ಮಿಡಲ್ ವೀಕ್ ಎಲಿಮಿನೇಷನ್; ಧನರಾಜ್ಗೆ ಬ್ಯಾಗ್ ಪ್ಯಾಕ್ ಮಾಡಲು ಹೇಳಿದ ಬಿಗ್ ಬಾಸ್?
‘ಬಿಗ್ ಬಾಸ್ ಕನ್ನಡ ಸೀಸನ್ 11’ ಮೂರನೇ ವಾರಕ್ಕೆ ಕಾಲಿಟ್ಟಿದೆ. ಸ್ಪರ್ಧಿಗಳ ಮಧ್ಯೆ ಜಗಳಗಳು ಜೋರಾಗಿವೆ. ಅದೇ ರೀತಿ ಸ್ಪರ್ಧೆ ಕೂಡ ಹೆಚ್ಚುತ್ತಿದೆ. ಈ ಮಧ್ಯೆ ಬಿಗ್ ಬಾಸ್ ಮನೆಗೆ ಲ್ಯಾಂಡ್ಲೈನ್ನ ಆಗಮನ ಆಗಿದೆ. ಇದರಲ್ಲಿ ಮಿಡ್ ವೀಕ್ ಎಲಿಮಿನೇಷನ್ ನಡೆಯಿತೇ ಎನ್ನುವ ಪ್ರಶ್ನೆ ಮೂಡಿದೆ.
‘ಬಿಗ್ ಬಾಸ್ ಕನ್ನಡ ಸೀಸನ್ 11’ರ ಎರಡನೇ ವಾರ ಯಾವುದೇ ಎಲಿಮಿನೇಷನ್ ನಡೆದಿರಲಿಲ್ಲ. ಬಿಗ್ ಬಾಸ್ನ ಬಹುತೇಕರು ನಾಮಿನೇಟ್ ಆಗಿದ್ದರು. ಆದರೆ, ಯಾರೊಬ್ಬರೂ ಔಟ್ ಆಗಿರಲಿಲ್ಲ. ಆ ವಾರ ಯಾವುದೇ ವೋಟಿಂಗ್ ನಡೆದೇ ಇರಲಿಲ್ಲ. ಹೀಗಾಗಿ, ಮನೆಯಲ್ಲಿ 16 ಸ್ಪರ್ಧಿಗಳ ಮಧ್ಯೆಯೇ ಕಾಂಪಿಟೇಷನ್ ಮುಂದುವರಿದಿದೆ. ಹಾಗಿದ್ದರೆ ಈ ವಾರ ಮಧ್ಯವಾರದಲ್ಲಿ ಒಬ್ಬರು ಹೋಗ್ತಾರಾ? ಮಾನಸಾ ಮಾತಿನಿಂದ ಎಲ್ಲರಲ್ಲೂ ಹೀಗೊಂದು ಅನುಮಾನ ಮೂಡಿದೆ.
‘ಬಿಗ್ ಬಾಸ್ ಕನ್ನಡ ಸೀಸನ್ 11’ರ ಮೂರನೇ ವಾರದಲ್ಲಿ ಫೋನ್ಬೂತ್ ಬಂದಿದೆ. ಇದರ ಮೂಲಕ ಬಿಗ್ ಬಾಸ್ ಮಾತನಾಡುತ್ತಿದ್ದಾರೆ. ವಿಶೇಷ ಎಂದರೆ ತುಕಾಲಿ ಸಂತೋಷ್ ಕೂಡ ಕರೆ ಮಾಡಿ ಸ್ಪರ್ಧಿಗಳ ಜೊತೆ ಮಾತನಾಡುತ್ತಿದ್ದಾರೆ. ಅವರು ಪತ್ನಿ ಮಾನಸಾ ಬಳಿ ಮಾತನಾಡಿ, ಕೆಲವು ಸ್ಪರ್ಧಿಗಳಿಗೆ ಕಿವಿಮಾತನ್ನು ಹೇಳಿದ್ದಾರೆ. ಈ ಕಿವಿಮಾತನ್ನು ಸ್ಪರ್ಧಿಗಳು ಗಂಭೀರವಾಗಿ ಸ್ವೀಕರಿಸಿದ್ದಾರೆ. ಈ ಸಮಯವನ್ನು ಮಾನಸಾ ಎನ್ಕ್ಯಾಚ್ ಮಾಡಿಕೊಂಡಿದ್ದಾರೆ.
ಭವ್ಯಾ, ರಂಜಿತ್, ತ್ರಿವಿಕ್ರಂ ಮೊದಲಾದವರಿಗೆ ಕಿವಿಮಾತನ್ನು ಹೇಳಲಾಗಿತ್ತು. ಇದನ್ನು ಹೋಗಿ ತಲುಪಿಸಿದರು ಮನಾಸಾ. ಆದರೆ, ಧನರಾಜ್ ಆಟದ ಬಗ್ಗೆ ಯಾವುದೇ ಸೂಚನೆ ಬಂದಿರಲಿಲ್ಲ. ಆದರೂ ಮನಾಸಾ ಅವರೇ ಒಂದು ಕಥೆ ಕಟ್ಟಿ ಹೇಳಿದರು. ಅವರ ಮಾತನ್ನು ಕೇಳಿ ಧನರಾಜ್ ಶಾಕ್ ಆದರು.
ಇದನ್ನೂ ಓದಿ: ಬಿಗ್ ಬಾಸ್ ಮನೆಗೆ ಕಾಲ್ ಮಾಡಿ ಭವ್ಯಾ ಗೌಡಗೆ ಐ ಲವ್ ಯೂ ಹೇಳಿದ ತುಕಾಲಿ ಸಂತೋಷ್
‘ಧನು ನಿನಗೊಂದು ವಿಷಯ ಬಂತು. ಎಲ್ಲರ ಮುಂದೆ ಹೇಳಲಾ’ ಎಂದು ಕೇಳಿದರು ಮಾನಸಾ. ಇದಕ್ಕೆ ಓಕೆ ಎಂದರು ಧನರಾಜ್. ‘ಲಗೇಜ್ ಪ್ಯಾಕ್ ಮಾಡಬೇಕಂತೆ. ವಾರದ ಕೊನೆವರೆಗೆ ನೀನು ಇರಲ್ವಂತೆ. ಮಿಡಲ್ ಎಲಿಮಿನೇಷನ್ ಅಂತ ಹೋಗಬಹುದುಂತೆ. ಈಗಲೇ ಬಟ್ಟೆ ಪ್ಯಾಕ್ ಮಾಡಬೇಕಂತೆ. ಬಿಗ್ ಬಾಸ್ ಗಂಭೀರವಾಗಿ ಹೇಳಿದ್ದಾರೆ’ ಎಂದರು ಮಾನಸಾ. ಇದನ್ನು ಕೇಳಿ ಎಲ್ಲರಿಗೂ ಶಾಕ್ ಆಯಿತು. ಆ ಬಳಿಕ ಮಾನಸಾ ಅವರು, ‘ಇದನ್ನು ನಾನೇ ಹೇಳಿದ್ದು, ಬಿಗ್ ಬಾಸ್ ಹೇಳಿಲ್ಲ’ ಎಂದಾಗ ಎಲ್ಲರೂ ನಿಟ್ಟುಸಿರು ಬಿಟ್ಟರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.