- Kannada News Photo gallery Bigg Boss season 11 Contestants Instagram Followers count and their followers list Cinema News in Kannada
ಬಿಗ್ ಬಾಸ್ನ ಈ ಸ್ಪರ್ಧಿಗಳ ಇನ್ಸ್ಟಾಗ್ರಾಮ್ ಹಿಂಬಾಲಕರ ಸಂಖ್ಯೆ ಮೊದಲೆಷ್ಟಿತ್ತು? ಈಗೆಷ್ಟಾಯ್ತು?
‘ಬಿಗ್ ಬಾಸ್ ಕನ್ನಡ ಸೀಸನ್ 11’ ಪೂರ್ಣಗೊಂಡಿದೆ. ಈ ಬಾರಿಯ ಸೀಸನ್ನಲ್ಲಿ 20 ಮಂದಿ ಬಂದು ಹೋಗಿದ್ದಾರೆ. ಮೊದಲು ಇರುವ ಸ್ಪರ್ಧಿಗಳ ಹಿಂಬಾಲಕರ ಸಂಖ್ಯೆ ಎಷ್ಟು ಇತ್ತು? ಅದು ಈಗ ಎಷ್ಟಕ್ಕೆ ಏರಿಕೆ ಆಗಿದೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ .
Updated on: Jan 28, 2025 | 11:56 AM

ಹನುಮಂತ ಅವರು ಬಿಗ್ ಬಾಸ್ಗೆ ಬರುವುದಕ್ಕೂ ಮೊದಲು 2 ಲಕ್ಷ ಹಿಂಬಾಲಕರನ್ನು ಹೊಂದಿದ್ದರು. ಈಗ ಅದು 4.75 ಲಕ್ಷಕ್ಕೆ ಏರಿಕೆ ಆಗಿದೆ. ಗೆಲುವಿನಿಂದಾಗಿ ಅವರ ಹಿಂಬಾಲಕರ ಸಂಖ್ಯೆ ಹೆಚ್ಚಿದೆ. ಅವರಿಗೆ ನಿತ್ಯ ಸಾವಿರಾರು ಮಂದಿ ಹಿಂಬಾಲಕರ ಸಂಖ್ಯೆ ಸೇರ್ಪಡೆ ಆಗುತ್ತಿದೆ.

ಭವ್ಯಾ ಗೌಡ ಅವರು ಫಿನಾಲೆವರೆಗೆ ಇದ್ದರು. ಬಿಗ್ ಬಾಸ್ ಮನೆ ಸೇರುವಾಗ ಅವರಿಗೆ 5.86 ಲಕ್ಷ ಹಿಂಬಾಲಕರು ಇದ್ದರು. ಅದು ಈಗ 7 ಲಕ್ಷಕ್ಕೆ ಏರಿಕೆ ಆಗಿದೆ. ಅವರು ಸಾಕಷ್ಟು ಟ್ರೋಲ್ ಕೂಡ ಆಗಿದ್ದಾರೆ.

ತ್ರಿವಿಕ್ರಂ ಅವರಿಗೆ ಈ ಮೊದಲು ಲಕ್ಷ ಫಾಲೋವರ್ಸ್ ಇದ್ದರು. ಅದು ಈಗ 2 ಲಕ್ಷಕ್ಕೆ ಏರಿಕೆ ಆಗಿದೆ. ಮಂಜು ಅವರಿಗೆ ಕೆಲವೇ ಸಾವಿರ ಫಾಲೋವರ್ಸ್ ಇದ್ದರು. ಅದು 1.20 ಲಕ್ಷಕ್ಕೆ ಏರಿಕೆ ಆಗಿದೆ.

ಮೋಕ್ಷಿತಾ ಅವರು ಬಿಗ್ ಬಾಸ್ ಸೇರುವಾಗ 5 ಲಕ್ಷ+ ಹಿಂಬಾಲಕರ ಸಂಖ್ಯೆ ಇತ್ತು. ಅದು ಈಗ 8.51 ಲಕ್ಷಕ್ಕೆ ಏರಿಕೆ ಆಗಿದೆ. ಈ ಮೊದಲು ಮೋಕ್ಷಿತಾ ಅವರು ಧಾರಾವಾಹಿ ಮೂಲಕ ಗಮನ ಸೆಳೆದಿದ್ದರು.

ಅನುಷಾ ರೈ ಅವರು ದೊಡ್ಮನೆಯಲ್ಲಿ ಸಖತ್ ಗ್ಲಾಮರಸ್ ಆಗಿ ಗಮನ ಸೆಳೆದರು. ಅವರು ದೊಡ್ಮನೆ ಸೇರುವ ಸಂದರ್ಭದಲ್ಲಿ 1.19 ಲಕ್ಷ ಹಿಂಬಾಲಕರು ಇದ್ದರು. ಅದು ಈಗ 2.70 ಲಕ್ಷಕ್ಕೆ ಏರಿಕೆ ಆಗಿದೆ ಅನ್ನೋದು ವಿಶೇಷ.

ಧನರಾಜ್ ಅವರು ರೀಲ್ಸ್ ಮೂಲಕ ಫೇಮಸ್ ಆದವರು. ಬಿಗ್ ಬಾಸ್ ಮನೆಯಲ್ಲಿ ಹನುಮಂತ ಜೊತೆಗಿನ ಒಡನಾಟದ ಮೂಲಕ ಅವರು ಗಮನ ಸೆಳೆದರು. ಅವರು ಬಿಗ್ ಬಾಸ್ಗೆ ಸೇರವಾಗ 3.35 ಲಕ್ಷ ಹಿಂಬಾಲಕರು ಇದ್ದರು. ಅದು ಈಗ 6.20 ಲಕ್ಷಕ್ಕೆ ಏರಿಕೆ ಆಗಿದೆ.

ಗೌತಮಿ ಜಾಧವ್ ಅವರು ಪಾಸಿಟಿವ್ ಶಬ್ದದ ಮೂಲಕ ಗಮನ ಸೆಳೆದರು. ಅವರಿಗೆ ಈ ಮೊದಲು 2.33 ಲಕ್ಷ ಹಿಂಬಾಲಕರು ಇದ್ದರು. ಅದು ಈಗ 397 ಲಕ್ಷಕ್ಕೆ ಏರಿಕೆ ಆಗಿದೆ ಅನ್ನೋದು ವಿಶೇಷ.

ಉಳಿದಂತೆ ಧರ್ಮ ಅವರಿಗೆ 20 ಸಾವಿರ ಮಾತ್ರ ಹಿಂಬಾಲಕರು ಇದ್ದರು. ಅದು, 1.25 ಲಕ್ಷಕ್ಕೆ ಏರಿಕೆ ಆಗಿದೆ. ಐಶ್ವರ್ಯಾಗೆ 1.23 ಲಕ್ಷ ಇದ್ದರು. ಅದು 2.50 ಲಕ್ಷಕ್ಕೆ ಏರಿಕೆ ಆಗಿದೆ.

ಚೈತ್ರಾ ಕುಂದಾಪುರ ಅವರಿಗೆ ಕೆಲವೇ ಸಾವಿರ ಹಿಂಬಾಲಕರ ಸಂಖ್ಯೆ ಇತ್ತು. ಈಗ ಅದು 1 ಲಕ್ಷಕ್ಕೆ ಏರಿಕೆ ಆಗಿದೆ. ಚೈತ್ರಾ ಕುಂದಾಪುರ ಅವರ ಬೇರೆಯದೇ ರೀತಿಯ ವ್ಯಕ್ತಿತ್ವ ಕಾಣಿಸಿದೆ.



















