ಕಲರ್ಸ್​ಗೆ ಬಂದು ಮತ್ತಷ್ಟು ಫೇಮಸ್ ಆದ ಹನುಮಂತ; ಜೀ ಕನ್ನಡ ಪ್ರತಿಕ್ರಿಯಿಸಿದ್ದು ಹೀಗೆ

ಹನುಮಂತ, ಜೀ ಕನ್ನಡದ ಸರಿಗಮಪದಿಂದ ಜನಪ್ರಿಯತೆ ಗಳಿಸಿದ ನಂತರ ಅವರು ಬಿಗ್ ಬಾಸ್ ಕನ್ನಡಕ್ಕೆ ಬಂದು ಶೋಗೆದ್ದಿದ್ದಾರೆ. ಕುರಿ ಕಾಯುವವನಿಂದ ರಿಯಾಲಿಟಿ ಶೋ ಸ್ಪರ್ಧಿಯಾಗಿ, ಮತ್ತು ಈಗ ಬಿಗ್ ಬಾಸ್ ವಿಜೇತನಾಗಿ ಅವರ ಪ್ರಯಾಣ ಅದ್ಭುತವಾಗಿದೆ. ಜೀ ಕನ್ನಡ ವಾಹಿನಿ ಅವರ ಗೆಲುವನ್ನು ಸಂಭ್ರಮಿಸಿದೆ ಮತ್ತು ಅವರ ಪ್ರತಿಭೆಯನ್ನು ಮತ್ತೆ ಹೊಗಳಿದೆ.

ಕಲರ್ಸ್​ಗೆ ಬಂದು ಮತ್ತಷ್ಟು ಫೇಮಸ್ ಆದ ಹನುಮಂತ; ಜೀ ಕನ್ನಡ ಪ್ರತಿಕ್ರಿಯಿಸಿದ್ದು ಹೀಗೆ
ಹನುಮಂತ

Updated on: Jan 28, 2025 | 1:30 PM

ಹನುಮಂತ ಅವರು ‘ಬಿಗ್ ಬಾಸ್’ ವಿನ್ನರ್ ಕಿರೀಟ ಪಡೆದಿದ್ದಾರೆ. ಅವರಿಗೆ ಬಿಗ್ ಬಾಸ್ ಸಾಕಷ್ಟು ಜನಪ್ರಿಯತೆ ನೀಡಿದೆ. ಈ ಶೋ ಮೂಲಕ ಅವರ ಅಭಿಮಾನಿ ಬಳಗ ಕೂಡ ಹಿರಿದಾಗಿದೆ. ಈ ಪ್ರತಿಭೆಯನ್ನು ಮೊದಲು ಗುರುತಿಸಿದ್ದು ಜೀ ಕನ್ನಡ. ಹೌದು, ಕೆಲ ವರ್ಷಗಳ ಹಿಂದೆ ಜೀ ಕನ್ನಡದ ‘ಸರಿಗಮಪ’ ಶೋ ಮೂಲಕ ಹನುಮಂತ ಅವರು ನಾಡಿನ ಜನತೆಗೆ ಪರಿಚಯ ಆದರು. ಈಗ ಅವರು ಕಲರ್ಸ್​ಗೆ ತೆರಳಿ ‘ಬಿಗ್ ಬಾಸ್’ ವಿನ್ ಆಗಿದ್ದಕ್ಕೆ ಜೀ ಕನ್ನಡ ವಾಹಿನಿ ಅಭಿನಂದನೆ ತಿಳಿಸಿದೆ.

ಹನುಮಂತ ಅವರು ಶಿಕ್ಷಣ ಪಡೆದ ಅವರು, ಕುರಿ ಕಾಯುವಿಕೆಯನ್ನು ಆಯ್ದುಕೊಂಡರು. ಆಗ ಹಾಡುಗಳನ್ನು ಹಾಡುತ್ತಿದ್ದರು. ಆ ಬಳಿಕ ಅವರು ‘ಸರೆಗಮಪ ಸೀಸನ್ 15’ರ ಸ್ಪರ್ಧಿಯಾಗಿ ಬಂದರು. ಅಲ್ಲಿ ಅವರು ರನ್ನರ್​ಅಪ್ ಆದರು. ಇದಲ್ಲದೆ, ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಫ್ಯಾಮಿಲಿ ವಾರ್ ಸೀಸನ್ 2’ನಲ್ಲಿ ಭಾಗವಹಿಸಿದರು. ಇವರು ಇನ್ನೂ ಕೆಲವು ರಿಯಾಲಿಟಿ ಶೋಗಳನ್ನು ಮಾಡಿದರು. ಈಗ ಬಿಗ್ ಬಾಸ್ ವಿನ್ ಆಗಿ ಇತಿಹಾಸ ಬರೆದಿದ್ದಾರೆ.

ಹನುಮಂತ ಅವರ ಗೆಲುವಿಗೆ ಜೀ ಕನ್ನಡ ಪ್ರತಿಕ್ರಿಯಿಸಿದೆ. ‘ಪ್ರೀತಿಯ ಹನುಮಂತ, ನಮ್ಮ ಸರಿಗಮಪ ವೇದಿಕೆಗೆ ಈ ಅದಮ್ಯ ಪ್ರತಿಭೆಯನ್ನು ಹುಡುಕಿ, ಬೆಳಕಿಗೆ ತಂದ ಜೀ ಕನ್ನಡಕ್ಕೆ ನಿಮ್ಮ ಬಗ್ಗೆ ಹೆಮ್ಮೆ ಇದೆ’ ಎಂದು ಜೀ ಕನ್ನಡ ಪೋಸ್ಟ್ ಮಾಡಿದೆ. ಇದಕ್ಕೆ ನಿಮ್ಮಂಥ ನೆಲಮೂಲದ ಪ್ರತಿಭೆಯನ್ನು ಹುಡುಕಿ, ಬೆಳಕಿಗೆ ತಂದ ಜೀ ಕನ್ನಡ ನಿಮ್ಮ ಗೆಲುವನ್ನು ಸಂಭ್ರಮಿಸುತ್ತದೆ. ಹನುಮಂತ ಅವರೇ ನಿಮ್ಮ ಗೆಲುವಿಗೆ ಹಾರ್ದಿಕ ಅಭಿನಂದನೆಗಳು’ ಎಂದು ಅವರು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಬಿಗ್ ಬಾಸ್​ನ ಈ ಸ್ಪರ್ಧಿಗಳ ಇನ್​ಸ್ಟಾಗ್ರಾಮ್ ಹಿಂಬಾಲಕರ ಸಂಖ್ಯೆ ಮೊದಲೆಷ್ಟಿತ್ತು? ಈಗೆಷ್ಟಾಯ್ತು?

ಪ್ರತಿ ಬಾರಿ ಬಿಗ್ ಬಾಸ್​ನಲ್ಲಿ ಜೀ ಕನ್ನಡದ ಕೆಲವು ಸ್ಪರ್ಧಿಗಳು ಭಾಗವಹಿಸುತ್ತಾರೆ. ಆದರೆ, ಯಾರೊಬ್ಬರೂ ಈವರೆಗೆ ಗೆದ್ದಿರಲಿಲ್ಲ. ಇದೇ ಮೊದಲಬಾರಿಗೆ ಜೀ ಕನ್ನಡದ ಪ್ರತಿಭೆ ಗೆಲುವು ಸಾಧಿಸಿದೆ. ಈ ಮೊದಲು ಹನುಮಂತಗೆ ಜೀ ಕನ್ನಡದವರು ಹಣ ನೀಡಿಲ್ಲ ಎಂಬ ಸುದ್ದಿ ವೈರಲ್ ಆಗಿತ್ತು. ಆದರೆ, ಅದರಲ್ಲಿ ಸತ್ಯ ಇಲ್ಲ ಎಂದು ಹನುಮಂತ ಅವರು ಹೇಳಿಕೊಂಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 1:18 pm, Tue, 28 January 25

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us