ಕೈ-ಕೈ ಮಿಲಾಯಿಸಿದ ಬಿಗ್ಬಾಸ್ ಸ್ಪರ್ಧಿಗಳು, ನಟಿಗೆ ಕಪಾಳಮೋಕ್ಷ
Bigg Boss: ಬಿಗ್ಬಾಸ್ ರಿಯಾಲಿಟಿ ಶೋನಲ್ಲಿ ಜಗಳ, ಕಾಲೆಳೆತ ತೀರ ಸಾಮಾನ್ಯ, ಆದರೆ ಯಾರಿಗೂ ಹಲ್ಲೆ ಮಾಡುವಂತಿಲ್ಲ. ಆದರೆ ಈ ನಿಯಮವನ್ನು ಆಗಾಗ್ಗೆ ಮೀರುತ್ತಿರುತ್ತಾರೆ ಸ್ಪರ್ಧಿಗಳು. ಇದೀಗ ನಟಿಯೊಬ್ಬಾಕೆಗೆ ಸಹ ಸ್ಪರ್ಧಿ ಕಪಾಳ ಮೋಕ್ಷ ಮಾಡಿದ್ದಾರೆ.
ಬಿಗ್ಬಾಸ್ ಮನೆಯಲ್ಲಿ ಜಗಳ ಗಲಾಟೆ ತೀರ. ಸಹಜ, ಜಗಳ-ಗಲಾಟೆಗಳಿಗಾಗಿಯೇ ಆ ಶೋ ಜನಪ್ರಿಯ. ಆದರೆ ಬಿಗ್ಬಾಸ್ ಮನೆಯಲ್ಲಿ ಒಂದು ಪ್ರಮುಖವಾದ ನಿಯಮವಿದೆ. ಮನೆಯಲ್ಲಿ ಯಾರೂ ಸಹ ಮತ್ತೊಬ್ಬ ಸ್ಪರ್ಧಿಯ ಮೇಲೆ ದೈಹಿಕವಾಗಿ ಹಲ್ಲೆ ಮಾಡುವಂತಿಲ್ಲ. ಆದರೆ ಈ ನಿಯಮ ಹಲವು ಬಾರಿ ಮುರಿದಿದೆ. ಕೆಲವರು ಇದೇ ಕಾರಣಖ್ಕೆ ಮನೆಯಿಂದ ಹೊರಗೆ ಸಹ ಹೋಗಿದ್ದಾರೆ. ಇದೀಗ ಮತ್ತೆ ಬಿಗ್ಬಾಸ್ ಸೀಸನ್ ಗಳು ಪ್ರಾರಂಭವಾಗಿದ್ದು, ಹೊಸ ಬಿಗ್ಬಾಸ್ ರಿಯಾಲಿಟಿ ಶೋ ಒಂದರಲ್ಲಿ ಜನಪ್ರಿಯ ನಟಿಯ ಮೇಲೆ ಸಹ ಸ್ಪರ್ಧಿ ಒಬ್ಬಾಕೆ ಹಲ್ಲೆ ಮಾಡಿದ್ದಾರೆ.
ಬಿಗ್ಬಾಸ್ ಮರಾಠಿ ಐದನೇ ಸೀಸನ್ ತಿಂಗಳ ಹಿಂದೆ ಪ್ರಾರಂಭವಾಗಿದೆ. ಶೋ ಚೆನ್ನಾಗಿಯೇ ನಡೆದುಕೊಂಡು ಹೋಗುತ್ತಿದೆ. ಖ್ಯಾತ ಬಾಲಿವುಡ್ ನಟ, ಮರಾಠಿ ಸಿನಿಮಾಗಳಲ್ಲಿಯೂ ನಟಿಸಿರುವ ರಿತೇಶ್ ದೇಶ್ಮುಖ್ ಈ ಬಾರಿಯ ಸೀಸನ್ ಅನ್ನು ನಿರೂಪಣೆ ಮಾಡುತ್ತಿದ್ದಾರೆ. ಶೋನಲ್ಲಿ ಮರಾಠಿ ಚಿತ್ರರಂಗ, ಧಾರಾವಾಹಿ ಮಾತ್ರವಲ್ಲೆ ಕೆಲ ಬಾಲಿವುಡ್ ನಟಿಯರನ್ನೂ ಸೇರಿಸಲಾಗಿದೆ. ಅವರಲ್ಲಿ ಒಬ್ಬರು ಗ್ಲಾಮರಸ್ ನಟಿ ನಿಕ್ಕಿ ತಾಂಬೋಲಿ.
ಇದನ್ನೂ ನೋಡಿ:ಬಿಗ್ಬಾಸ್: ಸುದೀಪ್ ಬದಲು ಬೇರೆ ನಟರಿಂದ ನಿರೂಪಣೆ, ಯಾರ ಹೆಸರಿದೆ ಮುಂಚೂಣಿಯಲ್ಲಿ?
ನಿಕ್ಕಿ ತಾಂಬೋಲಿ ಬಿಗ್ಬಾಸ್ ಮನೆಗೆ ಬಂದಾಗಿನಿಂದಲೂ ಸುದ್ದಿಯಾಗುತ್ತಲೇ ಇದ್ದಾರೆ. ಮಾತ್ರವಲ್ಲದೆ ಬಿಗ್ಬಾಸ್ನ ಸಹ ಸ್ಪರ್ಧಿಗಳೊಟ್ಟಿಗೆ ಆಗಾಗ್ಗೆ ಕಿರಿಕ್ ಸಹ ಮಾಡಿಕೊಳ್ಳುತ್ತಲೇ ಇದ್ದಾರೆ. ಇತ್ತೀಚೆಗೆ ಕ್ಯಾಪ್ಟನ್ಸಿ ಟಾಸ್ಕ್ ನಡೆದಿತ್ತು. ಮ್ಯಾಜಿಕ್ ಡೈಮಂಡ್ ಅನ್ನು ಉಳಿಸಿಕೊಳ್ಳುವ ಟಾಸ್ಕ್ ಅದು. ಟಾಸ್ಕ್ನಲ್ಲಿ ನಿಕ್ಕಿ ತಾಂಬೋಲಿ, ಜಾನ್ಹವಿ, ವರ್ಷಾ, ಆರ್ಯಾ ಅವರುಗಳು ಭಾಗಿಯಾಗಿದ್ದರು. ಡೈಮಂಡ್ ಅನ್ನು ರಕ್ಷಿಸುವ ಟಾಸ್ಕ್ನಲ್ಲಿ ಆರ್ಯಾ, ಕೋಣೆಯ ಬಾಗಿಲು ಭದ್ರ ಮಾಡಿಕೊಂಡಿದ್ದರು, ನಿಕ್ಕಿ ಅದನ್ನು ತೆರೆಯುವ ಪ್ರಯತ್ನ ಮಾಡಿದರು. ಆ ವೇಳೆ ನಿಕ್ಕಿಯ ಆತ್ಮೀಯ ಗೆಳೆಯ ಅರ್ಬಾಜ್ ಬಂದು ನಿಕ್ಕಿಗೆ ಸಹಾಯ ಮಾಡುವ ಭರದಲ್ಲಿ ಆರ್ಯಾ ಹಿಡಿದಿದ್ದ ಡೋರ್ ತೆಗೆದಿದ್ದಾನೆ, ನಿಕ್ಕಿ ಕೋಣೆಯ ಒಳಗೆ ಹೋಗುವ ಸಾಹಸ ಮಾಡುವಾಗ ಇನ್ನೇನು ನಿಕ್ಕಿ ಗೆದ್ದಳು ಎಂದುಕೊಳ್ಳುತ್ತಿರುವಾಗ ಆರ್ಯಾ, ನಿಕ್ಕಿಯ ಕಪಾಳಕ್ಕೆ ಭಾರಿಸಿದ್ದಾಳೆ.
ಆರ್ಯಾಳಿಂದ ಏಟು ತಿಂದ ನಿಕ್ಕಿ ತಾಂಬೋಲಿ, ಕೂಡಲೇ ಬಿಗ್ಬಾಸ್ ಕ್ಯಾಮೆರಾಗಳ ಬಳಿ ಬಂದು ಆಕೆ ನನ್ನು ಹೊಡೆದಿದ್ದಾಳೆ ಎಂದು ಜೋರಾಗಿ ಅತ್ತು ಹೇಳಿದ್ದಾರೆ. ಇದೀಗ ಮರಾಠಿ ಬಿಗ್ಬಾಸ್ನ ಹೊಸ ಪ್ರೋಮೋ ಬಿಡುಗಡೆ ಆಗಿದ್ದು, ಪ್ರೋಮೋನಲ್ಲಿ ಬಿಗ್ಬಾಸ್ ಧ್ವನಿ, ಆರ್ಯ ಬಿಗ್ಬಾಸ್ ನಿಯಮ ಮೀರಿದ್ದು, ಶಿಕ್ಷೆ ಅನುಭವಿಸಲೇ ಬೇಕು ಎಂದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ