಮಾತನಾಡುತ್ತಾ ಕಿರುಚಾಡುತ್ತಿದ್ದಾರೆ. ಇವರನ್ನು ಎದುರಿಸೋಕೆ ಉಗ್ರಂ ಮಂಜು ಇದ್ದಾರೆ. ಅದರ ಜೊತೆಗೆ ಮೋಕ್ಷಿತಾ ಪೈ ಕೂಡ ಜಗದೀಶ್ ವಿರುದ್ಧ ಮಾತಿಗೆ ನಿಲ್ಲುತ್ತಿದ್ದಾರೆ.

‘ಬಿಗ್ ಬಾಸ್​’ನಲ್ಲಿ ನಾಮಿನೇಷನ್ ಪ್ರಕ್ರಿಯೆ ನಡೆಯಿತು. ಇದರಲ್ಲಿ ಎರಡು ಸ್ಪರ್ಧಿಗಳು ಬಂದು ನಿಂತು ತಾವು ಏಕೆ ನಾಮಿನೇಟ್ ಆಗಬಾರದು ಮತ್ತು ಎದುರಿದ್ದವರು ಏಕೆ ನಾಮಿನೇಟ್ ಆಗಬೇಕು ಎಂಬ ಬಗ್ಗೆ ವಿವರಿಸಬೇಕಿತ್ತು. ಈ ಸಂದರ್ಭದಲ್ಲಿ ಮನೆಯವರು ಕೂಡ ಅವರಿಗೆ ಪ್ರಶ್ನೆ ಮಾಡುವ ಅವಕಾಶ ಇತ್ತು. ಮೋಕ್ಷಿತಾ ಹಾಗೂ ಮಾನಸಾ ಮಧ್ಯೆ ಸ್ಪರ್ಧೆ ಏರ್ಪಟ್ಟಿತ್ತು. ಆಗ ಮೋಕ್ಷಿತಾ ಅವರು ತಮ್ಮ ಬಗ್ಗೆ ಮಾತನಾಡಿದ್ದಾರೆ.

‘ಈ ವೇದಿಕೆ ಸಿಕ್ಕಿರುವುದಕ್ಕೆ ಹೆಮ್ಮೆ ಇದೆ. ಇಲ್ಲಿ ತಾಳ್ಮೆ ಬೇಕು. ಅನಾವಶ್ಯಕವಾಗಿ ಮಾತನಾಡೋದು ಇಲ್ಲಿ ಅಗತ್ಯವಿಲ್ಲ. ಯಾವಾಗ ಧ್ವನಿ ಎತ್ತಬೇಕೋ ಆಗ ಧ್ವನಿ ಎತ್ತಬೇಕು. ಈ ಮನೆಯಲ್ಲಿರೋಕೆ ನಾನು ಅರ್ಹ. ಬಿಗ್ ಬಾಸ್ ನಮಗೆ ಈ ಕಷ್ಟಗಳನ್ನೆಲ್ಲ (ನರಕ ನಿವಾಸ) ನೀಡುತ್ತಿದ್ದಾರೆ ಎಂದರೆ ನಮ್ಮಲ್ಲಿ ಆ ಶಕ್ತಿ ಇದೆ ಎಂದರ್ಥ’ ಎಂಬುದಾಗಿ ಮಾತನಾಡಿದರು ಮೋಕ್ಷಿತಾ.

ಇದಕ್ಕೆ ಪಾಟಿ ಸವಾಲು ಹಾಕಿದರು ಜಗದೀಶ್. ‘8 ದಿನಗಳಲ್ಲಿ ಮಾಡದೇ ಇರುವುದನ್ನು ಮುಂದಿನ ದಿನಗಳಲ್ಲಿ ಮಾಡ್ತೀರಾ’ ಎಂದು ಜಗದೀಶ್​ ಪ್ರಶ್ನೆ ಮಾಡಿದರು. ‘ಎಲ್ಲೂ ಕಾಣಿಸಿಕೊಂಡಿಲ್ಲ ಎಂದರೆ ನೀವು ತೆಗೆದುಕೊಂಡ ರೀತಿಯ ಫೂಟೆಜ್ ನಾನು ತೆಗೆದುಕೊಂಡಿಲ್ಲ. ಅದು ನನಗೆ ಬೇಡ. ಆ ರೀತಿ ಮಾಡೋಕೆ ಮುಂದಿನ ದಿನಗಳಲ್ಲಿ ಪ್ರಯತ್ನಿಸುತ್ತೇನೆ’ ಎಂದಿದ್ದಾರೆ ಮೋಕ್ಷಿತಾ.

ಇದನ್ನೂ ಓದಿ: ಜಗದೀಶ್ ಕಟ್ಟಿದ ಸುಳ್ಳಿನ ಮಹಲನ್ನು ಕೆಡವಿದ ಮೋಕ್ಷಿತಾ ಪೈ

ಈ ಮಾತಿಗೆ ಜಗದೀಶ್ ಅವರ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಅವರು ಸೈಲೆಂಟ್ ಆಗಿ ಉಳಿದುಕೊಂಡಿದ್ದಾರೆ. ಮೋಕ್ಷಿತಾ ಮಾತಿಗೆ ಎಲ್ಲರೂ ಮೆಚ್ಚುಗೆ ಸೂಚಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.