‘Thalapathy 69’ ವಿಜಯ್ ಕೊನೆಯ ಸಿನಿಮಾ; ಖಚಿತಪಡಿಸಿದ ಕೆವಿಎನ್ ಸಂಸ್ಥೆ
ಯಶ್ ನಟನೆಯ ‘ಟಾಕ್ಸಿಕ್’ ಚಿತ್ರಕ್ಕೆ ಕನ್ನಡದ ‘ಕೆವಿಎನ್ ಪ್ರೊಡಕ್ಷನ್ಸ್’ ಸಂಸ್ಥೆಯ ವೆಂಕಟ್ ಅವರು ಬಂಡವಾಳ ಹೂಡತ್ತಿದ್ದಾರೆ. ಇದೇ ನಿರ್ಮಾಣ ಸಂಸ್ಥೆ ಮೂಲಕ ‘Thalapathy 69’ ಚಿತ್ರ ಸಿದ್ಧವಾಗಲಿದೆ. ಈ ಚಿತ್ರದ ಬಗ್ಗೆ ಇಂದು (ಸೆಪ್ಟೆಂಬ್ 14) ಸಂಜೆ 5 ಗಂಟೆಗೆ ಅಪ್ಡೇಟ್ ಕೊಡೋದಾಗಿ ಕೆವಿಎನ್ ಸಂಸ್ಥೆ ತಿಳಿಸಿದೆ.
ದಳಪತಿ ವಿಜಯ್ ಅವರು ತಮ್ಮ 69ನೇ ಸಿನಿಮಾಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಇದು ವಿಜಯ್ ಅವರ ಕೊನೆಯ ಸಿನಿಮಾ ಆಗಿರಲಿದೆ. ಇತ್ತೀಚೆಗಷ್ಟೇ ರಿಲೀಸ್ ಆದ ‘GOAT’ ಸಿನಿಮಾ ಫ್ಲಾಪ್ ಆಗಿದೆ. ಈ ಕಾರಣಕ್ಕೆ ಅವರ ಮುಂದಿನ ಚಿತ್ರದ ಬಗ್ಗೆ ಫ್ಯಾನ್ಸ್ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಸಿನಿಮಾ ದಳಪತಿ ವಿಜಯ್ ಅವರ ಕೊನೆಯ ಸಿನಿಮಾ ಎಂದು ‘ಕೆವಿಎನ್ ಪ್ರೊಡಕ್ಷನ್ಸ್’ ಖಚಿತಪಡಿಸಿದೆ.
ದಳಪತಿ ವಿಜಯ್ ಅವರು ರಾಜಕೀಯದಲ್ಲಿ ಬ್ಯುಸಿ ಆಗುತ್ತಿದ್ದಾರೆ. ಈ ಕಾರಣಕ್ಕೆ ‘Thalapathy 69’ ಅವರ ಕೊನೆಯ ಸಿನಿಮಾ ಆಗಲಿದೆ ಎಂದು ಹೇಳಲಾಗಿತ್ತು. ಇದಾದ ಬಳಿಕವೂ ಅವರು ಕೆಲವು ಸಿನಿಮಾ ಒಪ್ಪಿಕೊಳ್ಳುತ್ತಾರೆ ಎಂದು ವರದಿ ಆಗಿತ್ತು. ಆದರೆ, ಆ ರೀತಿ ಇಲ್ಲ ಎಂಬುದು ಸ್ಪಷ್ಟವಾಗಿದೆ. ಈಗ ರಿಲೀಸ್ ಆಗಿರೋ ವಿಡಿಯೋದಲ್ಲಿ ಈ ಬಗ್ಗೆ ಮಾಹಿತಿ ನೀಡಲಾಗಿದೆ.
ಕನ್ನಡದ ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ‘Thalapathy 69’ ಚಿತ್ರಕ್ಕೆ ಬಂಡವಾಳ ಹೂಡುತ್ತಿದೆ. ಈ ಚಿತ್ರದ ಅಪ್ಡೇಟ್ ಇಂದು (ಸೆಪ್ಟೆಂಬರ್ 14) ಸಿಗಲಿದೆ. ಈ ಮೊದಲು ವಿಜಯ್ ಸಿನಿಮಾ ರಿಲೀಸ್ ಆದಾಗ ಫ್ಯಾನ್ಸ್ ಹೇಗೆ ಸಂಭ್ರಮಿಸಿದ್ದರು ಎನ್ನುವುದರ ಫೋಟೋ ಹಂಚಿಕೊಳ್ಳಲಾಗಿದೆ. ವಿಡಿಯೋದ ಕೊನೆಯಲ್ಲಿ ‘ಕೊನೆಯ ಬಾರಿ Thalapathy 69’ ಎಂದು ಬರೆಯಲಾಗಿದೆ. ಈ ಮೂಲಕ ಇದು ವಿಜಯ್ ಕೊನೆಯ ಸಿನಿಮಾ ಎಂಬುದನ್ನು ಖಚಿತಪಡಿಸಿದ್ದಾರೆ.
Un ratham en ratham verae illai.. Uthirathil vithaithayae anbin sollai ❤️
The Love for Thalapathy ▶️ https://t.co/fd7M28fem1
We all grew up with your films & you’ve been a part of our lives every step of the way. Thankyou Thalapathy for entertaining us more than 30 years… pic.twitter.com/4TZi7xHErB
— KVN Productions (@KvnProductions) September 13, 2024
‘ತಮಿಳಗ ವೆಟ್ರಿ ಕಳಗಂ’ ಅನ್ನೋದು ವಿಜಯ್ ಪಕ್ಷದ ಹೆಸರು. ಅವರು ಮುಂದಿನ ದಿನಗಳಲ್ಲಿ ಪಕ್ಷ ಕಟ್ಟು ಕೆಲಸದಲ್ಲಿ ಬ್ಯುಸಿ ಆಗಲಿದ್ದಾರೆ. 2026ರ ವಿಧಾನಸಭೆ ಚುನಾವಣೆಯಲ್ಲಿ ಅವರು ಸ್ಪರ್ಧೆ ಮಾಡಲಿದ್ದಾರೆ. ಇದಕ್ಕಾಗಿ ಫ್ಯಾನ್ಸ್ ಕಾದಿದ್ದಾರೆ.
ಇದನ್ನೂ ಓದಿ: ದಳಪತಿ ವಿಜಯ್ ಕೊನೆಯ ಚಿತ್ರಕ್ಕೆ ಕನ್ನಡ ನಿರ್ಮಾಣ ಸಂಸ್ಥೆಯಿಂದ ಬಂಡವಾಳ; ಟೀಸರ್ ರಿಲೀಸ್
ಕೆವಿಎನ್ ಪ್ರೊಡಕ್ಷನ್ಸ್ ದೊಡ್ಡ ದೊಡ್ಡ ಸಿನಿಮಾಗೆ ಬಂಡವಾಳ ಹೂಡುತ್ತಿದೆ. ಕನ್ನಡದಲ್ಲಿ ‘ಕೆಡಿ’ ಹಾಗೂ ‘ಟಾಕ್ಸಿಕ್’ ಚಿತ್ರವನ್ನು ಈ ನಿರ್ಮಾಣ ಸಂಸ್ಥೆ ಸಿದ್ಧಪಡಿಸುತ್ತಿದೆ. ‘Thalapathy 69’ ಕೆವಿಎನ್ ಸಂಸ್ಥೆಯ ತಮಿಳಿನ ಮೊದಲ ಸಿನಿಮಾ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:17 am, Sat, 14 September 24