AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಂಜು ಆ ರೀತಿ ಮಾಡದೇ ಇದ್ದಿದ್ದರೆ ಇಷ್ಟೆಲ್ಲ ಆಗುತ್ತಿರಲಿಲ್ಲ; ಎಲ್ಲವೂ ಶುರುವಾಗಿದ್ದು ಎಲ್ಲಿ?

ಕೆಲವು ವರದಿಗಳ ಪ್ರಕಾರ ದೊಡ್ಮನೆಯಲ್ಲಿ ಜಗದೀಶ್ ಹಾಗೂ ರಂಜಿತ್ ಮಧ್ಯೆ ಫೈಟ್ ನಡೆದಿದೆ ಎಂದು ಹೇಳಲಾಗುತ್ತಿದೆ. ಬಿಗ್ ಬಾಸ್ ನಿಯಮಗಳ ಪ್ರಕಾರ ಮನೆಯಲ್ಲಿ ಫೈಟ್ ಆದರೆ ಅದರ ಭಾಗಿದಾರರನ್ನು ನೇರವಾಗಿ ಹೊರಹಾಕಲಾಗುತ್ತದೆ. ಈಗ ಜಗದೀಶ್ ಹಾಗೂ ರಂಜಿತ್ ಬಡಿದಾಡಿಕೊಂಡು ಹೊರ ಹೋದರು ಎನ್ನಲಾಗಿದೆ. ಇದು ಆರಂಭ ಆಗಿದ್ದು ಎಲ್ಲಿಂದ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

ಮಂಜು ಆ ರೀತಿ ಮಾಡದೇ ಇದ್ದಿದ್ದರೆ ಇಷ್ಟೆಲ್ಲ ಆಗುತ್ತಿರಲಿಲ್ಲ; ಎಲ್ಲವೂ ಶುರುವಾಗಿದ್ದು ಎಲ್ಲಿ?
ಜಗದೀಶ್-ಮಂಜು
ರಾಜೇಶ್ ದುಗ್ಗುಮನೆ
|

Updated on: Oct 17, 2024 | 6:56 AM

Share

‘ಬಿಗ್ ಬಾಸ್ ಕನ್ನಡ ಸೀಸನ್ 11’ರಿಂದ ಲಾಯರ್ ಜಗದೀಶ್ ಅವರು ಎಲಿಮಿನೇಟ್ ಆಗಿದ್ದಾರೆ ಎಂದು ವರದಿ ಆಗಿದೆ. ಅವರು ಹಾಗೂ ರಂಜಿತ್ ಮಧ್ಯೆ ಫೈಟ್ ನಡೆದು ಇಬ್ಬರೂ ಹೊರ ಹೋದರು ಎಂದು ಹೇಳಲಾಗುತ್ತಿದೆ. ಅದನ್ನೂ ಇನ್ನೂ ತೋರಿಸಿಲ್ಲ. ಆದರೆ, ಸುಮ್ಮನೆ ಇದ್ದ ಜಗದೀಶ್ ಅವರನ್ನು ಕೆರಳಿಸುವ ಕೆಲಸವನ್ನು ಮಾಡಿದ್ದು ಮಂಜು. ಇದೆಲ್ಲ ದೊಡ್ಡ ರಾಮಾಯಣಕ್ಕೆ ಕಾರಣ ಆಯಿತು.

‘ಬಿಗ್ ಬಾಸ್’ ಮನೆಯಲ್ಲಿ ಜಗದೀಶ್ ಅವರು ಇತಿ-ಮಿತಿ ಕಳೆದುಕೊಂಡು ಕೂಗಾಡುತ್ತಿದ್ದರು. ಈ ಕಾರಣಕ್ಕೆ ಅವರನ್ನು ಕನ್​ಫೆಷನ್ ರೂಂಗೆ ಬರುವಂತೆ ಬಿಗ್ ಬಾಸ್ ಸೂಚನೆ ನೀಡಿದರು. ಈ ಸೂಚನೆಯನ್ನು ಅವರು ಪಾಲಿಸಿದರು. ಆಗ ಎಲ್ಲವೂ ಸೈಲೆಂಟ್ ಆಗಿಯೇ ಇತ್ತು. ಮರುದಿನ ಮತ್ತೆ ಸ್ಪರ್ಧಿಗಳ ಮಧ್ಯೆ ಕಿತ್ತಾಟ ಶುರವಾಯಿತು. ಎಲ್ಲರೂ ಕಿತ್ತಾಡಿಕೊಳ್ಳೋಕೆ ಆರಂಭಿಸಿದರು. ಆಗ ಬಿಗ್ ಬಾಸ್ ಮಧ್ಯೆ ಬರಬೇಕಾಯಿತು.

ಪರಿಸ್ಥಿತಿ ಕೈ ಕೈ ಮಿಲಾಯಿಸಿಕೊಳ್ಳುವ ಹಂತಕ್ಕೆ ಹೋದಾಗ ಬಿಗ್ ಬಾಸ್ ಮಧ್ಯೆ ಬಂದು ಎಲ್ಲರನ್ನೂ ಕೂರಿಸಿದರು. ಆಗ ಎಲ್ಲವೂ ಸೈಲೆಂಟ್ ಆಯಿತು. ಇದಾದ ಬಳಿಕ ಮಂಜು ಅವರು ಪದೇ ಪದೇ ಜಗದೀಶ್ ಅವರನ್ನು ಕೆಣಕೋಕೆ ಆರಂಭಿಸಿದರು. ಅವರಿಗೆ ಮನೆಯ ಮತ್ತೊಂದಷ್ಟು ಮಂದಿ ಸಾತ್ ಕೊಟ್ಟರು. ತಾವು ಏಕಾಂಗಿ ಎನ್ನುವ ಫೀಲ್ ಜಗದೀಶ್​ಗೆ ಬಂದಿತ್ತು.

ಇದನ್ನೂ ಓದಿ: ಬಿಗ್ ಬಾಸ್​ನಲ್ಲಿ ರಂಜಿತ್-ಜಗದೀಶ್ ಮಧ್ಯೆ ಫೈಟ್? ಇಬ್ಬರೂ ಔಟ್

ಮಂಜು ಅವರು ಅಷ್ಟೊಂದು ಕೆಣಕದೇ ಇದ್ದಿದ್ದರೆ ಬಹುಶಃ ಜಗದೀಶ್ ಅವರು ಅಷ್ಟೊಂದು ಉಗ್ರ ಸ್ವರೂಪ ತಾಳುತ್ತಿರಲಿಲ್ಲವೇನೋ. ಮುಂದಾಗುವ ಫೈಟ್​ಗೆ ಇದುವೇ ಬುನಾದಿ ಹಾಕಿತ್ತು. ಇನ್ನು ಮಾನಸಾ ಹಾಗೂ ಜಗದೀಶ್ ಮಧ್ಯೆ ಕಿತ್ತಾಟ ನಡೆಯುವಾಗ ರಂಜಿತ್, ತ್ರಿವಿಕ್ರಂ ಹಾಗೂ ಮಂಜು ಮಧ್ಯ ಪ್ರವೇಶ ಮಾಡಿದ್ದು ಕೂಡ ತಪ್ಪು ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ. ಈಗ ಜಗದೀಶ್ ಹಾಗೂ ಮಂಜು ನಿಜಕ್ಕೂ ಹೊರ ಹೋಗಿದ್ದಾರೆ ಎನ್ನುವ ಪ್ರಶ್ನೆ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಆಗ ವೀರಪ್ಪನ್‌ ಕೇಸ್‌ನಲ್ಲಿ ಗಿಫ್ಟ್‌: ಹೆಚ್​ಡಿ ಕುಮಾರಸ್ವಾಮಿ ಹೊಸ ಬಾಂಬ್‌
ಆಗ ವೀರಪ್ಪನ್‌ ಕೇಸ್‌ನಲ್ಲಿ ಗಿಫ್ಟ್‌: ಹೆಚ್​ಡಿ ಕುಮಾರಸ್ವಾಮಿ ಹೊಸ ಬಾಂಬ್‌
ಬಾಂಗ್ಲಾ ಜೊತೆಗೆ ಪಾಕಿಸ್ತಾನ ಕೂಡ ಟಿ20 ವಿಶ್ವಕಪ್​ನಿಂದ ಔಟ್?
ಬಾಂಗ್ಲಾ ಜೊತೆಗೆ ಪಾಕಿಸ್ತಾನ ಕೂಡ ಟಿ20 ವಿಶ್ವಕಪ್​ನಿಂದ ಔಟ್?
ಬೆಂಗಳೂರಿನಲ್ಲಿ ಫುಲ್ ಟ್ರಾಫಿಕ್: ತಡೆಯಲಾಗದೇ ರಸ್ತೆಯಲ್ಲಿ ಮೂತ್ರ ವಿಸರ್ಜನೆ!
ಬೆಂಗಳೂರಿನಲ್ಲಿ ಫುಲ್ ಟ್ರಾಫಿಕ್: ತಡೆಯಲಾಗದೇ ರಸ್ತೆಯಲ್ಲಿ ಮೂತ್ರ ವಿಸರ್ಜನೆ!
ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ನಿಯಂತ್ರಿಸಲು ಪೊಲೀಸರ ಪ್ಲ್ಯಾನ್: ಏನದು?
ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ನಿಯಂತ್ರಿಸಲು ಪೊಲೀಸರ ಪ್ಲ್ಯಾನ್: ಏನದು?
ಮೂಲಕ ಧರ್ಮ ಪ್ರಚಾರದ ವಾಹನವಾದ ಪಂಚಾಯ್ತಿ ಸ್ವಚ್ಛತಾ ಗಾಡಿ!
ಮೂಲಕ ಧರ್ಮ ಪ್ರಚಾರದ ವಾಹನವಾದ ಪಂಚಾಯ್ತಿ ಸ್ವಚ್ಛತಾ ಗಾಡಿ!
ಚಾಕು, ಲಾಂಗ್‌ ಹಿಡಿದು ಬೀದಿಗಳಲ್ಲಿ ಅಡ್ಡಾಡುತ್ತಿರುವ ಕಳ್ಳರು
ಚಾಕು, ಲಾಂಗ್‌ ಹಿಡಿದು ಬೀದಿಗಳಲ್ಲಿ ಅಡ್ಡಾಡುತ್ತಿರುವ ಕಳ್ಳರು
ಲಕ್ಕುಂಡಿ ಸಂಪತ್ತು ಕಾಯ್ತಾ ಇದೆಯಾ ಘಟಸರ್ಪ? ಬೃಹತ್ ಘಟಸರ್ಪ ಮೂರ್ತಿ ಪತ್ತೆ!
ಲಕ್ಕುಂಡಿ ಸಂಪತ್ತು ಕಾಯ್ತಾ ಇದೆಯಾ ಘಟಸರ್ಪ? ಬೃಹತ್ ಘಟಸರ್ಪ ಮೂರ್ತಿ ಪತ್ತೆ!
ಸಿದ್ದರಾಮಯ್ಯ ಆಗಮನಕ್ಕೂ ಮುನ್ನ ಬೃಹತ್ ಕಟೌಟ್​ಗಳು ಬಿದ್ದು ನಾಲ್ವರಿಗೆ ಗಾಯ
ಸಿದ್ದರಾಮಯ್ಯ ಆಗಮನಕ್ಕೂ ಮುನ್ನ ಬೃಹತ್ ಕಟೌಟ್​ಗಳು ಬಿದ್ದು ನಾಲ್ವರಿಗೆ ಗಾಯ
ಮಗನ ‘ಕಲ್ಟ್’ ಸಿನಿಮಾ ನೋಡಿ ವಿಮರ್ಶೆ ತಿಳಿಸಿದ ಜಮೀರ್ ಅಹ್ಮದ್
ಮಗನ ‘ಕಲ್ಟ್’ ಸಿನಿಮಾ ನೋಡಿ ವಿಮರ್ಶೆ ತಿಳಿಸಿದ ಜಮೀರ್ ಅಹ್ಮದ್
ಕುಮಾರ ಷಷ್ಠಿ ಆಚರಣೆಯ ವಿಧಾನ ಹಾಗೂ ಮಹತ್ವ
ಕುಮಾರ ಷಷ್ಠಿ ಆಚರಣೆಯ ವಿಧಾನ ಹಾಗೂ ಮಹತ್ವ