ವಯನಾಡು ಸಂತ್ರಸ್ತರಿಗೆ 15 ಕೋಟಿ ರೂ., 300 ಮನೆ ನೀಡಲು ಮುಂದಾದ ನಟಿ ಜಾಕ್ವೆಲಿನ್ ಗೆಳೆಯ ಸುಕೇಶ್ 

ಬಾಲಿವುಡ್​​​​ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರ ಗೆಳೆಯ ಹಾಗೂ 200 ಕೋಟಿ ವಂಚನೆ ಆರೋಪದಲ್ಲಿ ಜೈಲಿನಲ್ಲಿರುವ ಸುಕೇಶ್ ಚಂದ್ರಶೇಖರ್ ಅವರು ಕೇರಳದ ವಯನಾಡಿಗೆ ಸಹಾಯ ಮಾಡುವುದಾಗಿ ಪತ್ರದ ಮೂಲಕ ಕೇರಳ ಸಿಎಂ ಅವರಿಗೆ ಮನವಿ ಮಾಡಿದ್ದಾರೆ. ಸಂತ್ರಸ್ತರಿಗೆ 15 ಕೋಟಿ ರೂ., 300 ಮನೆ ನೀಡುವುದಾಗಿ ಹೇಳಿದ್ದಾರೆ. ಇದೀಗ ಇವರ ಈ ಮನವಿಗೆ ಕೇರಳ ಏನು ಹೇಳಿದೆ ಇಲ್ಲಿದೆ ನೋಡಿ ಮಾಹಿತಿ

ವಯನಾಡು ಸಂತ್ರಸ್ತರಿಗೆ 15 ಕೋಟಿ ರೂ., 300 ಮನೆ ನೀಡಲು ಮುಂದಾದ ನಟಿ ಜಾಕ್ವೆಲಿನ್ ಗೆಳೆಯ ಸುಕೇಶ್ 
ಸುಕೇಶ್ ಚಂದ್ರಶೇಖರ್
Follow us
ಅಕ್ಷಯ್​ ಪಲ್ಲಮಜಲು​​
|

Updated on: Aug 09, 2024 | 12:24 PM

ಬಾಲಿವುಡ್​​​ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರ ಬಾಯ್​​ಫ್ರೆಂಡ್​​ ಸುಕೇಶ್ ಚಂದ್ರಶೇಖರ್ ಅವರು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಪತ್ರ ಬರೆದಿದ್ದು, ವಯನಾಡ್ ಜಿಲ್ಲೆಯಲ್ಲಿ ಉಂಟಾದ ಭೂಕುಸಿತದಿಂದ ಜನರ ಆಶ್ರಯಕ್ಕಾಗಿ ಮುಖ್ಯಮಂತ್ರಿಗಳ ಸಂಕಷ್ಟ ಪರಿಹಾರ ನಿಧಿಗೆ 15 ಕೋಟಿ ರೂಪಾಯಿಗಳನ್ನು ಸ್ವೀಕರಿಸುವಂತೆ ಮನವಿ ಮಾಡಿದ್ದಾರೆ. ಸುಮಾರು 200 ಕೋಟಿ ರೂ. ವಂಚನೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ಸುಕೇಶ್ ಚಂದ್ರಶೇಖರ್ ಅವರು ಇದೀಗ ವಯನಾಡ್ ಜನರ ಪರ ನಿಂತಿದ್ದಾರೆ.

ಪ್ರಸ್ತುತ ರಾಷ್ಟ್ರ ರಾಜಧಾನಿಯ ಮಂಡೋಲಿ ಜೈಲಿನಲ್ಲಿರುವ ಚಂದ್ರಶೇಖರ್ ಕೇರಳವು ಏನಾಗುತ್ತಿದೆ ಎಂಬುದನ್ನು ನೋಡಲು ನನಗೆ ತುಂಬಾ ನೋವಾಗಿದೆ. ಇದೀಗ ಅಲ್ಲಿ ಜನರಿಗೆ ನಮ್ಮ ಸಹಾಯದ ಅಗತ್ಯ ಇದೆ. ಅಗತ್ಯವಿರುವ ಈ ಸಮಯದಲ್ಲಿ ಬೆಂಬಲ ನೀಡಲು ಬಯಸುತ್ತೇನೆ ಎಂದು ಕೇರಳ ಸಿಎಂಗೆ ಬರೆದ ಪತ್ರದಲ್ಲಿ ಬರೆದಿದ್ದಾರೆ ಎಂದು ಅವರ ಪರ ವಕೀಲ ಅನಂತ್ ಮಲಿಕ್ ಹೇಳಿದ್ದಾರೆ.

ಸಂತ್ರಸ್ತರಿಗೆ 15 ಕೋಟಿ ಸಹಾಯವನ್ನು ಸ್ವೀಕರಿಸಿ: ಸುಕೇಶ್

ಕೇರಳದ ಮುಖ್ಯಮಂತ್ರಿಗಳೇ ನಮ್ಮ ಪ್ರತಿಷ್ಠಾನದಿಂದ ಪರಿಹಾರ ನಿಧಿಗೆ 15 ಕೋಟಿ ರೂಪಾಯಿಗಳನ್ನು ಸ್ವೀಕರಿಸಲು ನಾನು ಈ ಮೂಲಕ ವಿನಂತಿಸುತ್ತಿದ್ದೇನೆ. ಸಂಕಷ್ಟ ಪರಿಹಾರ ನಿಧಿಯನ್ನು ಇದನ್ನು ಬಳಸಿಕೊಳ್ಳಿ. ವಯನಾಡ್ ಪರ ನಾನು ನಿಲ್ಲುತ್ತೇನೆ. ಸಂತ್ರಸ್ತರಿಗೆ ತಕ್ಷಣ 300 ಮನೆಗಳನ್ನು ನಿರ್ಮಿಸಲು ಹೆಚ್ಚಿನ ಸಹಾಯವನ್ನು ಮಾಡುತ್ತೇನೆ ಎಂದು ಹೇಳಿದ್ದಾರೆ.

ಇದು ಸುಕೇಶ್ ಚಂದ್ರಶೇಖರ್ ಅವರು ಕಾನೂನು ಬದ್ಧ ಖಾತೆಯಿಂದ ನೀಡಲಾಗುವುದು. ರಾಜ್ಯ ಸರ್ಕಾರವು ಈ ಪ್ರಸ್ತಾಪವನ್ನು ಸ್ವೀಕರಿಸಲು ಮತ್ತು ಭೂಕುಸಿತ ದುರಂತದಲ್ಲಿ ಸಂತ್ರಸ್ತರ ಕಲ್ಯಾಣ ಮತ್ತು ಪುನರ್ವಸತಿಗೆ ಬಳಸಿಕೊಳ್ಳುವಂತೆ ವಿನಂತಿಸಿದರು ಎಂದು ಸುಕೇಶ್ ಚಂದ್ರಶೇಖರ್ ಹೇಳಿದ್ದಾರೆ.

ಇದನ್ನೂ ಓದಿ: ಟಾಲಿವುಡ್ ನಟ ಮಹೇಶ್ ಬಾಬು ಒಟ್ಟೂ ಆಸ್ತಿ, ಸಂಭಾವನೆ ಎಷ್ಟು?

ಚಂದ್ರಶೇಖರ್ ಅವರ ಪತ್ರಕ್ಕೆ ಕೇರಳ ಸರ್ಕಾರ ಇನ್ನೂ ಪ್ರತಿಕ್ರಿಯೆ ನೀಡಿಲ್ಲ. ಆರೋಪಿತ ಹಾಗೂ ಅಕ್ರಮ ಹಣ ಸಂಗ್ರಹ ಪ್ರಕರಣದಲ್ಲಿ ಜೈಲಿನಲ್ಲಿದ್ದಾರೆ. ಆ ಕಾರಣ ಕೇರಳ ಸರ್ಕಾರ ಕಾನೂನು ಬದ್ಧವಾಗಿ ಹೆಜ್ಜೆ ಇಡಲು ಮುಂದಾಗಿದೆ. ಇನ್ನು ಸ್ಥಳೀಯ ಆಡಳಿತವು ಬುಧವಾರ ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ, ಒಂದು ವಾರದ ಹಿಂದೆ ಈ ಉತ್ತರ ಕೇರಳ ಜಿಲ್ಲೆಯಲ್ಲಿ ಸಂಭವಿಸಿದ ಭಾರೀ ಭೂಕುಸಿತದ ನಂತರ 138 ಜನರು ಕಾಣೆಯಾಗಿದ್ದಾರೆ ಎಂದು ಹೇಳಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಅಮೆರಿಕ ಅಧ್ಯಕ್ಷ ಟ್ರಂಪ್​ಗೂ ಮೊದಲೇ ಪ್ರಮಾಣವಚನ ಸ್ವೀಕರಿಸಿದ ಉಪಾಧ್ಯಕ್ಷ
ಅಮೆರಿಕ ಅಧ್ಯಕ್ಷ ಟ್ರಂಪ್​ಗೂ ಮೊದಲೇ ಪ್ರಮಾಣವಚನ ಸ್ವೀಕರಿಸಿದ ಉಪಾಧ್ಯಕ್ಷ
ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್​ ಪ್ರಮಾಣ ವಚನದ ನೇರಪ್ರಸಾರ
ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್​ ಪ್ರಮಾಣ ವಚನದ ನೇರಪ್ರಸಾರ
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್