ಜೀ ಕನ್ನಡದಲ್ಲಿ ಬರ್ತಿದೆ ‘ಹಳ್ಳಿ ಪವರ್’; ಆಡಿಷನ್ ವಿವರ ಇಲ್ಲಿದೆ

ಜೀ ಕನ್ನಡದಲ್ಲಿ 'ಹಳ್ಳಿ ಪವರ್ ರಿಲೋಡೆಡ್' ರಿಯಾಲಿಟಿ ಶೋ ಪ್ರಸಾರಕ್ಕೆ ಸಿದ್ಧವಾಗಿದೆ. ಅಕುಲ್ ಬಾಲಾಜಿ ನಿರೂಪಣೆಯಲ್ಲಿ ನಡೆಯುವ ಈ ಕಾರ್ಯಕ್ರಮಕ್ಕೆ ಬೆಂಗಳೂರಿನಲ್ಲಿ ಆಡಿಷನ್ ಆರಂಭವಾಗಿದೆ. ಜೂನ್ 27 ರಂದು ಅಬ್ಬಯ್ಯ ನಾಯ್ಡು ಸ್ಟುಡಿಯೋದಲ್ಲಿ ಆಡಿಷನ್ ನಡೆಯಲಿದೆ. ನಗರದ ಹುಡುಗಿಯರು ಹಳ್ಳಿ ವಾತಾವರಣದಲ್ಲಿ ಸ್ಪರ್ಧಿಸುವ ಈ ಶೋಗೆ 18-28 ವಯಸ್ಸಿನವರಿಗೆ ಅವಕಾಶವಿದೆ. ಆಡಿಷನ್‌ಗೆ ಯಾವುದೇ ಶುಲ್ಕವಿಲ್ಲ.

ಜೀ ಕನ್ನಡದಲ್ಲಿ ಬರ್ತಿದೆ ‘ಹಳ್ಳಿ ಪವರ್’; ಆಡಿಷನ್ ವಿವರ ಇಲ್ಲಿದೆ
ಹಳ್ಳಿ ಪವರ್
Edited By:

Updated on: Jun 23, 2026 | 11:22 AM

ಜೀ ಪವರ್ ವಾಹಿನಿಯಲ್ಲಿ ಪ್ರಸಾರವಾಗಿ ಭಾರಿ ಜನಪ್ರಿಯತೆ ಗಳಿಸಿದ್ದ ಹೈ ವೋಲ್ಟೇಜ್ ರಿಯಾಲಿಟಿ ಶೋ ‘ಹಳ್ಳಿ ಪವರ್’ ಈಗ ಮತ್ತೊಮ್ಮೆ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದೆ. ಈ ಬಾರಿ ಈ ರಿಯಾಲಿಟಿ ಶೋ ‘ಹಳ್ಳಿ ಪವರ್ ರಿಲೋಡೆಡ್’ ಹೆಸರಿನಲ್ಲಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲು ಸಂಪೂರ್ಣವಾಗಿ ರೆಡಿಯಾಗಿದೆ. ಕಿರುತೆರೆಯ ಜನಪ್ರಿಯ ನಿರೂಪಕ ಅಕುಲ್ ಬಾಲಾಜಿ ಈ ಶೋ ಅನ್ನು ನಡೆಸಿಕೊಡಲಿದ್ದು, ಕಾರ್ಯಕ್ರಮದ ಆಡಿಷನ್ ಪ್ರಕ್ರಿಯೆ ಅಧಿಕೃತವಾಗಿ ಆರಂಭವಾಗಿದೆ.

ಮಾಡರ್ನ್ ಸಿಟಿ ಹುಡುಗಿಯರಿಗೆ ಮುಕ್ತ ಅವಕಾಶ:

‘ಮಾಡರ್ನ್ ಸಿಟಿ ಹುಡುಗಿರೆಲ್ಲಾ ಹಳ್ಳಿಗೆ ಬರೋಕೆ ರೆಡಿನಾ?’ ಎಂಬ ಶೀರ್ಷಿಕೆಯಡಿ ಈ ಬಾರಿ ಆಡಿಷನ್ ಕರೆಯಲಾಗಿದೆ. ನಗರ ಪ್ರದೇಶದ ಆಧುನಿಕ ಹುಡುಗಿಯರು ಹಳ್ಳಿಯ ವಾತಾವರಣದಲ್ಲಿ ಹೇಗೆ ಬದುಕುತ್ತಾರೆ ಮತ್ತು ಸವಾಲುಗಳನ್ನು ಹೇಗೆ ಎದುರಿಸುತ್ತಾರೆ ಎಂಬುದು ಈ ಶೋನ ಹೈಲೈಟ್ ಆಗಿರಲಿದೆ. ಆಡಿಷನ್‌ನಲ್ಲಿ ಭಾಗವಹಿಸಲು ಇಚ್ಛಿಸುವ ಸ್ಪರ್ಧಿಗಳಿಗೆ 18 ರಿಂದ 28 ವರ್ಷಗಳ ವಯಸ್ಸಿನ ಮಿತಿಯನ್ನು ನಿಗದಿಪಡಿಸಲಾಗಿದೆ.

ಆಡಿಷನ್ ದಿನಾಂಕ ಮತ್ತು ಸ್ಥಳದ ವಿವರ:

ದಿನಾಂಕ ಮತ್ತು ಸಮಯ: ಜೂನ್ 27, ಶನಿವಾರದಂದು ಬೆಳಗ್ಗೆ 9 ಗಂಟೆಗೆ ಆಡಿಷನ್ ಪ್ರಕ್ರಿಯೆ ಆರಂಭವಾಗಲಿದೆ. ಬೆಂಗಳೂರಿನ ಚಿಕ್ಕಲ್ಲಸಂದ್ರದಲ್ಲಿರುವ ಅಬ್ಬಯ್ಯ ನಾಯ್ಡು ಸ್ಟುಡಿಯೋದಲ್ಲಿ ಆಡಿಷನ್ ನಡೆಯಲಿದೆ. ಭಾಗವಹಿಸಲು ಬಯಸುವವರು ತಮ್ಮ ಪಾಸ್‌ಪೋರ್ಟ್ ಸೈಜ್ ಫೋಟೋ ಹಾಗೂ ಅಡ್ರೆಸ್ ಪ್ರೂಫ್ ಜೆರಾಕ್ಸ್ ಜೊತೆಗೆ ಬರಬೇಕು. ಹೆಚ್ಚಿನ ಮಾಹಿತಿಗಾಗಿ ವಾಟ್ಸಾಪ್ ಮೂಲಕ 9513134434 ಈ ಮೊಬೈಲ್ ಸಂಖ್ಯೆಗೆ ಮೆಸೇಜ್ ಮಾಡಬಹುದು. ಇನ್ನು ನಿಮ್ಮ ಭಾವಚಿತ್ರ ಹಾಗೂ ಸಂಪೂರ್ಣ ವಿವರಗಳನ್ನು ಮೇಲಿನ ವಾಟ್ಸಾಪ್ ಸಂಖ್ಯೆಗೆ ಕಳುಹಿಸಬಹುದಾಗಿದೆ. ಈ ಸಂಖ್ಯೆಗೆ ಯಾವುದೇ ಕರೆಗಳನ್ನು ಸ್ವೀಕರಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ಜೀ ವಾಹಿನಿಯಲ್ಲಿ ಈ ಆಡಿಷನ್‌ಗಳಿಗೆ ಯಾವುದೇ ರೀತಿಯ ಶುಲ್ಕವನ್ನು ಕಟ್ಟುವಂತಿಲ್ಲ ಮತ್ತು ವಾಹಿನಿಯ ಹೆಸರಿನಲ್ಲಿ ಹಣ ಪಡೆಯುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ‘ಹಳ್ಳಿ ಪವರ್’ ಶೋ ಈ ಮೊದಲು ನಿತ್ಯವೂ ಪ್ರಸಾರ ಆಗಿತ್ತು. ಬೆಳಗಾವಿಯಲ್ಲಿ ಈ ಶೋ ಆಯೋಜನೆಗೊಂಡಿತ್ತು. ಈ ಬಾರಿ ಎಲ್ಲಿ ನಡೆಯಲಿದೆ ಎನ್ನುವ ಕುತೂಹಲ ಮೂಡಿದೆ.

Published On - 11:21 am, Tue, 23 June 26

ಶ್ರೀಲಕ್ಷ್ಮೀ ಎಚ್

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
Loading...
Unable to load recommendations.
Follow Us