ದಳಪತಿ ವಿಜಯ್ ಅವರ ಬಳಿ ಸಾಕಷ್ಟು ದೊಡ್ಡ ಮಟ್ಟದ ಕಾರ್ ಕಲೆಕ್ಷನ್ ಇದೆ. ಅವರು ಆಗಾಗ ಲಕ್ಷುರಿ ಕಾರ್ನಲ್ಲಿ ಕಾಣಿಸಿಕೊಳ್ಳುತ್ತಾ ಇರುತ್ತಾರೆ. ಈಗ ಅವರು ತಮ್ಮ ಲಕ್ಷರಿ ರೋಲ್ಸ್ ರಾಯ್ಸ್ ಘೋಸ್ಟ್ ಕಾರನ್ನು ಮಾರಿದ್ದಾರೆ ಎನ್ನಲಾಗಿದೆ. ಲೆಕ್ಸಸ್ ಕಾರು ಖರೀದಿ ಮಾಡಿದ ಕಾರಣದಿಂದ ಅವರು ರೋಲ್ಸ್ ರಾಯ್ಸ್ನ ಮಾರಾಟ ಮಾಡಿದ್ದಾರೆ ಎಂದು ವರದಿ ಆಗಿದೆ. ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.
ದಳಪತಿ ವಿಜಯ್ ಅವರು ಆಗಾಗ ರೋಲ್ಸ್ ರಾಯ್ಸ್ ಕಾರಿನಲ್ಲಿ ಕಾಣಿಸಿಕೊಳ್ಳುತ್ತಾ ಇದ್ದರು. ಹೆದ್ದಾರಿಯಲ್ಲಿ ಈ ಕಾರನ್ನು ಅವರು ಡ್ರೈವ್ ಮಾಡುತ್ತಿರುವ ವಿಡಿಯೋ ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈಗಿನ ವರದಿಗಳ ಪ್ರಕಾರ ಅವರು ಈ ಕಾರನ್ನು ಮಾರಾಟ ಮಾಡಿದ್ದಾರಂತೆ. ಇದನ್ನು ಯಾರು ಖರೀದಿ ಮಾಡಿದ್ದಾರೆ ಎನ್ನುವ ವಿಚಾರ ತಿಳಿದಿಲ್ಲ. ಈ ಕಾರಿನ ಬೆಲೆ ಖರೀದಿ ಮಾಡುವಾಗ 8 ಕೋಟಿ ರೂಪಾಯಿ ಇತ್ತು.
ದಳಪತಿ ವಿಜಯ್ ಅವರ ಕಾರ್ ಕಲೆಕ್ಷ್ ತುಂಬಾನೇ ದೊಡ್ಡದಿದೆ. ಅವರ ಬಳಿ ಬಿಎಂಡಬ್ಲ್ಯೂ ಐ7 ಎಕ್ಸ್ ಡ್ರೈವ್ 60 ಹೆಸರಿನ ಲಕ್ಷುರಿ ಕಾರು ಇದೆ. ಇದು ಇಲೆಕ್ಟ್ರಿಕ್ ಕಾರು. ಇದರ ಬೆಲೆ 2-2.5 ಕೋಟಿ ರೂಪಾಯಿ. ಭಾರತದಲ್ಲಿ ಕೆಲವೇ ಕೆಲವು ಮಂದಿ ಬಳಿ ಈ ಲಕ್ಷುರಿ ಕಾರು ಇದೆ. ಆಡಿ ಎಲ್8, ಬಿಎಂಡಬ್ಲ್ಯೂ 7 ಸೀರಿಸ್, ಬಿಎಂಡಬ್ಲ್ಯೂ ಎಕ್ಸ್ 6, ಮರ್ಸೀಡಿಸ್ ಬೆಂಜ್ ಜಿಎಲ್ಎ ಕಾರು ಇವರ ಬಳಿ ಇದೆ.
ಇದಿಷ್ಟೇ ಅಲ್ಲದೆ, ಲ್ಯಾಂಡ್ ರೋವರ್ ರೇಂಜ್ ರೋವರ್ ಎವೋಕ್, ಬಿಎಂಡಬ್ಲ್ಯೂ 5 ಸೀರಿಸ್, ಫೋರ್ಡ್ ಮಸ್ಟಾಂಗ್, ವೋಲ್ವೊ ಎಕ್ಸ್ಸಿ90. ಬೆಂಜ್ ಇ350ಡಿ, ಬಿಎಂಡಬ್ಲ್ಯೂ 3 ಸೀರಿಸ್, ಮಿನಿ ಕೂಪರ್ ಎಸ್, ಟೊಯೋಟಾ ಇನೋವಾ ಕ್ರಿಸ್ಟಾ, ಮಾರುತಿ ಸುಜುಕಿ ಸಿಲಾರಿಯೋ ಕಾರು ಅವರ ಬಳಿ ಇದೆ. ಈಗ ಈ ಕಲೆಕ್ಷನ್ನಿಂದ ರೋಲ್ಸ್ ರಾಯ್ಸ್ ಇಲ್ಲದಂತೆ ಆಗಿದೆ.
ಇದನ್ನೂ ಓದಿ: ಡ್ಯಾನ್ಸ್ ವಿಚಾರದಲ್ಲಿ ಟ್ರೋಲ್ ಆದ ದಳಪತಿ ವಿಜಯ್; ಇದಕ್ಕೆಲ್ಲ ಕಾರಣ ಕೀರ್ತಿ ಸುರೇಶ್
ಸದ್ಯ ದಳಪತಿ ವಿಜಯ್ ಅವರು ಗ್ರೇಟೆಸ್ಟ್ ಆಫ್ ಆಲ್ ಟೈಮ್ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಸೆಪ್ಟೆಂಬರ್ 5ರಂದು ಸಿನಿಮಾ ರಿಲೀಸ್ ಆಗಲಿದೆ. ಯೋಗಿ ಬಾಬು, ಮೋಹನ್, ಪ್ರಭುದೇವ ಮೊದಲಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಈಗಾಗಲೇ ಸಿನಿಮಾಗೆ ಇಂಗ್ಲೆಂಡ್ನಲ್ಲಿ ಅಡ್ವಾನ್ಸ್ ಬುಕಿಂಗ್ ಆರಂಭ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 2:29 pm, Fri, 9 August 24