AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಯಾರು ಯಾವಾಗ ಬೇಕಿದ್ರೂ ಹೋಗಬಹುದು’; ಮನೆಯವರಿಗೆ ಎಚ್ಚರಿಕೆ ಕೊಟ್ಟ ಬಿಗ್ ಬಾಸ್

‘ಬಿಗ್ ಬಾಸ್ ಕನ್ನಡ ಸೀಸನ್ 11’ರ ಎರಡನೇ ವಾರ ಯಾವುದೇ ಎಲಿಮಿನೇಷನ್ ನಡೆದಿರಲಿಲ್ಲ. ಬಿಗ್ ಬಾಸ್​ನ ಬಹುತೇಕರು ನಾಮಿನೇಟ್ ಆಗಿದ್ದರು. ಆದರೆ, ಯಾರೊಬ್ಬರೂ ಔಟ್ ಆಗಿರಲಿಲ್ಲ. ಹಾಗಿದ್ದರೆ ಈ ವಾರ ಮಧ್ಯವಾರದಲ್ಲಿ ಒಬ್ಬರು ಹೋಗ್ತಾರಾ? ಹೌದೆನ್ನುತ್ತಿದ್ದಾರಾ ಬಿಗ್ ಬಾಸ್.

‘ಯಾರು ಯಾವಾಗ ಬೇಕಿದ್ರೂ ಹೋಗಬಹುದು’; ಮನೆಯವರಿಗೆ ಎಚ್ಚರಿಕೆ ಕೊಟ್ಟ ಬಿಗ್ ಬಾಸ್
ಬಿಗ್ ಬಾಸ್
ರಾಜೇಶ್ ದುಗ್ಗುಮನೆ
|

Updated on:Oct 16, 2024 | 7:25 AM

Share

‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಎರಡನೇ ವಾರ ಯಾವುದೇ ಎಲಿಮಿನೇಷನ್ ಆಗಿಲ್ಲ. ಈ ರೀತಿಯ ಘಟನೆ ನಡೆದಾಗ ಬಿಗ್ ಬಾಸ್ ಟ್ವಿಸ್ಟ್ ಕೊಡೋದು ವಾಡಿಕೆ. ಇದೇ ರೀತಿಯ ಎಚ್ಚರಿಕೆಯನ್ನು ಬಿಗ್ ಬಾಸ್ ನೀಡಿದ್ದಾರೆ. ಈ ವಾರ ಯಾರು ಯಾವಾಗ ಬೇಕಿದ್ದರೂ ಮನೆಯಿಂದ ಹೊರಕ್ಕೆ ಹೋಗಬಹುದು ಎಂದು ಹೇಳಿದ್ದಾರೆ. ಇದನ್ನು ಕೇಳಿ ಮನೆ ಮಂದಿ ಶಾಕ್​ಗೆ ಒಳಗಾಗಿದ್ದಾರೆ.

ನವರಾತ್ರಿಯ ಸಮಯದಲ್ಲಿ ಬಿಗ್ ಬಾಸ್​ನಲ್ಲಿ ಕಳೆದ ವರ್ಷ ಯಾರನ್ನೂ ಹೊರಕ್ಕೆ ಕಳುಹಿಸಿರಲಿಲ್ಲ. ಈ ವರ್ಷವೂ ಹಾಗೆಯೇ ಆಗಬಹುದು ಎಂದು ಅನೇಕರು ಊಹಿಸಿದ್ದರು. ಹಾಗೆಯೇ ಆಗಿದೆ. ಈ ಬಾರಿಯೂ ಯಾವುದೇ ಎಲಿಮಿನೇಷನ್ ನಡೆದಿಲ್ಲ. ಈ ವಾರ ಎರಡು ಎಲಿಮಿನೇಷನ್ ನಡೆಯೋದು ಪಕ್ಕಾ ಎಂದು ಹೇಳಲಾಗುತ್ತಿದೆ. ಈ ವಿಚಾರದಿಂದ ಮನೆ ಮಂದಿಗೆ ಚಿಂತೆ ಶುರುವಾಗಿದೆ.

‘ಬಿಗ್ ಬಾಸ್ ಕನ್ನಡ ಸೀಸನ್ 11’ರ ಎರಡನೇ ಕ್ಯಾಪ್ಟನ್ ಆಗಿ ಶಿಶಿರ್ ಆಯ್ಕೆಗೊಂಡಿದ್ದಾರೆ. ಅವರು ಪ್ರತಿ ನಿರ್ಧಾರವನ್ನು ಸಾಕಷ್ಟು ಎಚ್ಚರಿಕೆಯಿಂದ ತೆಗೆದುಕೊಳ್ಳಬೇಕಿದೆ. ಅದೇ ರೀತಿ ನೇರ ನಾಮಿನೇಷನ್​ಗೆ ಅವರಿಗೆ ಅಧಿಕಾರ ನೀಡಲಾಗಿದೆ. ಈ ಅಧಿಕಾರವನ್ನು ಅವರು ಬಳಕೆ ಮಾಡಿಕೊಂಡು ಮೊದಲು ಅನುಷಾ ಅವರನ್ನು ನಾಮಿನೇಟ್ ಮಾಡಿದರು. ಆ ಬಳಿಕ ಧನರಾಜ್, ಜಗದೀಶ್ ಹಾಗೂ ಹಂಸ ಅವರನ್ನು ನಾಮಿನೇಟ್ ಮಾಡಿದರು.

ಧನರಾಜ್, ಹಂಸ, ಜಗದೀಶ್ ಅವರನ್ನು ನಾಮಿನೇಟ್ ಮಾಡಿದ ಬಳಿಕ, ‘ಇದು ನೇರ ನಾಮಿನೇಷನ್ ಅಲ್ಲ. ಗೇಮ್ ಆಡಿ ಗೆಲ್ಲೋಕೆ ಎರಡನೇ ಅವಕಾಶ ಇರುತ್ತದೆ’ ಎಂದು ಬಿಗ್ ಬಾಸ್ ಹೇಳಿರೋದಾಗಿ ಶಿಶಿರ್ ಎಲ್ಲರ ಎದುರು ವಿವರಣೆ ನೀಡಿದರು. ಈ ವಿವರಣೆಯ ಬಳಿಕ ಬಿಗ್ ಬಾಸ್, ಶಿಶಿರ್ ಅವರನ್ನು ಕರೆಸಿ, ‘ನಾನೆಲ್ಲಿ ಗೇಮ್ ಆಡಿ ಗೆಲ್ಲೋಕೆ ಎರಡನೇ ಅವಕಾಶ ಇರುತ್ತದೆ ಎಂದು ಹೇಳಿದೆ’ ಎಂದು ಪ್ರಶ್ನೆ ಮಾಡಿದರು.

ಇದನ್ನೂ ಓದಿ: ಅಶ್ಲೀಲವಾಗಿ ಬಿಗ್ ಬಾಸ್ ಶೋ ಬಗ್ಗೆ ಮಾತಾಡಿದ ಜಗದೀಶ್; ಮಿತಿ ಮೀರಿತು ವರ್ತನೆ

‘ಕಳೆದ ವಾರ ಯಾವುದೇ ಎಲಿಮಿನೇಷನ್ ನಡೆದಿಲ್ಲ. ಹೀಗಾಗಿ, ಈ ವಾರ ಯಾರು ಯಾವಾಗ ಹೊರಕ್ಕೆ ಹೋಗುತ್ತಾರೆ ಎಂದು ಹೇಳೋಕಾಗಲ್ಲ’ ಎಂದು ಬಿಗ್ ಬಾಸ್ ಹೇಳಿದರು. ಈ ಹೇಳಿಕೆಯಿಂದ ಅವರು ಸಿಟ್ಟಾದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:24 am, Wed, 16 October 24

Follow Us
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?