Leo Trailer: ಐದೇ ನಿಮಿಷದಲ್ಲಿ ಮಿಲಿಯನ್​ ಬಾರಿ ವೀಕ್ಷಣೆ ಕಂಡ ‘ಲಿಯೋ’ ಟ್ರೇಲರ್​

Thalapathy Vijay: ಆ್ಯಕ್ಷನ್​ ಪ್ರಿಯರಿಗೆ ಇಷ್ಟ ಆಗುವ ರೀತಿಯಲ್ಲಿ ‘ಲಿಯೋ’ ಸಿನಿಮಾದ ಟ್ರೇಲರ್​ ಮೂಡಿಬಂದಿದೆ. ದಳಪತಿ ವಿಜಯ್​ ಅವರ ಪಾತ್ರದ ರೀತಿಯೇ ಅರ್ಜುನ್ ಸರ್ಜಾ ಅವರ ಗೆಟಪ್​ ಕೂಡ ಗಮನ ಸೆಳೆಯುವಂತಿದೆ. ಕಥೆಯ ಬಗ್ಗೆ ಟ್ರೇಲರ್​ನಲ್ಲಿ ಸುಳಿವು ಬಿಟ್ಟುಕೊಡಲಾಗಿದೆ. ಯೂಟ್ಯೂಬ್​ನಲ್ಲಿ ಈ ಟ್ರೇಲರ್​ ದಾಖಲೆ ಬರೆಯುವ ಸೂಚನೆ ಸಿಕ್ಕಿದೆ.

Leo Trailer: ಐದೇ ನಿಮಿಷದಲ್ಲಿ ಮಿಲಿಯನ್​ ಬಾರಿ ವೀಕ್ಷಣೆ ಕಂಡ ‘ಲಿಯೋ’ ಟ್ರೇಲರ್​
ದಳಪತಿ ವಿಜಯ್​

Updated on: Oct 05, 2023 | 7:08 PM

ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲಿ ‘ಲಿಯೋ’ ಚಿತ್ರ (Leo Movie) ಕೂಡ ಇದೆ. ಈ ಸಿನಿಮಾದಲ್ಲಿ ದಳಪತಿ ವಿಜಯ್​ (Thalapathy Vijay) ಅವರು ಪ್ರಮುಖ ಪಾತ್ರ ಮಾಡಿದ್ದಾರೆ. ಬಹುತಾರಾಗಣದ ಈ ಸಿನಿಮಾದ ಟ್ರೇಲರ್​ ಈಗ ಬಿಡುಗಡೆ ಆಗಿದೆ. ಕೆಲವೇ ನಿಮಿಷಗಳಲ್ಲಿ ಲಿಯೋ ಟ್ರೇಲರ್​ಗೆ ಮಿಲಿಯನ್​ಗಟ್ಟಲೆ ವೀವ್ಸ್​ ಸಿಕ್ಕಿದೆ. ಈ ಚಿತ್ರದ ಮೇಲೆ ಅಭಿಮಾನಿಗಳಿಗೆ ಎಷ್ಟು ಕ್ರೇಜ್​ ಇದೆ ಎಂಬುದಕ್ಕೆ ಈ ಸಂಖ್ಯೆಗಳೇ ಸಾಕ್ಷಿ. ತಮಿಳಿನ ಈ ಸಿನಿಮಾ ಕನ್ನಡ, ತೆಲುಗು, ಹಿಂದಿಗೆ ಡಬ್​ ಆಗಿ ಬಿಡುಗಡೆ ಆಗುತ್ತಿದೆ. ಈ ಎಲ್ಲ ಭಾಷೆಗಳಲ್ಲಿ ಟ್ರೇಲರ್​ (Leo Trailer) ಬಿಡುಗಡೆ ಮಾಡಲಾಗಿದೆ. ಸಂಜಯ್​ ದತ್​, ಅರ್ಜುನ್ ಸರ್ಜಾ, ದಳಪತಿ ವಿಜಯ್​ ಮುಂತಾದವರು ಈ ಟ್ರೇಲರ್​ನಲ್ಲಿ ಅಬ್ಬರಿಸಿದ್ದಾರೆ. ಈ ಸಿನಿಮಾಗೆ ತ್ರಿಷಾ ಕೃಷ್ಣನ್​ ನಾಯಕಿ. ಖ್ಯಾತ ನಿರ್ದೇಶಕ ಲೋಕೇಶ್​ ಕನಗರಾಜ್​ ಅವರು ‘ಲಿಯೋ’ ಸಿನಿಮಾಗೆ ಆ್ಯಕ್ಷನ್​-ಕಟ್​ ಹೇಳಿದ್ದಾರೆ.

‘ಸೆವೆನ್ ಸ್ಕ್ರೀನ್​ ಸ್ಟುಡಿಯೋ’ ಮೂಲಕ ‘ಲಿಯೋ’ ಸಿನಿಮಾ ನಿರ್ಮಾಣ ಆಗಿದೆ. ಆ್ಯಕ್ಷನ್​ ಪ್ರಿಯರಿಗೆ ಇಷ್ಟ ಆಗುವ ರೀತಿಯಲ್ಲಿ ಈ ಸಿನಿಮಾದ ಟ್ರೇಲರ್​ ಮೂಡಿಬಂದಿದೆ. ದಳಪತಿ ವಿಜಯ್​ ಅವರ ಪಾತ್ರದ ರೀತಿಯೇ ಅರ್ಜುನ್ ಸರ್ಜಾ ಅವರ ಗೆಟಪ್​ ಕೂಡ ಗಮನ ಸೆಳೆಯುವಂತಿದೆ. ಕಥೆಯ ಬಗ್ಗೆ ಟ್ರೇಲರ್​ನಲ್ಲಿ ಸುಳಿವು ಬಿಟ್ಟುಕೊಡಲಾಗಿದೆ. ಟ್ರೇಲರ್​ ನೋಡಿದ ದಳಪತಿ ವಿಜಯ್​ ಅಭಿಮಾನಿಗಳು ಮೆಚ್ಚುಗೆ ಸೂಚಿಸುತ್ತಿದ್ದಾರೆ. ಯೂಟ್ಯೂಬ್​ನಲ್ಲಿ ಈ ಟ್ರೇಲರ್​ ದಾಖಲೆ ಬರೆಯುವ ಸೂಚನೆ ಸಿಕ್ಕಿದೆ.

‘ಲಿಯೋ’ ಸಿನಿಮಾ ಟ್ರೇಲರ್:

LEO - Official Trailer (Kannada) | Thalapathy Vijay | Lokesh Kanagaraj | Anirudh Ravichander

‘ಕೈದಿ’ ಮತ್ತು ‘ವಿಕ್ರಮ್​’ ಸಿನಿಮಾಗಳಿಂದ ನಿರ್ದೇಶಕ ಲೋಕೇಶ್​ ಕನಗರಾಜ್​ ಅವರು ಸಖತ್​ ಖ್ಯಾತಿ ಪಡೆದಿದ್ದಾರೆ. ಅವರು ಈಗ ‘ಲಿಯೋ’ ಸಿನಿಮಾಗೆ ನಿರ್ದೇಶನ ಮಾಡಿರುವುದರಿಂದ ನಿರೀಕ್ಷೆ ಹೆಚ್ಚಿದೆ. ‘ಕೈದಿ’ ಮತ್ತು ‘ವಿಕ್ರಮ್​’ ಸಿನಿಮಾಗಳ ಕಥೆಗೂ ‘ಲಿಯೋ’ ಚಿತ್ರದ ಕಥೆಗೂ ಲಿಂಕ್​ ಇದೆ ಎಂದು ಕೆಲವರು ಊಹಿಸುತ್ತಿದ್ದಾರೆ. ಅದೆಲ್ಲದಕ್ಕೂ ಶೀಘ್ರದಲ್ಲೇ ಉತ್ತರ ಸಿಗಲಿದೆ.

ಇದನ್ನೂ ಓದಿ: ಹಲವಾರು ಪೋಸ್ಟರ್​ಗಳ ಮೂಲಕವೇ ಕ್ರೇಜ್​ ಹೆಚ್ಚಿಸಿದ ‘ಲಿಯೋ’ ಸಿನಿಮಾ

ಅಕ್ಟೋಬರ್​ 19ರಂದು ‘ಲಿಯೋ’ ಸಿನಿಮಾ ಬಿಡುಗಡೆ ಆಗಲಿದೆ. ಪ್ಯಾನ್​ ಇಂಡಿಯಾ ಮಟ್ಟದಲ್ಲಿ ತೆರೆಕಾಣಿಸಲು ಸಕಲ ಸಿದ್ಧತ ನಡೆದಿದೆ. 2023ರಲ್ಲಿ ‘ಜೈಲರ್​’ ಮತ್ತು ‘ಜವಾನ್​’ ಸಿನಿಮಾಗಳು ಮೂಲಕ ಭಾರಿ ಜನಪ್ರಿಯತೆ ಗಳಿಸಿರುವ ಅನಿರುದ್ಧ್​ ರವಿಚಂದರ್​ ಅವರು ‘ಲಿಯೋ’ ಸಿನಿಮಾಗೆ ಸಂಗೀತ ನೀಡಿದ್ದಾರೆ. ಗೌತಮ್​ ವಾಸುದೇವ್ ಮೆನನ್​, ಮನ್ಸೂರ್​ ಅಲಿ ಖಾನ್​, ಪ್ರಿಯಾ ಆನಂದ್​ ಮುಂತಾದವರು ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 6:57 pm, Thu, 5 October 23

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us