ರಾತ್ರೋರಾತ್ರಿ ಬಿಗ್ ಬಾಸ್​ ಮನೆ ಅಸ್ತವ್ಯಸ್ತ; ಮಾಸ್ಕ್ ಧರಿಸಿದ ವ್ಯಕ್ತಿಗಳಿಂದ ವಸ್ತುಗಳಿಗೆ ಹಾನಿ

‘ಬಿಗ್ ಬಾಸ್​ ಕನ್ನಡ ಸೀಸನ್​ 11’ ಡಿಫರೆಂಟ್​ ಎನಿಸಿಕೊಂಡಿದ್ದು ಸ್ವರ್ಗ ಮತ್ತು ನರಕ ಎಂಬ ಕಾನ್ಸೆಪ್ಟ್​ನಿಂದಾಗಿ. ಇಷ್ಟು ದಿನ ಅದೇ ಕಾನ್ಸೆಪ್ಟ್​ ಅಡಿಯಲ್ಲಿ ಟಾಸ್ಕ್​ಗಳು ನಡೆಯುತ್ತಿದ್ದವು. ಆದರೆ ಈಗ ರಾತ್ರೋರಾತ್ರಿ ನರಕದ ಗಡಿಯನ್ನು ಮುರಿಯಲಾಗಿದೆ. ನರಕದಲ್ಲಿ ಇದ್ದ ವಸ್ತುಗಳನ್ನು ಒಡೆದು ಹಾಕಲಾಗಿದೆ. ಬಿಗ್​ ಬಾಸ್​ ಮನೆಯಲ್ಲಿ ಏಕಾಏಕಿ ಈ ಬದಲಾವಣೆಗಳನ್ನು ಮಾಡಲಾಗಿದೆ.

ರಾತ್ರೋರಾತ್ರಿ ಬಿಗ್ ಬಾಸ್​ ಮನೆ ಅಸ್ತವ್ಯಸ್ತ; ಮಾಸ್ಕ್ ಧರಿಸಿದ ವ್ಯಕ್ತಿಗಳಿಂದ ವಸ್ತುಗಳಿಗೆ ಹಾನಿ
ಬಿಗ್ ಬಾಸ್​ ಕನ್ನಡ ಸೀಸನ್​ 11
Follow us
ಮದನ್​ ಕುಮಾರ್​
|

Updated on: Oct 11, 2024 | 11:27 PM

ದೊಡ್ಡದಾಗಿ ಸೈರನ್ ಕೂಗಿತು. ಅದನ್ನು ಕೇಳಿದಾಗ ಎಲ್ಲ ಸದಸ್ಯರಿಗೂ ಶಾಕ್ ಆಯಿತು. ಬಿಗ್​ ಬಾಸ್​ ಮನೆಯ ಒಳಗೆ ದೊಡ್ಡ ಕ್ರೇನ್​ ಬಂತು. ಅದರಿಂದ ಒಂದಷ್ಟು ಜನರು ಬಂದು ಮನೆಯೊಳಗಿನ ವಸ್ತುಗಳಿಗೆ ಹಾನಿ ಮಾಡಲು ಆರಂಭಿಸಿದರು. ಈ ಹಿಂದಿನ ಯಾವುದೇ ಸೀಸನ್​ಗಳಲ್ಲೂ ಈ ರೀತಿ ಆಗಿರಲಿಲ್ಲ. ಹಾಗಾಗಿ ಎಲ್ಲರಿಗೂ ಅಚ್ಚರಿ ಆಗಿದೆ. ಸ್ವರ್ಗ ಮತ್ತು ನರಕದ ನಡುವೆ ಇದ್ದ ಗೋಡೆಯನ್ನು ಒಡೆಯಲಾಯಿತು. ನರಕದ ಒಳಗಿನ ವಸ್ತುಗಳನ್ನು ಒಡೆಯಲಾಯಿತು. ಹಾಗಾದರೆ ಇನ್ಮೇಲೆ ಸ್ವರ್ಗ ಮತ್ತು ನರಕ ಎಂಬ ಕಾನ್ಸೆಪ್ಟ್​ ಇರುವುದಿಲ್ಲವಾ ಎಂಬ ಪ್ರಶ್ನೆ ಮೂಡಿತು.

ನೋಡನೋಡುತ್ತಿದ್ದಂತೆಯೇ ನರಕದ ಗೋಡೆಗಳನ್ನು ಮುರಿದು ಹಾಕಲಾಯಿತು. ಗೋಲ್ಡ್​ ಸುರೇಶ್​, ಐಶ್ವರ್ಯಾ ಮುಂತಾದವರು ಒಂದು ಕ್ಷಣ ಗಾಬರಿ ಆದರು. ಜಗದೀಶ್​ ಮಾತ್ರ ಎಲ್ಲವನ್ನೂ ಎಂಜಾಯ್​ ಮಾಡುತ್ತಿದ್ದರು. ಮುಂದೇನಾಗಬಹುದು ಎಂಬ ಟೆನ್ಷನ್​ ಬಹುತೇಕರಿಗೆ ಇತ್ತು. ಕಡೆಗೂ ಆಗಿದ್ದೇನು? ನರಕದ ಮನೆಯನ್ನೇ ನಾಶ ಮಾಡಲಾಯಿತು. ಬಳಿಕ ಆ ಬಗ್ಗೆ ಬಿಗ್​ ಬಾಸ್​ ವಿವರಿಸಿ ಹೇಳಿದರು.

ಇದನ್ನೂ ಓದಿ: ‘ಸುದೀಪ್​ ಮಾತಿಗೆ ಬೆಲೆ ಕೊಡ್ತೀನಿ, ಇನ್ಮೇಲೆ ಬದಲಾಗ್ತೀನಿ’: ಬಿಗ್​ ಬಾಸ್​ನಲ್ಲಿ ಜಗದೀಶ್ ನಿರ್ಧಾರ

ಇಷ್ಟು ದಿನ ಸ್ವರ್ಗ ಮತ್ತು ನರಕ ಎಂಬ ಕಾರಣದಿಂದಲೇ ಬಿಗ್​ ಬಾಸ್​ ಸ್ಪರ್ಧಿಗಳ ನಡುವೆ ಗ್ಯಾಪ್​ ಉಂಟಾಗಿತ್ತು. ನರಕದಿಂದ ಸ್ವರ್ಗಕ್ಕೆ ಹೋಗಬೇಕು ಎಂಬ ಕಾರಣದಿಂದಲೇ ಟಫ್​ ಪೈಪೋಟಿ ನೀಡಲಾಗುತ್ತಿತ್ತು. ಆದರೆ ಈಗ ಆ ಎಲ್ಲ ಜಂಜಾಟಕ್ಕೆ ಪೂರ್ಣ ವಿರಾಮ ಹಾಕಲಾಗಿದೆ. ಇನ್ಮುಂದೆ ಬಿಗ್ ಬಾಸ್ ಮನೆಯಲ್ಲಿ ಸ್ವರ್ಗ ಮತ್ತು ನರಕ ಎಂಬ ಕಾನ್ಸೆಪ್ಟ್​ ಇರುವುದಿಲ್ಲ. ಎಲ್ಲರೂ ಒಂದೇ ಕಡೆ ವಾಸಿಸಲಿದ್ದಾರೆ.

ಇದನ್ನೂ ಓದಿ: ‘ಸೋಲೋಕೆ ಬರ್ತೀರಿ, ನಾಚಿಕೆ ಆಗಬೇಕು’: ಬಿಗ್​ ಬಾಸ್​ ಸ್ಪರ್ಧಿಗಳಿಗೆ ಕ್ಲಾಸ್​ ತೆಗೆದುಕೊಂಡ ಜಗದೀಶ್

‘ಬಿಗ್​ ಬಾಸ್​ ಕನ್ನಡ ಸೀಸನ್​ 11’ ರಿಯಾಲಿಟಿ ಶೋನಲ್ಲಿ ಎರಡನೇ ಕ್ಯಾಪ್ಟನ್​ ಆಗಿ ಶಿಶಿರ್​ ಆಯ್ಕೆ ಆಗಿದ್ದಾರೆ. ಇಷ್ಟು ದಿನಗಳ ಕಾಲ ನರಕದಲ್ಲಿ ಇದ್ದು ಕಷ್ಟ ಅನುಭವಿಸಿದ್ದ ಅವರು ಈಗ ನೇರವಾಗಿ ಕ್ಯಾಪ್ಟನ್​ ರೂಮ್​ಗೆ ಕಾಲಿಟ್ಟಿದ್ದಾರೆ. ಅವರಿಗೆ ಒಂದಷ್ಟು ಸವಲತ್ತುಗಳು ಸಿಗಲಿವೆ. ಕಳೆದ ವಾರ ಕ್ಯಾಪ್ಟನ್​ ಆಗಿದ್ದ ಹಂಸಾ ಅವರು ಸಿಕ್ಕಾಪಟ್ಟೆ ಕಿರಿಕಿರಿ ಅನುಭವಿಸಿದ್ದರು. ಈಗ ಶಿಶಿರ್​ ಅವರು ಯಾವ ರೀತಿ ತಮ್ಮ ಜವಾಬ್ದಾರಿ ನಿಭಾಯಿಸುತ್ತಾರೆ ಎಂಬುದನ್ನು ಕಾದುನೋಡಬೇಕು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಎನ್ಕೌಂಟರ್ ಮಾಡಿಸುವ ಪ್ರಯತ್ನ ಅಂತ ರವಿ ಭಾವಿಸಿದ್ದರೆ ತನಿಖೆಯಾಗಲಿ: ಸಚಿವ
ಎನ್ಕೌಂಟರ್ ಮಾಡಿಸುವ ಪ್ರಯತ್ನ ಅಂತ ರವಿ ಭಾವಿಸಿದ್ದರೆ ತನಿಖೆಯಾಗಲಿ: ಸಚಿವ
ಅಪಘಾತದಲ್ಲಿ ಮೃತಪಟ್ಟ ಬಾಸ್​ ಬಗ್ಗೆ ಸಿಬ್ಬಂದಿಗಳ ನೋವಿನ ಮಾತು
ಅಪಘಾತದಲ್ಲಿ ಮೃತಪಟ್ಟ ಬಾಸ್​ ಬಗ್ಗೆ ಸಿಬ್ಬಂದಿಗಳ ನೋವಿನ ಮಾತು
ಜಿಮ್‌ಗೆ ನುಗ್ಗಿದ ಕೋತಿ: ಎದ್ನೋ ಬಿದ್ನೋ ಓಡಿದ ಬಾಡಿ ಬಿಲ್ಡರ್ಸ್!
ಜಿಮ್‌ಗೆ ನುಗ್ಗಿದ ಕೋತಿ: ಎದ್ನೋ ಬಿದ್ನೋ ಓಡಿದ ಬಾಡಿ ಬಿಲ್ಡರ್ಸ್!
ಪ್ರಕರಣ ಈಗ ಹಕ್ಕು ಭಾಧ್ಯತಾ ಸಮಿತಿ ಮುಂದಿದೆ: ಸತೀಶ್ ಜಾರಕಿಹೊಳಿ
ಪ್ರಕರಣ ಈಗ ಹಕ್ಕು ಭಾಧ್ಯತಾ ಸಮಿತಿ ಮುಂದಿದೆ: ಸತೀಶ್ ಜಾರಕಿಹೊಳಿ
ಅಶ್ಲೀಲ ಪದಬಳಕೆ ಕಂಡುಬಂದರೆ ಅದನ್ನು ಎಥಿಕ್ಸ್ ಕಮಿಟಿಗೆ ರವಾನೆ: ಹೊರಟ್ಟಿ
ಅಶ್ಲೀಲ ಪದಬಳಕೆ ಕಂಡುಬಂದರೆ ಅದನ್ನು ಎಥಿಕ್ಸ್ ಕಮಿಟಿಗೆ ರವಾನೆ: ಹೊರಟ್ಟಿ
ಪ್ರಧಾನಿ ಮೋದಿಯನ್ನ ಭೇಟಿಯಾದ 101 ವರ್ಷದ ಐಎಫ್‌ಎಸ್ ಅಧಿಕಾರಿ
ಪ್ರಧಾನಿ ಮೋದಿಯನ್ನ ಭೇಟಿಯಾದ 101 ವರ್ಷದ ಐಎಫ್‌ಎಸ್ ಅಧಿಕಾರಿ
ವಕ್ಫ್ ಬೋರ್ಡ್ ಭೂಕಬಳಿಕೆ ಸಮರ್ಥವಾಗಿ ಸದನದಲ್ಲಿ ಮಂಡಿಸಿದ್ದೇವೆ: ಅಶೋಕ
ವಕ್ಫ್ ಬೋರ್ಡ್ ಭೂಕಬಳಿಕೆ ಸಮರ್ಥವಾಗಿ ಸದನದಲ್ಲಿ ಮಂಡಿಸಿದ್ದೇವೆ: ಅಶೋಕ
ಡಿವೈಡರ್​ಗೆ ಗುದ್ದಿ ಕಾರಿನ ಮೇಲೆ ಕಂಟೇನರ್​ ಬೀಳುತ್ತಿರುವ ಭಯಾನಕ ದೃಶ್ಯ!
ಡಿವೈಡರ್​ಗೆ ಗುದ್ದಿ ಕಾರಿನ ಮೇಲೆ ಕಂಟೇನರ್​ ಬೀಳುತ್ತಿರುವ ಭಯಾನಕ ದೃಶ್ಯ!
ರಾಮಾಯಣ ಮತ್ತು ಮಹಾಭಾರತಕ್ಕೆ ಮೋದಿ ಸಹಿ
ರಾಮಾಯಣ ಮತ್ತು ಮಹಾಭಾರತಕ್ಕೆ ಮೋದಿ ಸಹಿ
ಕಾನೂನು ಕೈಗೆತ್ತಿಕೊಳ್ಳಬಾರದು ಅಂತ ಸಹಿಸಿಕೊಂಡೆ: ಮೃಣಾಲ್ ಹೆಬ್ಬಾಳ್ಕರ್
ಕಾನೂನು ಕೈಗೆತ್ತಿಕೊಳ್ಳಬಾರದು ಅಂತ ಸಹಿಸಿಕೊಂಡೆ: ಮೃಣಾಲ್ ಹೆಬ್ಬಾಳ್ಕರ್