AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್ ಬಾಸ್ ಎಕ್ಸ್​​ಪೋಸ್ ಮಾಡ್ತೀನಿ ಎಂದು ಹೋದವರ ಕಥೆ ಹೀಗಾಗಬಾರದಿತ್ತು..

‘ಬಿಗ್ ಬಾಸ್’ನ ಎಕ್ಸ್​ಪೋಸ್ ಮಾಡ್ತೀನಿ, ಬಿಗ್ ಬಾಸ್​ ಅನ್ನೇ ಕೊಂಡುಕೊಳ್ಳುತ್ತೇನೆ ಎಂದೆಲ್ಲ ಬಿಲ್ಡಪ್ ಕೊಟ್ಟಿದ್ದರು ಜಗದೀಶ್. ಮೊದಲ ವಾರ ಸುದೀಪ್ ಅವರಿಂದ ಜಗದೀಶ್​ಗೆ ಕಿವಿಮಾತು ಸಿಕ್ಕಿತ್ತು. ಈ ಕಿವಿಮಾತಿನಿಂದ ಅವರು ಬದಲಾದಂತೆ ಇದೆ.

ಬಿಗ್ ಬಾಸ್ ಎಕ್ಸ್​​ಪೋಸ್ ಮಾಡ್ತೀನಿ ಎಂದು ಹೋದವರ ಕಥೆ ಹೀಗಾಗಬಾರದಿತ್ತು..
ಜಗದೀಶ್​-ಸುದೀಪ್
ರಾಜೇಶ್ ದುಗ್ಗುಮನೆ
|

Updated on: Oct 12, 2024 | 7:35 AM

Share

‘ಬಿಗ್ ಬಾಸ್ ಕನ್ನಡ ಸಿಸನ್ 11’ರಲ್ಲಿ ಜಗದೀಶ್ ಅವರು ದೊಡ್ಡ ಮಟ್ಟದಲ್ಲಿ ಸುದ್ದಿ ಆಗಿದ್ದರು. ಬಿಗ್ ಬಾಸ್​ನ ಎಕ್ಸ್​ಪೋಸ್ ಮಾಡ್ತೀನಿ ಎಂದು ಸವಾಲನ್ನು ಕೂಡ ಹಾಕಿದ್ದರು. ಆದರೆ, ಈಗ ಅವರು ಅದಕ್ಕೆ ತದ್ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ‘ಬಿಗ್ ಬಾಸ್’ ಬಗ್ಗೆ ಅವರು ತಮ್ಮ ಮನದಾಳದ ಮಾತನ್ನು ಹೇಳಿಕೊಂಡಿದ್ದಾರೆ. ‘ಬಿಗ್ ಬಾಸ್​ ಎಕ್ಸ್​ಪೋಸ್ ಮಾಡ್ತೀನಿ ಎಂದು ಹೋದವರಿಗೆ ಈ ರೀತಿ ಆಗಬಾರದಿತ್ತು’ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.

‘ಬಿಗ್ ಬಾಸ್’ನ ಎಕ್ಸ್​ಪೋಸ್ ಮಾಡ್ತೀನಿ, ಬಿಗ್ ಬಾಸ್​ ಅನ್ನೇ ಕೊಂಡುಕೊಳ್ಳುತ್ತೇನೆ ಎಂದೆಲ್ಲ ಬಿಲ್ಡಪ್ ಕೊಟ್ಟಿದ್ದರು ಜಗದೀಶ್. ಮೊದಲ ವಾರ ಸುದೀಪ್ ಅವರಿಂದ ಜಗದೀಶ್​ಗೆ ಕಿವಿಮಾತು ಸಿಕ್ಕಿತ್ತು. ಈ ಕಿವಿಮಾತಿನಿಂದ ಅವರು ಬದಲಾದಂತೆ ಇದೆ. ಎಲ್ಲರಿಗೂ ಕಿರಿಕಿರಿ ಮಾಡಿದ್ದನ್ನು ಅವರು ಮುಂದುವರಿಸಿದ್ದಾರೆ ನಿಜ. ಆದರೆ, ಕಳೆದ ವಾರಕ್ಕೆ ಹೋಲಿಕೆ ಮಾಡಿದರೆ ಅವರು ಕೊಂಚ ಬದಲಾಗಿದ್ದಾರೆ. ಅವರ ಆಲೋಚನೆಗಳು ಕೂಡ ಬದಲಾಗಿವೆ.

ಈ ಬಗ್ಗೆ ಜಗದೀಶ್ ಅವರು ಕ್ಯಾಮೆರಾ ಮುಂದೆ ಹೇಳಿಕೊಂಡಿದ್ದಾರೆ. ‘ಬಿಗ್ ಬಾಸ್​ನ ನಾನು ಇಷ್ಟಪಡುತ್ತಿದ್ದೇನೆ. ಇದೊಂದು ಸ್ಕ್ರಿಪ್ಟೆಡ್​ ಶೋ ಎಂದುಕೊಂಡಿದ್ದೆ. ಅದು ಸುಳ್ಳಾಯಿತು. ಎಲ್ಲಾ ಸೆಟಪ್ ಇರುತ್ತದೆ ಎಂದುಕೊಂಡಿದ್ದೆ. ಅದು ಕೂಡ ಸುಳ್ಳಾಗಿದೆ. ಒಟ್ಟಾರೆ ಎಲ್ಲವೂ ಸುಳ್ಳಾಯಿತು’ ಎಂದು ಜಗದೀಶ್ ಅವರು ಕ್ಯಾಮೆರಾ ಎದುರು ಬಂದು ಹೇಳಿಕೊಂಡಿದ್ದಾರೆ.

ಜಗದೀಶ್ ಅವರು ಈ ಮೊದಲು ವಕೀಲರಾಗಿದ್ದರು. ಆದರೆ, ಈಗ ಅವರು ವಕೀಲ ವೃತ್ತಿ ನಡೆಸುವಂತಿಲ್ಲ ಎನ್ನುವ ಆದೇಶ ಬಂದಿದೆ. ಈ ಕಾರಣಕ್ಕೆ ಅವರನ್ನು ವಕೀಲರು ಎಂದು ಕರೆಯಬಾರದು ಎಂದು ಬೆಂಗಳೂರು ವಕೀಲರ ಸಂಘ ಕಲರ್ಸ್ ಕನ್ನಡಕ್ಕೆ ಮನವಿ ಮಾಡಿತ್ತು.

ಇದನ್ನೂ ಓದಿ: ಬಿಗ್ ಬಾಸ್​ನಲ್ಲಿ ಈ ವಾರ ಇರಲ್ಲ ಯಾವುದೇ ಎಲಿಮಿನೇಷನ್; ಕಾರಣ ಏನು?

‘ಬಿಗ್ ಬಾಸ್ ಕನ್ನಡ ಸೀಸನ್​ 11’ರಲ್ಲಿ ಎರಡು ವಾರ ಪೂರ್ಣಗೊಳ್ಳುತ್ತಾ ಬಂದಿದೆ. ಈ ವಾರ ಯಾವುದೇ ಎಲಿಮಿನೇಷನ್ ಪ್ರಕ್ರಿಯೆ ಇರೋದಿಲ್ಲ ಎಂದು ಹೇಳಲಾಗುತ್ತಿದೆ. ಭವ್ಯಾ ಗೌಡ, ಧನರಾಜ್, ಧರ್ಮ, ರಂಜಿತ್, ತ್ರಿವಿಕ್ರಂ, ಮಾನಸಾ, ಐಶ್ವರ್ಯಾ, ಗೋಲ್ಡ್ ಸುರೇಶ್, ಹಂಸ, ಜಗದೀಶ್, ಅನುಷಾ ರೈ ನಾಮಿನೇಟ್ ಆಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಕಳ್ಳ ಬೇಟೆ ತಡೆ ಶಿಬಿರ ಧ್ವಂಸ:ಶೂಟೌಟ್​​​​​​​​​ ಕೇಸಿನ ಗ್ರೌಂಡ್ ರಿಪೋರ್ಟ್
ಕಳ್ಳ ಬೇಟೆ ತಡೆ ಶಿಬಿರ ಧ್ವಂಸ:ಶೂಟೌಟ್​​​​​​​​​ ಕೇಸಿನ ಗ್ರೌಂಡ್ ರಿಪೋರ್ಟ್
100ರೂ.ನೀರಿನ ಬಾಟಲಿ ತಗೋತಾರೆ:50ರೂ. ಕೊಟ್ಟು ಸಕ್ಕರೆ ತೆಗೊಂಡ್ರೆ ಏನೂ ಆಗಲ್ಲ
100ರೂ.ನೀರಿನ ಬಾಟಲಿ ತಗೋತಾರೆ:50ರೂ. ಕೊಟ್ಟು ಸಕ್ಕರೆ ತೆಗೊಂಡ್ರೆ ಏನೂ ಆಗಲ್ಲ
ರೈತರಲ್ಲಿ ಆತಂಕ ತಂದ ಅರಣ್ಯ ಇಲಾಖೆ ಸಚಿವರ ಆ ಹೇಳಿಕೆ: ಹೇಳಿದ್ದೇನು?
ರೈತರಲ್ಲಿ ಆತಂಕ ತಂದ ಅರಣ್ಯ ಇಲಾಖೆ ಸಚಿವರ ಆ ಹೇಳಿಕೆ: ಹೇಳಿದ್ದೇನು?
11 ವರ್ಷದ ಬಳಿಕ ಸಿಕ್ಕಿಬಿದ್ದ ತನ್ನನ್ನೇ ತಾನು ಕೊಲೆ ಮಾಡಿಕೊಂಡಿದ್ದ ಭೂಪ
11 ವರ್ಷದ ಬಳಿಕ ಸಿಕ್ಕಿಬಿದ್ದ ತನ್ನನ್ನೇ ತಾನು ಕೊಲೆ ಮಾಡಿಕೊಂಡಿದ್ದ ಭೂಪ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ