ಭಾರತದಲ್ಲಿ ಸಿನಿಮಾ ಒಂದಕ್ಕೆ ಅತಿ ಹೆಚ್ಚು ಸಂಭಾವನೆ ಪಡೆವ ನಟರಲ್ಲಿ ತಮಿಳಿನ ಸ್ಟಾರ್ ನಟ ದಳಪತಿ ವಿಜಯ್ ಸಹ ಒಬ್ಬರು. ಕೆಲವು ದಿನಗಳ ಹಿಂದಷ್ಟೆ ಬಿಡುಗಡೆ ಆಗಿರುವ ಭಾರತದಲ್ಲಿ ಅತಿ ಹೆಚ್ಚು ತೆರಿಗೆ ಪಾವತಿ ಮಾಡುವವರ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ದೊಡ್ಡ ಬಾಲಿವುಡ್ ಸ್ಟಾರ್ಗಳನ್ನು ಮೀರಿಸಿ ಎರಡನೇ ಸ್ಥಾನದಲ್ಲಿದ್ದಾರೆ ದಳಪತಿ ವಿಜಯ್. ಇದೀಗ ರಾಜಕೀಯಕ್ಕೆ ಪ್ರವೇಶಿಸಲಿರುವ ವಿಜಯ್, ಸಿನಿಮಾಗಳಲ್ಲಿ ನಟಿಸದಿರಲು ನಿರ್ಧರಿಸಿದ್ದಾರೆ. ನಿನ್ನೆಯಷ್ಟೆ ಅವರು ತಮ್ಮ ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ. ಈ ಸಿನಿಮಾಕ್ಕೆ ಅವರು ಭಾರಿ ಮೊತ್ತದ ಸಂಭಾವನೆ ಪಡೆಯಲಿದ್ದಾರೆ.
ವಿಜಯ್ರ 69ನೇ ಸಿನಿಮಾ ನಿನ್ನೆಯಷ್ಟೆ ಘೋಷಣೆ ಆಗಿದೆ. ಈ ಸಿನಿಮಾ ವಿಜಯ್ರ ಕೊನೆಯ ಸಿನಿಮಾ ಆಗಿರಲಿದೆ. ಈ ಸಿನಿಮಾವನ್ನು ಕನ್ನಡದ ಕೆವಿಎಂ ನಿರ್ಮಾಣ ಸಂಸ್ಥೆ ನಿರ್ಮಾಣ ಮಾಡಲಿದೆ. ಇದೇ ಅವರ ಕೊನೆಯ ಸಿನಿಮಾ ಎಂದು ಅಧಿಕೃತವಾಗಿ ಘೋಷಣೆ ಸಹ ಆಗಿದೆ. ಈ ಸಿನಿಮಾ ಅವರ ಅಭಿಮಾನಿಗಳ ಪಾಲಿಗೆ ಬಹಳ ವಿಶೇಷವಾದದ್ದಾಗಿದ್ದು, ಸಿನಿಮಾಕ್ಕಾಗಿ ವಿಜಯ್ ಸಹ ಭಾರಿ ದೊಡ್ಡ ಮೊತ್ತವನ್ನು ಸಂಭಾವನೆಯಾಗಿ ಪಡೆಯಲಿದ್ದಾರೆ.
ಇದನ್ನೂ ಓದಿ:‘Thalapathy 69’ ವಿಜಯ್ ಕೊನೆಯ ಸಿನಿಮಾ; ಖಚಿತಪಡಿಸಿದ ಕೆವಿಎನ್ ಸಂಸ್ಥೆ
ವಿಜಯ್, ತಮ್ಮ 69ನೇ ಸಿನಿಮಾಕ್ಕಾಗಿ 275 ಕೋಟಿ ರೂಪಾಯಿ ಸಂಭಾವನೆಯನ್ನು ನಿರ್ಮಾಣ ಸಂಸ್ಥೆಯಿಂದ ಪಡೆಯಲಿದ್ದಾರೆ. ಭಾರತದಲ್ಲಿ ಈವರೆಗೆ ಇನ್ಯಾವ ನಟರೂ ಸಹ ಇಷ್ಟು ದೊಡ್ಡ ಸಂಭಾವನೆಯನ್ನು ಪಡೆದಿಲ್ಲ ಎನ್ನಲಾಗುತ್ತಿದೆ. ಪ್ರಭಾಸ್, ದಕ್ಷಿಣ ಭಾರತದ ಅತಿ ದೊಡ್ಡ ಸ್ಟಾರ್ ಎಂದೆಲ್ಲ ಹೇಳಲಾಗುತ್ತದೆ. ಆದರೆ ಪ್ರಭಾಸ್ ಸಹ, ವಿಜಯ್ ಪಡೆಯುವಷ್ಟೆ ಸಂಭಾವನೆಯನ್ನು ಒಂದು ಸಿನಿಮಾಕ್ಕಾಗಿ ಪಡೆಯುವುದಿಲ್ಲ.
ಕೆಲ ವಾರಗಳ ಹಿಂದಷ್ಟೆ, ಭಾರತದಲ್ಲಿ ಅತಿ ಹೆಚ್ಚು ತೆರಿಗೆ ಪಾವತಿ ಮಾಡುವ ವ್ಯಕ್ತಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಯ್ತು. ಭಾರತದಲ್ಲಿ ಅತಿ ಹೆಚ್ಚು ತೆರಿಗೆ ಪಾವತಿಸುವ ಸಿನಿಮಾ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ದಳಪತಿ ವಿಜಯ್ ಎರಡನೇ ಸ್ಥಾನದಲ್ಲಿದ್ದಾರೆ. ಮೊದಲ ಸ್ಥಾನದಲ್ಲಿ ಬಾದ್ ಶಾ ಶಾರುಖ್ ಖಾನ್ ಇದ್ದಾರೆ. ಮೂರನೇ ಸ್ಥಾನದಲ್ಲಿ ಸಲ್ಮಾನ್ ಖಾನ್ ಇದ್ದಾರೆ. ಸಲ್ಮಾನ್ ಖಾನ್ಗಿಂತಳೂ ಹೆಚ್ಚು ಸಂಭಾವನೆಯನ್ನು ವಿಜಯ್ ತೆಗೆದುಕೊಳ್ಳುತ್ತಾರೆ ಎನ್ನಲಾಗುತ್ತದೆ. ಶಾರುಖ್ ಖಾನ್ ಹೆಚ್ಚು ಸಂಭಾವನೆ ಪಡೆಯುತ್ತಾರಾದರೂ ಅವರು ಸಾಮಾನ್ಯವಾಗಿ ವರ್ಷಕ್ಕೆ ಒಂದೇ ಸಿನಿಮಾ ಮಾಡುತ್ತಾರೆ. ಆದರೆ ವಿಜಯ್ ವರ್ಷಕ್ಕೆ ಕನಿಷ್ಟ ಎರಡಾದರೂ ಸಿನಿಮಾ ಮಾಡುತ್ತಾರೆ. ಒಮ್ಮೊಮ್ಮೆ ಮೂರು ಸಿನಿಮಾ ಮಾಡಿದ್ದೂ ಇದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ