AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗೊತ್ತಿದ್ದೂ ನಿಯಮ ಮುರಿದ ಭವ್ಯಾ, ಅನುಷಾ; ಇಡೀ ಮನೆಗೆ ಎರಡೆರಡು ಶಿಕ್ಷೆ, ಕೇಕೆ ಹಾಕಿದ ಜಗದೀಶ್

ಭವ್ಯಾ ಗೌಡ ಹಾಗೂ ಅನುಷಾ ರೈ ಜಿಮ್ ಏರಿಯಾದಲ್ಲಿ ಮೈಕ್ ಧರಿಸದೆ ವ್ಯಾಯಾಮ ಮಾಡುತ್ತಿದ್ದರು. ಇದು ಬಿಗ್ ಬಾಸ್ ಗಮನಕ್ಕೆ ಬಂದಿದೆ. ಈ ಕಾರಣಕ್ಕೆ ಬಿಗ್ ಬಾಸ್ ಶಿಕ್ಷೆ ವಿಧಿಸಿದ್ದಾರೆ. ಅದೂ ಒಂದಲ್ಲ, ಎರಡೆರಡು ಶಿಕ್ಷೆ. ಈ ಶಿಕ್ಷೆಯಿಂದ ಇಡೀ ಮನೆ ಪ್ರಮುಖ ಸವಲುತ್ತಗಳನ್ನೇ ಕಳೆದುಕೊಳ್ಳುವಂತಾಗಿದೆ.

ಗೊತ್ತಿದ್ದೂ ನಿಯಮ ಮುರಿದ ಭವ್ಯಾ, ಅನುಷಾ; ಇಡೀ ಮನೆಗೆ ಎರಡೆರಡು ಶಿಕ್ಷೆ, ಕೇಕೆ ಹಾಕಿದ ಜಗದೀಶ್
ಭವ್ಯಾ-ಅನುಷಾ
ರಾಜೇಶ್ ದುಗ್ಗುಮನೆ
|

Updated on: Oct 17, 2024 | 7:27 AM

Share

ಬಿಗ್ ಬಾಸ್ ಮನೆಯಲ್ಲಿ ಯಾರಾದರೂ ನಿಯಮ ಉಲ್ಲಂಘನೆ ಮಾಡಿದರೆ ಅವರಿಗೆ ಶಿಕ್ಷೆ ನೀಡಲಾಗುತ್ತದೆ. ‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲೂ ಹಾಗೆಯೇ ಆಗಿದೆ. ಭವ್ಯಾ ಗೌಡ ಹಾಗೂ ಅನುಷಾ ಬೇಕಂತಲೇ ನಿಯಮ ಉಲ್ಲಂಘನೆ ಮಾಡಿದ್ದಾರೆ. ಇದರಿಂದ ಇಡೀ ಮನೆ ಶಿಕ್ಷೆ ಅನುಭವಿಸಬೇಕಾಗಿದೆ. ಜಗದೀಶ್ ಅವರು ಈ ಘಟನೆಯಿಂದ ಕೇಕೆ ಹಾಕಿದ್ದಾರೆ. ಇದೇ ನಿಯಮವನ್ನು ಜಗದೀಶ್ ಬ್ರೇಕ್ ಮಾಡಿದ್ದರೆ ಮನೆಯವರು ಪ್ರತಿಕ್ರಿಯಿಸುವ ರೀತಿ ಬೇರೆ ಇರುತ್ತಿತ್ತು ಎಂದು ಕೆಲವರು ಅಭಿಪ್ರಾಯ ಹೊರಹಾಕಿದ್ದಾರೆ.

ಭವ್ಯಾ ಗೌಡ ಹಾಗೂ ಅನುಷಾ ರೈ ಜಿಮ್ ಏರಿಯಾದಲ್ಲಿ ಮೈಕ್ ಧರಿಸದೆ ವ್ಯಾಯಾಮ ಮಾಡುತ್ತಿದ್ದರು. ಇದು ಬಿಗ್ ಬಾಸ್ ಗಮನಕ್ಕೆ ಬಂದಿದೆ. ಈ ಕಾರಣಕ್ಕೆ ಬಿಗ್ ಬಾಸ್ ಶಿಕ್ಷೆ ವಿಧಿಸಿದ್ದಾರೆ. ಅದೂ ಒಂದಲ್ಲ, ಎರಡೆರಡು ಶಿಕ್ಷೆ. ಈ ಶಿಕ್ಷೆಯಿಂದ ಇಡೀ ಮನೆ ಪ್ರಮುಖ ಸವಲುತ್ತಗಳನ್ನೇ ಕಳೆದುಕೊಳ್ಳುವಂತಾಗಿದೆ.

ಭವ್ಯಾ ಹಾಗೂ ಅನುಷಾ ಮೈಕ್ ಧರಿಸಿರಲಿಲ್ಲ. ಈ ವೇಳೆ ಅವರಿಗೆ ಮೈಕ್ ಧರಿಸುವಂತೆ ಸೂಚನೆ ನೀಡಿದರು ಕ್ಯಾಪ್ಟನ್ ಶಿಶಿರ್. ವಾಶ್​ರೂಂಗೆ ಹೋಗಿ ಬಂದು ಮೈಕ್ ಧರಿಸೋದಾಗಿ ಭವ್ಯಾ ಹೇಳಿದರು. ಆ ಬಳಿಕ ವಾಶ್​ರೂಂನಿಂದ ಬಂದ ಭವ್ಯಾ ಅವರು ಶವಾಸನ ಮಾಡಿದರು. ಆಗಲೂ ಮೈಕ್ ಹಾಕಿರಲಿಲ್ಲ. ಈ ವೇಳೆ ಭವ್ಯಾ ಹಾಗೂ ಅನುಷಾ ಸಾಕಷ್ಟು ವಿಚಾರಗಳ ಬಗ್ಗೆ ಮಾತನಾಡಿಕೊಂಡಿದ್ದಾರೆ. ಇದರಿಂದ ಎರಡು ಶಿಕ್ಷೆಯನ್ನು ಬಿಗ್ ಬಾಸ್ ನೀಡಿದ್ದಾರೆ.

ಮೊದಲನೆಯದು, ಜಿಮ್ ವಸ್ತುಗಳನ್ನು ಬಳಕೆ ಮಾಡುವಂತಿಲ್ಲ. ಜಿಮ್ ವಸ್ತುಗಳನ್ನು ಬಳಸದೆಯೂ ಎಲ್ಲರೂ ಹಾಯಾಗಿ ಇರಬಹುದು. ಅದು ಅತೀ ಅಗತ್ಯ ಎಂಬುದೇನಲ್ಲ. ಆದರೆ, ಬಿಗ್ ಬಾಸ್ ನೀಡಿದ ಮತ್ತೊಂದು ಶಿಕ್ಷೆ ಕಠಿಣವಾಗಿದೆ. ಬಿಗ್ ಬಾಸ್​ನ ಮುಂದಿನ ಆದೇಶದವರೆಗೆ ಯಾರೂ ಬೆಡ್ ಬಳಸುವಂತಿಲ್ಲ ಎಂದಿದೆ. ಇದು ಇಡೀ ಮನೆಯನ್ನು ಕಂಗಾಲು ಮಾಡಿದೆ.

ಇದನ್ನೂ ಓದಿ: ಬಿಗ್ ಬಾಸ್ ಮನೆಗೆ ಕಾಲ್ ಮಾಡಿ ಭವ್ಯಾ ಗೌಡಗೆ ಐ ಲವ್​ ಯೂ ಹೇಳಿದ ತುಕಾಲಿ ಸಂತೋಷ್

ಕ್ಯಾಮೆರಾ ಎದುರು ಬಂದ ಭವ್ಯಾ ಹಾಗೂ ಅನುಷಾ, ‘ನಾವು ಮಾಡಿದ ತಪ್ಪಿಗೆ ಮನೆಗೆ ಕೊಡಬೇಡಿ. ನಮಗೆ ಶಿಕ್ಷೆ ಕೊಡಿ’ ಎಂದು ಕೇಳಿದರು. ಬಿಗ್ ಬಾಸ್ ಕೊಟ್ಟ ಶಿಕ್ಷೆಗೆ ಎಲ್ಲರೂ ಖುಷಿಪಟ್ಟರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಆಗ ವೀರಪ್ಪನ್‌ ಕೇಸ್‌ನಲ್ಲಿ ಗಿಫ್ಟ್‌: ಹೆಚ್​ಡಿ ಕುಮಾರಸ್ವಾಮಿ ಹೊಸ ಬಾಂಬ್‌
ಆಗ ವೀರಪ್ಪನ್‌ ಕೇಸ್‌ನಲ್ಲಿ ಗಿಫ್ಟ್‌: ಹೆಚ್​ಡಿ ಕುಮಾರಸ್ವಾಮಿ ಹೊಸ ಬಾಂಬ್‌
ಬಾಂಗ್ಲಾ ಜೊತೆಗೆ ಪಾಕಿಸ್ತಾನ ಕೂಡ ಟಿ20 ವಿಶ್ವಕಪ್​ನಿಂದ ಔಟ್?
ಬಾಂಗ್ಲಾ ಜೊತೆಗೆ ಪಾಕಿಸ್ತಾನ ಕೂಡ ಟಿ20 ವಿಶ್ವಕಪ್​ನಿಂದ ಔಟ್?
ಬೆಂಗಳೂರಿನಲ್ಲಿ ಫುಲ್ ಟ್ರಾಫಿಕ್: ತಡೆಯಲಾಗದೇ ರಸ್ತೆಯಲ್ಲಿ ಮೂತ್ರ ವಿಸರ್ಜನೆ!
ಬೆಂಗಳೂರಿನಲ್ಲಿ ಫುಲ್ ಟ್ರಾಫಿಕ್: ತಡೆಯಲಾಗದೇ ರಸ್ತೆಯಲ್ಲಿ ಮೂತ್ರ ವಿಸರ್ಜನೆ!
ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ನಿಯಂತ್ರಿಸಲು ಪೊಲೀಸರ ಪ್ಲ್ಯಾನ್: ಏನದು?
ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ನಿಯಂತ್ರಿಸಲು ಪೊಲೀಸರ ಪ್ಲ್ಯಾನ್: ಏನದು?
ಮೂಲಕ ಧರ್ಮ ಪ್ರಚಾರದ ವಾಹನವಾದ ಪಂಚಾಯ್ತಿ ಸ್ವಚ್ಛತಾ ಗಾಡಿ!
ಮೂಲಕ ಧರ್ಮ ಪ್ರಚಾರದ ವಾಹನವಾದ ಪಂಚಾಯ್ತಿ ಸ್ವಚ್ಛತಾ ಗಾಡಿ!
ಚಾಕು, ಲಾಂಗ್‌ ಹಿಡಿದು ಬೀದಿಗಳಲ್ಲಿ ಅಡ್ಡಾಡುತ್ತಿರುವ ಕಳ್ಳರು
ಚಾಕು, ಲಾಂಗ್‌ ಹಿಡಿದು ಬೀದಿಗಳಲ್ಲಿ ಅಡ್ಡಾಡುತ್ತಿರುವ ಕಳ್ಳರು
ಲಕ್ಕುಂಡಿ ಸಂಪತ್ತು ಕಾಯ್ತಾ ಇದೆಯಾ ಘಟಸರ್ಪ? ಬೃಹತ್ ಘಟಸರ್ಪ ಮೂರ್ತಿ ಪತ್ತೆ!
ಲಕ್ಕುಂಡಿ ಸಂಪತ್ತು ಕಾಯ್ತಾ ಇದೆಯಾ ಘಟಸರ್ಪ? ಬೃಹತ್ ಘಟಸರ್ಪ ಮೂರ್ತಿ ಪತ್ತೆ!
ಸಿದ್ದರಾಮಯ್ಯ ಆಗಮನಕ್ಕೂ ಮುನ್ನ ಬೃಹತ್ ಕಟೌಟ್​ಗಳು ಬಿದ್ದು ನಾಲ್ವರಿಗೆ ಗಾಯ
ಸಿದ್ದರಾಮಯ್ಯ ಆಗಮನಕ್ಕೂ ಮುನ್ನ ಬೃಹತ್ ಕಟೌಟ್​ಗಳು ಬಿದ್ದು ನಾಲ್ವರಿಗೆ ಗಾಯ
ಮಗನ ‘ಕಲ್ಟ್’ ಸಿನಿಮಾ ನೋಡಿ ವಿಮರ್ಶೆ ತಿಳಿಸಿದ ಜಮೀರ್ ಅಹ್ಮದ್
ಮಗನ ‘ಕಲ್ಟ್’ ಸಿನಿಮಾ ನೋಡಿ ವಿಮರ್ಶೆ ತಿಳಿಸಿದ ಜಮೀರ್ ಅಹ್ಮದ್
ಕುಮಾರ ಷಷ್ಠಿ ಆಚರಣೆಯ ವಿಧಾನ ಹಾಗೂ ಮಹತ್ವ
ಕುಮಾರ ಷಷ್ಠಿ ಆಚರಣೆಯ ವಿಧಾನ ಹಾಗೂ ಮಹತ್ವ