ಯಾರೂ ಊಹಿಸದ ವ್ಯಕ್ತಿಗೆ ಕಿಚ್ಚನ ಚಪ್ಪಾಳೆ, ಬಿಗ್​ಬಾಸ್ ಮನೆಯಲ್ಲಿ ಇದೇ ಮೊದಲು

ಬಿಗ್​ಬಾಸ್ ಕನ್ನಡದಲ್ಲಿ ಪ್ರತಿ ವಾರಾಂತ್ಯಕ್ಕೆ ಕಿಚ್ಚ ಸುದೀಪ್ ಬಂದು, ಆ ವಾರ ಯಾರು ಚೆನ್ನಾಗಿ ಆಡಿರುತ್ತಾರೆಯೋ ಅವರಲ್ಲಿ ಒಬ್ಬರಿಗೆ ಕಿಚ್ಚನ ಚಪ್ಪಾಳೆ ನೀಡುತ್ತಾರೆ. ಆದರೆ ಕಳೆದ ವಾರ ಯಾರಿಗೂ ನೀಡಿರಲಿಲ್ಲ. ಆದರೆ ಈಗ ಸುದೀಪ್, ಅಪರೂಪದಲ್ಲಿ ಅಪರೂಪದ ವ್ಯಕ್ತಿಯೊಬ್ಬರಿಗೆ ಕಿಚ್ಚನ ಚಪ್ಪಾಳೆ ನೀಡಿದ್ದಾರೆ.

ಯಾರೂ ಊಹಿಸದ ವ್ಯಕ್ತಿಗೆ ಕಿಚ್ಚನ ಚಪ್ಪಾಳೆ, ಬಿಗ್​ಬಾಸ್ ಮನೆಯಲ್ಲಿ ಇದೇ ಮೊದಲು
ಸುದೀಪ್
Follow us
ಮಂಜುನಾಥ ಸಿ.
|

Updated on: Oct 12, 2024 | 11:07 PM

ಬಿಗ್​ಬಾಸ್​ ಕನ್ನಡದ ಪ್ರತಿ ಸೀಸನ್​ನಲ್ಲೂ ಕೆಲವು ವಿಷಯಗಳು ಪಕ್ಕಾ ಇರುತ್ತವೆ. ಜನರು ಗಿಫ್ಟ್​ ಕಳಿಸುವುದು, ಕಿಚ್ಚ ಅಡುಗೆ ಕಳಿಸುವುದು, ಪ್ರತಿ ವಾರ ಕ್ಯಾಪ್ಟನ್ ಆಗುವುದು, ಭಾನುವಾರದ ಎಲಿಮಿನೇಷನ್ ಇದೆಲ್ಲವೂ ಒಂದು ರೀತಿ ಫಿಕ್ಸ್​ ಕಾರ್ಯಕ್ರಮಗಳು. ಇದೇ ರೀತಿ ಕಿಚ್ಚನ ಚಪ್ಪಾಳೆ ಸಹ ಕಳೆದ ಕೆಲ ಸೀಸನ್​ನಿಂದ ಫಿಕ್ಸ್ ಕಾರ್ಯಕ್ರಮವಾಗಿದೆ. ಈ ವಾರ ಯಾರು ಎಲಿಮಿನೇಟ್ ಆಗುತ್ತಾರೆ ಎಂದು ಜನ ಕಾಯುವಂತೆ ಈ ವಾರ ಕಿಚ್ಚ ಚಪ್ಪಾಳೆ ಯಾರಿಗೆ ಸಿಗುತ್ತದೆ ಎಂದು ಸಹ ಜನ ಕಾಯುತ್ತಾರೆ. ಆದರೆ ಕಳೆದ ವಾರ ಕಿಚ್ಚ ಯಾರಿಗೂ ಚಪ್ಪಾಳೆ ನೀಡಿರಲಿಲ್ಲ. ಕಳೆದ ವಾರ ಮಾಡದಿದ್ದನ್ನು ಕಿಚ್ಚ ಈ ವಾರ ಮಾಡಿದ್ದಾರೆ.

ಕಳೆದ ವಾರದ ಪಂಚಾಯ್ತಿಯಲ್ಲಿ ಕಿಚ್ಚ ಯಾರಿಗೂ ಚಪ್ಪಾಳೆ ನೀಡಿರಲಿಲ್ಲ. ಮೊದಲ ವಾರ ಮನೆಯಲ್ಲಿ ಸಾಕಷ್ಟು ಜಗಳ, ತರ್ಲೆ ತಾಪತ್ರಯಗಳು ನಡೆದಿದ್ದವು. ಲಾಯರ್ ಜಗದೀಶ್ ಅಂತೂ ಬಿಗ್​ಬಾಸ್​ ಮನೆಯಲ್ಲಿದ್ದುಕೊಂಡೆ ಬಿಗ್​ಬಾಸ್​ಗೆ ಧಮ್ಕಿ ಹಾಕಿದ್ದರು. ಹಲವರು ನಿಯಮ ಮೀರಿದ್ದರು. ಮನೆಯಲ್ಲಿ ಮೊದಲ ದಿನದಿಂದಲೂ ಬರೀ ಜಗಳಗಳೇ ನಡೆದಿದ್ದವು. ಸುದೀಪ್ ಮೊದಲ ವಾರದ ಪಂಚಾಯ್ತಿಯ ಎರಡೂ ದಿನದಲ್ಲಿ ಸುದೀಪ್​ ಮನೆಯವರಿಗೆ ವ್ಯಕ್ತಿತ್ವದ ಪಾಠ ಮಾಡಿ ಸುಸ್ತಾದರು. ಮೊದಲ ವಾರದ ಗಲಾಟೆಯ ನಡುವೆ ಆ ವಾರ ಚೆನ್ನಾಗಿ ಆಡಿದ್ದ ಸ್ಪರ್ಧಿಗೆ ಚಪ್ಪಾಳೆ ಕೊಡುವುದನ್ನೇ ಸುದೀಪ್ ಮರೆತಿದ್ದರು.

ಇದನ್ನೂ ಓದಿ:‘ಮಾತಾಡೋದು ಕಲಿಯುತ್ತಿದ್ದೇನೆ’: ಚೈತ್ರಾ ಹೇಳಿದ್ದು ಕೇಳಿ ಕಂಗಾಲಾದ ಕಿಚ್ಚ ಸುದೀಪ್​

ಎರಡನೇ ವಾರಾಂತ್ಯದ ವಾರದ ಪಂಚಾಯ್ತಿಯ ಆರಂಭದಲ್ಲಿಯೇ ಒಂದು ಚಿತ್ರವೊಂದನ್ನು ಹಂಸ ಅವರಿಗೆ ಹೇಳಿ ಸ್ಟೋರ್ ರೂಂನಿಂದ ತರಲು ಹೇಳಿದರು ಸುದೀಪ್. ಆ ಚಿತ್ರ ಒಂದು ಕಾರ್ಟೂನ್ ಆಗಿತ್ತು, ವ್ಯಕ್ತಿಯೊಬ್ಬನ ತಲೆ ಬಳಿಯ ಏನೇನೋ ಚಿತ್ರಗಳಿದ್ದವು. ತಲೆ ಚಿಟ್ಟು ಹಿಡಿದ ವ್ಯಕ್ತಿಯೊಬ್ಬ ಕಾರ್ಟೂನ್ ಅದು. ಆ ಚಿತ್ರದ ಬಗ್ಗೆ ವಿವರಣೆ ನೀಡಿದ ಸುದೀಪ್, ಅದು ನನ್ನದೇ ಚಿತ್ರ. ಮೊದಲ ವಾರ ಎಪಿಸೋಡ್ ನೋಡಿ, ನಿಮ್ಮ ಬಳಿ ಎರಡು ವಾರ ಮಾತನಾಡಿದ ಬಳಿಕ ಆ ಸ್ಥಿತಿ ಆಗಿತ್ತು ಎಂದರು. ಅಲ್ಲದೆ, ಮೊದಲ ವಾರ ಯಾರಿಗೂ ಚಪ್ಪಾಳೆ ನೀಡಿರಲಿಲ್ಲ. ಆದರೆ ಈಗ ನೀಡುತ್ತಿದ್ದೇನೆ. ಇದೇ ಮೊದಲ ಬಾರಿಗೆ ಕಿಚ್ಚನಿಗೆ ಕಿಚ್ಚನ ಚಪ್ಪಾಳೆ ನೀಡುತ್ತಿದ್ದೇನೆ ಎಂದರು.

ನಿಮ್ಮ ಮೊದಲ ವಾರದ ಎಪಿಸೋಡ್ ಎಲ್ಲ ನೋಡಿ, ನಿಮ್ಮ ಬಳಿ ಮಾತನಾಡಿ, ನಿಮಗೆ ಅರ್ಥ ಮಾಡಿಸುವುದು, ತಪ್ಪು ತಿದ್ದುವುದು, ಮಾರ್ಗದರ್ಶನ ಮಾಡುವುದು ಸುಲಭದ ಕೆಲಸ ಆಗಿರಲಿಲ್ಲ. ಹಾಗಾಗಿ ಆ ಚಪ್ಪಾಳೆಗೆ ನಾನೇ ಅರ್ಹ ಎನಿಸಿತು, ಅದಕ್ಕೆ ಇದೇ ಮೊದಲ ಬಾರಿಗೆ ಕಿಚ್ಚನ ಚಪ್ಪಾಳೆಯನ್ನು ನನಗೆ ನಾನೇ ಕೊಟ್ಟುಕೊಳ್ಳುತ್ತಿದ್ದೇನೆ ಎಂದರು. ಆ ಕಾರ್ಟೂನ್ ಚಿತ್ರವನ್ನು ಮನೆಯಲ್ಲಿ ನೇತು ಹಾಕಿಸಿದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ