ತಂದೆ, ಮಕ್ಕಳಿಗೂ ಸಾಲ ಕೊಟ್ಟಿದ್ದಾರೆ ದಳಪತಿ ವಿಜಯ್; ಟೀಕೆ ಎದುರಿಸಿದ ನಟ

ದಳಪತಿ ವಿಜಯ್ ತಮ್ಮ ಚುನಾವಣಾ ಅಫಿಡವಿಟ್‌ನಲ್ಲಿ 603 ಕೋಟಿ ರೂ. ಆಸ್ತಿ ಘೋಷಿಸಿದ್ದಾರೆ. ಕುಟುಂಬ ಸದಸ್ಯರಿಗೆ ನೀಡಿದ ಸಾಲದ ವಿವರ ಉಲ್ಲೇಖಿಸಿ ಟೀಕೆ ಎದುರಿಸಿದರೂ, ಇದು ಸಾಮಾನ್ಯ ಪ್ರಕ್ರಿಯೆ. ಆಸ್ತಿ ವಿವರವನ್ನು ಗೌಪ್ಯವಾಗಿ ಇಟ್ಟಿದ್ದಾರೆ ಎಂಬ ಆರೋಪ ತಪ್ಪಿಸಲು ವಿಜಯ್ ಈ ಮಾಹಿತಿ ಹಂಚಿಕೊಂಡಿದ್ದಾರೆ. ಇದರಿಂದ ಯಾವುದೇ ಅಕ್ರಮವಿಲ್ಲ, ಬದಲಾಗಿ ಪಾರದರ್ಶಕತೆ ಕಾಯ್ದುಕೊಂಡಿದ್ದಾರೆ.

ತಂದೆ, ಮಕ್ಕಳಿಗೂ ಸಾಲ ಕೊಟ್ಟಿದ್ದಾರೆ ದಳಪತಿ ವಿಜಯ್; ಟೀಕೆ ಎದುರಿಸಿದ ನಟ
ವಿಜಯ್

Updated on: Mar 31, 2026 | 9:02 AM

ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ದಳಪತಿ ವಿಜಯ್ ಅವರು ಟಿವಿಕೆ ಪಕ್ಷದ ಮೂಲಕ ಸ್ಪರ್ಧೆಗೆ ಇಳಿದಿದ್ದಾರೆ. ಅವರು ಈಗ ಅಫಿಡವಿಟ್ ಸಲ್ಲಿಕೆ ಮಾಡಿದ್ದು, ಇದರಲ್ಲಿ ತಮ್ಮ ಆಸ್ತಿ ವಿವರವನ್ನು ಘೋಷಣೆ ಮಾಡಿದ್ದಾರೆ. ವಿಜಯ್ ಅವರು 603 ಕೋಟಿ ರೂಪಾಯಿ ಆಸ್ತಿ ಹೊಂದಿದ್ದಾರೆ. ಅಫಿಡವಿಟ್ ಅಲ್ಲಿ ಸಾಲ ಕೊಟ್ಟ ವಿವರ ಕೂಡ ಇದೆ. ಇದೇ ವಿಷಯವನ್ನು ಇಟ್ಟುಕೊಂಡು ಕೆಲವರು ಟೀಕೆ ಮಾಡುತ್ತಿದ್ದಾರೆ. ಆದರೆ, ಇದರ ಅಸಲಿಯತ್ತು ಬೇರೆಯದೇ ಇದೆ.

ವಿಜಯ್ ಅವರು 603 ಕೋಟಿ ರೂಪಾಯಿ ಆಸ್ತಿಯಲ್ಲಿ 404.58 ಕೋಟಿ ರೂಪಾಯಿ ಮೊತ್ತದ ಚರಾಸ್ತಿ ಹಾಗೂ 198.62 ಕೋಟಿ ರೂಪಾಯಿ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಅವರು ಕೊಡೈಕೆನಾಲ್ ಅಲ್ಲಿ ಎಸ್ಟೇಟ್ ಹೊಂದಿದ್ದಾರೆ. ಚೆನ್ನೈನ ವಿವಿಧ ಕಡೆಗಳಲ್ಲಿ ವಾಣಿಜ್ಯ ಮಳಿಗೆ ಇದೆ. ಈ ಮಧ್ಯೆ ಅವರು ತಮ್ಮವರಿಗೆ ಕೊಟ್ಟ ಸಾಲದ ವಿಷಯ ಉಲ್ಲೇಖ ಆಗಿದೆ.

ಸಂಗೀತಾ ಅವರಿಗೆ 12 ಕೋಟಿ ರೂಪಾಯಿ, ತಂದೆಗೆ 3 ಕೋಟಿ ರೂಪಾಯಿ ಸಾಲ, ಮಗನಿಗೆ ಹಾಗೂ ತಾಯಿಗೆ ತಲಾ 87 ಲಕ್ಷ ರೂಪಾಯಿ, ಮಗಳಿಗೆ 4 ಲಕ್ಷ ರೂಪಾಯಿ ಸಾಲ ಕೊಟ್ಟ ಬಗ್ಗೆ ಉಲ್ಲೇಖ ಆಗಿದೆ. ಇದನ್ನು ಅನೇಕರು ಪ್ರಶ್ನೆ ಮಾಡುತ್ತಿದ್ದಾರೆ. ಮಗ ಹಾಗೂ ಅಪ್ಪನಿಗೂ ವಿಜಯ್ ಸಾಲ ಕೊಟ್ಟಿದ್ದಾರೆ ಎಂದರೆ ಇದರ ಅರ್ಥ ಏನು ಎಂದು ಅನೇಕರು ಪ್ರಶ್ನೆ ಮಾಡುತ್ತಿದ್ದಾರೆ.

ಇದನ್ನೂ ಓದಿ: ದಳಪತಿ ವಿಜಯ್ 603 ಕೋಟಿ ರೂಪಾಯಿ ಆಸ್ತಿ ವಿವರ ಬಹಿರಂಗ: ಪತ್ನಿ ಬಳಿ ಎಷ್ಟಿದೆ?

ಆದರೆ, ಇದೊಂದು ಸಾಮಾನ್ಯ ಪ್ರಕ್ರಿಯೆ. ಅಫಿಡವಿಟ್ ಪರಿಶೀಲನೆಯ ಸಮಯದಲ್ಲಿ ಮಗ, ಪತ್ನಿ ಅಥವಾ ಯಾರೇ ಇರಬಹುದು, ಅವರಿಗೆ ಕೊಟ್ಟ ಹಣ ಉಲ್ಲೇಖ ಆಗದಿದ್ದರೆ ಅದನ್ನು ಗೌಪ್ಯವಾಗಿ ಇಟ್ಟಿದ್ದು ಎಂದು ಪರಿಗಣಿಸಲಾಗುತ್ತದೆ. ಹಾಗಾಬಾರದು ಎಂಬ ಕಾರಣಕ್ಕೆ ವಿಜಯ್ ಅದನ್ನು ಉಲ್ಲೇಖಿಸಿದ್ದಾರೆ ಎಂದು ಕೆಲವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us