
ಸಲ್ಮಾನ್ ಖಾನ್ ನಡೆಸಿಕೊಡುವ ‘ಹಿಂದಿ ಬಿಗ್ ಬಾಸ್ ಸೀಸನ್ 20’ರ (Bigg Boss) ಆರಂಭಕ್ಕೆ ದಿನಗಣನೆ ಶುರುವಾಗಿದೆ. ಸೆಪ್ಟೆಂಬರ್ 6ರಿಂದ ಈ ಶೋ ಪ್ರಸಾರವಾಗಲಿದೆ. ಸ್ಪರ್ಧಿಗಳ ಪಟ್ಟಿ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ. ಈಗ ಐಪಿಎಲ್ ಮಾಜಿ ಮುಖ್ಯಸ್ಥ ಲಲಿತ್ ಮೋದಿ ಹೆಸರು ಮುನ್ನೆಲೆಗೆ ಬಂದಿದೆ. ಅವರು ಶೋಗೆ ಬರುವ ಸಾಧ್ಯತೆ ಇದೆ ಎನ್ನಲಾಗಿದೆ. ಇದು ವೀಕ್ಷಕರಲ್ಲಿ ಕುತೂಹಲ ಕೆರಳಿಸಿದೆ. ಆದರೆ, ಇದನ್ನು ಅವರೇ ಅಲ್ಲಗಳೆದಿದ್ದಾರೆ.
ಬಾಲಿವುಡ್ ಬಬಲ್ ವರದಿಯ ಪ್ರಕಾರ ಬಿಗ್ ಬಾಸ್ ತಂಡ ಲಲಿತ್ ಮೋದಿ ಅವರನ್ನು ಸಂಪರ್ಕಿಸಿದೆ. ಆದರೆ ಈ ಬಗ್ಗೆ ಇನ್ನು ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಲಲಿತ್ ಮೋದಿ ಹಾಗೂ ವಾಹಿನಿ ಯಾವುದೇ ಸ್ಪಷ್ಟನೆ ನೀಡಿಲ್ಲ. ಒಂದು ವೇಳೆ ಅವರು ಮನೆಗೆ ಬಂದರೆ ದೊಡ್ಡ ಹಂಗಾಮ ಸೃಷ್ಟಿಯಾಗಲಿದೆ. ಐಪಿಎಲ್ನಲ್ಲಿ ನಡೆದ ಅನೇಕ ಕರ್ಮಕಾಂಡಗಳ ಬಗ್ಗೆ ಸಂದರ್ಶನಗಳಲ್ಲಿ ಓಪನ್ ಆಗಿ ಮಾತನಾಡಿದ್ದು ಇದೆ. ಅವರು ಬಿಗ್ ಬಾಸ್ಗೆ ಬಂದರೆ ಮತ್ತಷ್ಟು ವಿಷಯಗಳು ರಿವೀಲ್ ಆಗುವ ನಿರೀಕ್ಷೆ ಇತ್ತು
ಲಲಿತ್ ಮೋದಿ ಅವರು ಕ್ರಿಕೆಟ್ ಅಷ್ಟೇ ಅಲ್ಲದೆ ವೈಯಕ್ತಿಕ ಜೀವನದಿಂದಲೂ ಸುದ್ದಿಯಲ್ಲಿದ್ದಾರೆ. ನಟಿ ಸುಶ್ಮಿತಾ ಸೇನ್ ಜೊತೆಗಿನ ಲವ್ ಸ್ಟೋರಿ ಸಾಕಷ್ಟು ಸದ್ದು ಮಾಡಿತ್ತು. 2022 ರ ಜುಲೈನಲ್ಲಿ ಅವರು ಈ ವಿಷಯವನ್ನು ಬಹಿರಂಗಪಡಿಸಿದ್ದರು. ಇತ್ತೀಚೆಗೆ ಹ್ಯೂಮನ್ಸ್ ಆಫ್ ಬಾಂಬೆ ಸಂದರ್ಶನದಲ್ಲೂ ಅವರು ಈ ಬಗ್ಗೆ ಮಾತನಾಡಿದ್ದರು. ಸುಶ್ಮಿತಾ ನನ್ನ ಜೀವನದಲ್ಲಿ ತುಂಬಾ ವಿಶೇಷ ವ್ಯಕ್ತಿ ಎಂದು ಹೇಳಿದ್ದರು. ನಮ್ಮಿಬ್ಬರ ದೇಶಗಳು ಬೇರೆ ಬೇರೆಯಾಗಿದ್ದವು. ನಾನು ಲಂಡನ್‌ನಲ್ಲಿದ್ದೆ, ಸುಶ್ಮಿತಾ ಭಾರತದಲ್ಲಿದ್ದರು. ಈ ಸುದೀರ್ಘ ದೂರದಿಂದಾಗಿ ನಾವಿಬ್ಬರು ದೂರವಾಗಬೇಕಾಯಿತು ಎಂದಿದ್ದರು.
ಇದನ್ನೂ ಓದಿ: ‘ಜಡ್ಜ್ ಆಗಿ ತಪ್ಪುಮಾಡಿದೆ’; ‘ಬಿಗ್ ಬಾಸ್ ಅಗ್ನಿಪರೀಕ್ಷೆ’ ಟ್ರೋಲ್ಸ್ನಿಂದ ಸಂಗೀತಾ ಶೃಂಗೇರಿ ಕಂಗಾಲು
ಸುಶ್ಮಿತಾ ಅವರನ್ನು ‘ಗೋಲ್ಡ್ ಡಿಗ್ಗರ್’ ಎಂದು ಕರೆದಾಗ ಲಲಿತ್ ಮೋದಿ ಕೌಂಟರ್ ಕೊಟ್ಟಿದ್ದರು. ಸುಶ್ಮಿತಾ ಸ್ವತಂತ್ರ ಮಹಿಳೆ ಎಂದು ಬೆಂಬಲವಾಗಿ ನಿಂತಿದ್ದರು. ಅನೇಕ ಬಾರಿ ಅವರೇ ಬಿಲ್ ಪಾವತಿಸುತ್ತಿದ್ದರು ಎಂದಿದ್ದರು. ಆದರೆ, ಇದು ಫೇಕ್ ನ್ಯೂಸ್ ಎಂದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 6:56 am, Sat, 15 August 26