Bheema First Half Review:‘ ಭೀಮ’ ಸಿನಿಮಾದ ಮೊದಲಾರ್ಧದಲ್ಲಿ ಏನೆಲ್ಲ ಇದೆ? ಇಲ್ಲಿದೆ ವಿವರ
Bheema Movie Review: ‘ಭೀಮ’ ದುನಿಯಾ ವಿಜಯ್ ನಿರ್ದೇಶನ ಮಾಡಿರುವ ಎರಡನೇ ಸಿನಿಮಾ. ಅವರ ನಿರ್ದೇಶನದ ಮೊದಲ ಸಿನಿಮಾ ‘ಸಲಗ’ ಸೂಪರ್ ಹಿಟ್ ಎನಿಸಿಕೊಂಡಿತು. ಈ ಚಿತ್ರದಿಂದ ಅವರು ಭರ್ಜರಿ ಯಶಸ್ಸು ಕಂಡರು. ಈಗ ಅವರು ಮತ್ತೊಂದು ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ.
ದುನಿಯಾ ವಿಜಯ್ ನಿರ್ದೇಶನದ ಮೊದಲ ಸಿನಿಮಾ ‘ಸಲಗ’ ಯಶಸ್ಸು ಕಂಡಿತ್ತು. ಆ ಬಳಿಕ ಅವರು ಕೈಗೆತ್ತಿಕೊಂಡಿದ್ದು ‘ಭೀಮ’ ಚಿತ್ರವನ್ನು. ಈ ಸಿನಿಮಾ ಕೂಡ ಪಕ್ಕಾ ರೌಡಿಸಂ ಕಥೆ ಅನ್ನೋದು ಟ್ರೇಲರ್ ನೋಡಿದವರಿಗೆ ಗೊತ್ತಾಗಿದೆ. ಇಂದು (ಆಗಸ್ಟ್ 9) ಸಿನಿಮಾ ಬಿಡುಗಡೆ ಕಂಡಿದೆ. ಈ ಚಿತ್ರದಲ್ಲಿ ದುನಿಯಾ ವಿಜಯ್ ಜೊತೆ ರಂಗಾಯಣ ರಘು, ಅಚ್ಯುತ್ ಕುಮಾರ್, ಕಾಕ್ರೋಚ್ ಸುಧಿ ಮೊದಲಾದವರು ನಟಿಸಿದ್ದಾರೆ. ಈ ಸಿನಿಮಾ ಬಗ್ಗೆ ಫ್ಯಾನ್ಸ್ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಹಾಗಾದರೆ ಈ ಚಿತ್ರದ ಮೊದಲಾರ್ಧದಲ್ಲಿ ಏನೆಲ್ಲ ಇದೆ? ಸಿನಿಮಾದಲ್ಲಿ ಏನನ್ನು ಹೇಳಲು ಹೊರಟಿದ್ದಾರೆ ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ.
- ಭೀಮ ಸಿನಿಮಾನಲ್ಲಿ ಬೆಂಗಳೂರಿನ ಗಲ್ಲಿಗಳ ಕತೆಯನ್ನು ಅನಾವರಣ ಮಾಡಿರುವ ದುನಿಯಾ ವಿಜಯ್.
- ಗಾಂಜಾ ಮೋಹ ಮತ್ತು ಬೆಂಗಳೂರಿನ ಸ್ಲಂ ಯುವಕರನ್ನು ರೌಡಿಗಳು ಬಳಸಿಕೊಳ್ಳುತ್ತಿರುವ ರೀತಿಯ ಬಗ್ಗೆ ತೋರಿಸಲಾಗಿದೆ.
- ಸಿನಿಮಾದ ಆರಂಭದಲ್ಲಿ ಮುಖ್ಯ ಪಾತ್ರಗಳ ಪರಿಚಯ ಮತ್ತು ಅವರ ವ್ಯಕ್ತಿತ್ವ ಅನಾವರಣ ಮಾಡಿದ್ದಾರೆ ನಿರ್ದೇಶಕ ವಿಜಿ. ಸಿನಿಮಾದ ವಿಲನ್ ಪಾತ್ರಕ್ಕೆ ನೀಡಿರುವ ಹಿನ್ನೆಲೆ ಚೆನ್ನಾಗಿದೆ.
- ದುನಿಯಾ ವಿಜಯ್ ಎಂಟ್ರಿ ಮಾಸ್ ಹಾಡಿನ ಮೂಲಕ ಆಗುತ್ತದೆ. ಸೆಂಟಿಮೆಂಟ್ ದೃಶ್ಯದಲ್ಲಿ ಮಾಸ್ ಹಾಡಿನ ಮೂಲಕ ಎಂಟ್ರಿ ಕೊಡುವ ದುನಿಯಾ ವಿಜಿ.
- ಸಿನಿಮಾದಲ್ಲಿ ಫಿಲ್ಟರ್ ಇಲ್ಲದೆ ಬೈಗುಳಗಳನ್ನು ಬಳಸಲಾಗಿದೆ. ಅಮ್ಮ-ಅಕ್ಕ ಬೈಗುಳಗಳು ಪದೇ ಪದೇ ಕಿವಿ ಮೇಲೆ ಬೀಳುತ್ತಲೇ ಇರುತ್ತವೆ.
- ಆರಂಭದಲ್ಲಿ ಬರುವ ಕೆಲವು ಹಾಡುಗಳು ಗಮನ ಸೆಳೆಯುತ್ತವೆ. ಹಾಡುಗಳಲ್ಲಿ ಬೆಂಗಳೂರಿನ ಗಲ್ಲಿಗಳನ್ನು ಇದ್ದಂತೆ ತೋರಿಸಿದ್ದಾರೆ ವಿಜಿ.
- ಸಿನಿಮಾದ ಮೊದಲಾರ್ಧದಲ್ಲಿ ಕೆಲವು ಹಾಸ್ಯ ಸನ್ನಿವೇಶಗಳು ಬಹಳ ನಗಿಸುತ್ತವೆ. ಆದರೆ ಕೆಲವು ದೃಶ್ಯಗಳು, ಸಂಭಾಷಣೆ ಮುಜುಗರವನ್ನೂ ತರುತ್ತವೆ.
- ಸಿನಿಮಾದ ನಾಯಕಿಗೆ ಹಾಗೂ ನಾಯಕನ ಗೆಳೆಯರಿಗೆ ಹೆಚ್ಚೇನು ಕೆಲಸವಿಲ್ಲ. ನಾಯಕನ ಫೈಟ್ ಗಳನ್ನು ನೋಡಿ ಚಪ್ಪಾಳೆ ತಟ್ಟುವುದಷ್ಟೆ ಅವರ ಕೆಲಸ.
- ಸಿನಿಮಾದ ಮಧ್ಯಾರ್ಧದ ಬರುವ ಮುಂಚೆ ಖಡಕ್ ಪೊಲೀಸ್ ಅಧಿಕಾರಿ ಕತೆಗೆ ಎಂಟ್ರಿ. ನಾಯಕ ಹಾಗೂ ಖಡಕ್ ಅಧಿಕಾರಿ ಸೇರಿ ಗಾಂಜಾ ವಿತರಕರ ಮೇಲೆ ಸಮರ ಸಾರಿದ್ದಾರೆ.
- ಸಿನಿಮಾದ ಮಧ್ಯಾರ್ಧದ ವೇಳೆಗೆ ನಾಯಕ ದುನಿಯಾ ವಿಜಯ್ ಮೇಲುಗೈ ಆಗಿ, ವಿಲನ್ ಜೈಲಿಗೆ ಹೋಗಿದ್ದಾನೆ. ಇನ್ನು ಮುಂದೆ ಇದು ದ್ವೇಷದ ಕತೆಯಾಗಿ ತಿರುವು ಪಡೆಯುವ ಸಾಧ್ಯತೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 10:56 am, Fri, 9 August 24