ಸುದೀಪ್ ಬಿಗ್ ಬಾಸ್ ತೊರೆಯಲು ಇದೆ ಹಲವು ಕಾರಣ; ಶಾಕಿಂಗ್ ವಿಚಾರ ರಿವೀಲ್ ಮಾಡಿದ ರೂಪೇಶ್ ರಾಜಣ್ಣ

ಮಹಾಭಾರತದಲ್ಲಿ ಕೃಷ್ಣನ ಪಾತ್ರದ ಬಗ್ಗೆ ಹೊಸದಾಗಿ ಹೇಳಬೇಕಿಲ್ಲ. ಇಡೀ ಮಹಭಾರತಕ್ಕೆ ಅವರದ್ದೇ ನೇತೃತ್ವ. ಅವರು ಇಲ್ಲದೆ ಮಹಾಭಾರತವನ್ನು ಊಹಿಸಿಕೊಳ್ಳುವುದು ಕಷ್ಟ. ಈಗ ಸುದೀಪ್ ಅವರು ‘ಬಿಗ್ ಬಾಸ್’ ತೊರೆದ ಬಗ್ಗೆಯೂ ಇದೇ ರೀತಿಯ ಅಭಿಪ್ರಾಯ ವ್ಯಕ್ತವಾಗಿದೆ. ಅವರು ಬಿಗ್ ಬಾಸ್ ತೊರೆದಕ್ಕೆ ಕಾರಣವನ್ನು ರೂಪೇಶ್ ರಾಜಣ್ಣ ವಿವರಿಸಿದ್ದಾರೆ.

ಸುದೀಪ್ ಬಿಗ್ ಬಾಸ್ ತೊರೆಯಲು ಇದೆ ಹಲವು ಕಾರಣ; ಶಾಕಿಂಗ್ ವಿಚಾರ ರಿವೀಲ್ ಮಾಡಿದ ರೂಪೇಶ್ ರಾಜಣ್ಣ
ರೂಪೇಶ್-ಸುದೀಪ್
Follow us
|

Updated on: Oct 15, 2024 | 7:01 AM

ಕನ್ನಡ ಪರ ಹೋರಾಟಗಾರ, ಮಾಜಿ ಬಿಗ್ ಬಾಸ್ ಸ್ಪರ್ಧಿ ರೂಪೇಶ್ ರಾಜಣ್ಣ ಅವರು ‘ಬಿಗ್ ಬಾಸ್’ ಆಯೋಜಕರ ವಿರುದ್ಧ ಹರಿಹಾಯ್ದಿದ್ದರು. ಸುದೀಪ್ ಅವರಿಗೆ ಅವಮಾನ ಆಗಿದೆ ಎಂದು ಅವರು ಹೇಳಿದ್ದರು. ಆದರೆ, ಅದಕ್ಕೆ ನಿಜವಾದ ಕಾರಣಗಳು ಏನು ಎಂಬುದು ರಿವೀಲ್ ಆಗಿರಲಿಲ್ಲ. ಈಗ ಈ ವಿಚಾರವನ್ನು ರೂಪೇಶ್ ರಾಜಣ್ಣ ಅವರು ವಿವರಿಸಿದ್ದಾರೆ. ಸುದೀಪ್ ಬಿಗ್ ಬಾಸ್ ತೊರೆಯಲು ಕಾರಣ ಏನು ಎಂಬುದನ್ನು ಸ್ಪಷ್ಟವಾಗಿ ಹೇಳಿದ್ದಾರೆ.

ಈ ಮೊದಲು ‘ಬಿಗ್ ಬಾಸ್​’ನಲ್ಲಿ ಯಾರಾದರೂ ಇಂಗ್ಲಿಷ್ ಮಾತನಾಡಿದರೆ ಅದನ್ನು ಬಿಗ್ ಬಾಸ್ ಸಹಿಸುತ್ತಿರಲಿಲ್ಲ. ಆಗ ‘ಹುಟ್ಟಿದರೇ ಕನ್ನಡ ನಾಡಲ್ಲಿ ಹುಟ್ಟಬೇಕು’ ಹಾಡನ್ನು ಹಾಕುತ್ತಿದ್ದರು. ಆದರೆ, ಈಗ ಈ ಪದ್ಧತಿ ಅಳಿದು ಹೋಗಿದೆ. ಇದಕ್ಕೆ ಬಿಗ್ ಬಾಸ್ ಆಯೋಜಕರೇ ಕಾರಣ ಎಂದು ಹೇಳಲಾಗುತ್ತಿದೆ. ಇದನ್ನು ಸುದೀಪ್ ಖಂಡಿಸಿದ್ದಾರೆ. ‘ಹೆಚ್ಚು ಇಂಗ್ಲಿಷ್ ಬಳಕೆ ಮಾಡಿದಾಗ ಅದನ್ನು ಪ್ರಶ್ನೆ ಮಾಡಿ’ ಎಂದು ಸುದೀಪ್ ಕೋರಿದ್ದರು. ಆದರೆ, ಇದಕ್ಕೆ ಆಯೋಜಕರು ಒಪ್ಪಿಲ್ಲ.

ಈ ಮೊದಲು ಸ್ವರ್ಗ ಹಾಗೂ ನರಕದ ಕಾನ್ಸೆಪ್ಟ್ ಇತ್ತು. ಸ್ವರ್ಗದ ಮಂದಿ ಹಾಯಾಗಿ ಕುಳಿತಿದ್ದರೆ ನರಕದವರು ನಿಂತೇ ಇದ್ದರು. ಹೀಗಾಗಿ, ಅವರಿಗೆ ಕೂರೂಕೆ ಅವಕಾಶ ಕೊಡಿ ಎಂದು ಸುದೀಪ್ ಕೋರಿದ್ದರು. ಆದರೆ, ಇದಕ್ಕೆ ಆಯೋಜಕರು ಸೊಪ್ಪು ಹಾಕಿಲ್ಲ ಎನ್ನಲಾಗಿದೆ. ಇದು ಸುದೀಪ್ ಕೋಪಕ್ಕೆ ಕಾರಣ ಆಗಿದೆ. ಅಲ್ಲದೆ, ನರಕವಾಸಿಗಳಿಗೆ ಟಾಯ್ಲೆಟ್ ಬಳಕೆಗೆ ಯಾವುದೇ ಷರತ್ತುಗಳನ್ನು ಹಾಕದಂತೆಯೂ ಕೋರಿದ್ದರು.

ಇದನ್ನೂ ಓದಿ: ‘ಕೃಷ್ಣ ಇಲ್ಲದ ಮಹಾಭಾರತ, ಸುದೀಪ್ ಇಲ್ಲದ ಬಿಗ್ ಬಾಸ್ ಎರಡೂ ಒಂದೇ’; ಎಲ್ಲರದ್ದೂ ಒಂದೇ ಅಭಿಪ್ರಾಯ

‘ಎ23 ರಮ್ಮಿ’ ಆ್ಯಪ್​ ಕೂಡ ‘ಬಿಗ್ ಬಾಸ್​’ನ ಸ್ಪಾನ್ಸರ್​ಗಳಲ್ಲಿ ಒಂದಾಗಿದೆ. ಈ ಹೆಸರನ್ನು ತೆಗೆದುಕೊಳ್ಳೋಕೆ ಇರಿಸುಮುರುಸಾಗುತ್ತಿದೆ ಎಂದು ಸುದೀಪ್ ಹೇಳಿದ್ದರು. ಇದನ್ನು ಸ್ವಲ್ಪ ಅವಾಯ್ಡ್ ಮಾಡಿ ಎಂದು ಸುದೀಪ್ ಕೋರಿದ್ದರು. ಆದರೆ, ಆಯೋಜಕರು ಒಪ್ಪಿಲ್ಲ. ಈಗ ಸುದೀಪ್ ಅವರು ಬಿಗ್ ಬಾಸ್ ತೊರೆಯಲು ನಿರ್ಧರಿಸಿರುವುದರಿಂದ ಬದಲಾವಣೆಗಳನ್ನು ಮಾಡಲು ಆಯೋಜಕರು ಒಪ್ಪಿದ್ದಾರೆ ಎನ್ನಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಮಲೀಲಾ ವೇಳೆ ವೇದಿಕೆಯಲ್ಲೇ ಕಿತ್ತಾಡಿಕೊಂಡ ರಾಮ -ರಾವಣ; ವಿಡಿಯೋ ವೈರಲ್
ರಾಮಲೀಲಾ ವೇಳೆ ವೇದಿಕೆಯಲ್ಲೇ ಕಿತ್ತಾಡಿಕೊಂಡ ರಾಮ -ರಾವಣ; ವಿಡಿಯೋ ವೈರಲ್
ರಸ್ತೆಯಲ್ಲೇ ಯುವಕನಿಗೆ ಹೊಡೆದು ಕೊಲೆ; ಮಗನ ಮೇಲೆ ಮಲಗಿ ಬೇಡಿಕೊಂಡ ತಾಯಿ
ರಸ್ತೆಯಲ್ಲೇ ಯುವಕನಿಗೆ ಹೊಡೆದು ಕೊಲೆ; ಮಗನ ಮೇಲೆ ಮಲಗಿ ಬೇಡಿಕೊಂಡ ತಾಯಿ
ದರ್ಶನ್ ಬೇಲ್ ಅರ್ಜಿ ತಿರಸ್ಕೃತ, ಕಾಯುತ್ತಿದ್ದ ಫ್ಯಾನ್ಸ್​ಗೆ ಭಾರೀ ನಿರಾಶೆ
ದರ್ಶನ್ ಬೇಲ್ ಅರ್ಜಿ ತಿರಸ್ಕೃತ, ಕಾಯುತ್ತಿದ್ದ ಫ್ಯಾನ್ಸ್​ಗೆ ಭಾರೀ ನಿರಾಶೆ
ರೋಹಿತ್​ ಪಡೆಗೆ ಗಂಭೀರ ಎಚ್ಚರಿಕೆ ನೀಡಿದ ಕೋಚ್ ಗೌತಮ್
ರೋಹಿತ್​ ಪಡೆಗೆ ಗಂಭೀರ ಎಚ್ಚರಿಕೆ ನೀಡಿದ ಕೋಚ್ ಗೌತಮ್
ಮೌಖಿಕ ಆದೇಶಗಳಿಗೆ ಕಿಮ್ಮತ್ತಿರಲ್ಲ ಅಂತ ಜಮೀರ್​​​ಗೆ ಗೊತ್ತಿಲ್ಲ: ಯತ್ನಾಳ್
ಮೌಖಿಕ ಆದೇಶಗಳಿಗೆ ಕಿಮ್ಮತ್ತಿರಲ್ಲ ಅಂತ ಜಮೀರ್​​​ಗೆ ಗೊತ್ತಿಲ್ಲ: ಯತ್ನಾಳ್
ಆನೆಗಳು ಭಾವುಕ ಜೀವಿಗಳು ಅಂತ ಅರಣ್ಯಾಧಿಕಾರಿ ಹೇಳಿದ್ದು ಶತ ಪ್ರತಿಶತ ಸತ್ಯ
ಆನೆಗಳು ಭಾವುಕ ಜೀವಿಗಳು ಅಂತ ಅರಣ್ಯಾಧಿಕಾರಿ ಹೇಳಿದ್ದು ಶತ ಪ್ರತಿಶತ ಸತ್ಯ
ಪ್ರಾಧ್ಯಾಪಕಿ ಆತ್ಮಹತ್ಯೆಗೆ ಯತ್ನ: 3 ತಿಂಗಳಿನಿಂದ ಕಿರುಕುಳ ಆರೋಪ
ಪ್ರಾಧ್ಯಾಪಕಿ ಆತ್ಮಹತ್ಯೆಗೆ ಯತ್ನ: 3 ತಿಂಗಳಿನಿಂದ ಕಿರುಕುಳ ಆರೋಪ
ಅ.17ರ ವರೆಗೆ ಕರ್ನಾಟಕದಲ್ಲಿ ಭಾರೀ ಮಳೆ: ಯೆಲ್ಲೋ- ಆರೆಂಜ್ ಅಲರ್ಟ್​!
ಅ.17ರ ವರೆಗೆ ಕರ್ನಾಟಕದಲ್ಲಿ ಭಾರೀ ಮಳೆ: ಯೆಲ್ಲೋ- ಆರೆಂಜ್ ಅಲರ್ಟ್​!
ಕೇಸ್ ವಾಪಸ್ಸು ತಗೊಳ್ಳಿ ಅಂತ ಭಿಕ್ಷೆ ಬೇಡುವ ಸ್ಥಿತಿ ಬಂದಿಲ್ಲ: ಸಿಟಿ ರವಿ
ಕೇಸ್ ವಾಪಸ್ಸು ತಗೊಳ್ಳಿ ಅಂತ ಭಿಕ್ಷೆ ಬೇಡುವ ಸ್ಥಿತಿ ಬಂದಿಲ್ಲ: ಸಿಟಿ ರವಿ
ಮುಡಾ ಕೇಸ್: ಲೋಕಾಯುಕ್ತ ಮೇಲೆ ಪ್ರಭಾವ, ಕಾಂಗ್ರೆಸ್​ ವಕ್ತಾರನ ಮೇಲೆ ಆರೋಪ
ಮುಡಾ ಕೇಸ್: ಲೋಕಾಯುಕ್ತ ಮೇಲೆ ಪ್ರಭಾವ, ಕಾಂಗ್ರೆಸ್​ ವಕ್ತಾರನ ಮೇಲೆ ಆರೋಪ