ದಳಪತಿ ವಿಜಯ್ ವಿಚ್ಛೇದನಕ್ಕೆ ದೊಡ್ಡ ಟ್ವಿಸ್ಟ್: ತ್ರಿಷಾ ಜತೆ ಮದುವೆಗೆ ಹಾಜರಿ

ದಳಪತಿ ವಿಜಯ್ ಅವರ ಸಂಸಾರದಲ್ಲಿ ಬಿರುಕು ಮೂಡಿದೆ. ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಲಾಗಿದೆ. ಈ ನಡುವೆ ನಟಿ ತ್ರಿಷಾ ಮತ್ತು ವಿಜಯ್ ಅವರ ಬಗ್ಗೆ ಸಾಕಷ್ಟು ವದಂತಿ ಕೂಡ ಕೇಳಿಬರುತ್ತಿದೆ. ಹಾಗಿದ್ದರೂ ಕೂಡ ಅವರಿಬ್ಬರು ಜೊತೆಯಾಗಿ ಮದುವೆ ಬಂದು ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ.

ದಳಪತಿ ವಿಜಯ್ ವಿಚ್ಛೇದನಕ್ಕೆ ದೊಡ್ಡ ಟ್ವಿಸ್ಟ್: ತ್ರಿಷಾ ಜತೆ ಮದುವೆಗೆ ಹಾಜರಿ
Thalapthy Vijay, Trisha Krishnan

Updated on: Mar 05, 2026 | 10:01 PM

ತಮಿಳು ಚಿತ್ರರಂಗದ ಖ್ಯಾತ ನಟ ದಳಪತಿ ವಿಜಯ್ (Thalapthy Vijay) ಮತ್ತು ಅವರ ಪತ್ನಿ ಸಂಗೀತಾ 27 ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡುತ್ತಿದ್ದಾರೆ. ಸಂಗೀತಾ ಅವರು ವಿಚ್ಛೇದನಕ್ಕೆ (Divorce) ಅರ್ಜಿ ಸಲ್ಲಿಸಿದ್ದಾರೆ ಎಂಬ ವರದಿಗಳ ಬೆನ್ನಲ್ಲೇ, ವಿಜಯ್ ಅವರು ಖ್ಯಾತ ನಟಿ ತ್ರಿಷಾ ಕೃಷ್ಣನ್ ಜೊತೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಚೆನ್ನೈನಲ್ಲಿ ಇಂದು (ಮಾರ್ಚ್ 5) ಸಂಜೆ ನಡೆದ ಎಸ್‌. ಕಲ್ಪತಿ ಸುರೇಶ್ ಮತ್ತು ಮೀನಾಕ್ಷಿ ಸುರೇಶ್ ಅವರ ಪುತ್ರನ ವಿವಾಹ ಸಮಾರಂಭದಲ್ಲಿ ವಿಜಯ್ ಹಾಗೂ ತ್ರಿಷಾ (Trisha) ಒಟ್ಟಾಗಿ ಭಾಗವಹಿಸಿದ್ದರು.

ವಿಚ್ಛೇದನದ ವದಂತಿಗಳು ಮತ್ತು ಟೀಕೆಗಳು ಜೋರಾಗಿರುವ ಈ ಸಮಯದಲ್ಲಿ, ವಿಜಯ್ ಮತ್ತು ತ್ರಿಷಾ ಅವರು ಸಾರ್ವಜನಿಕವಾಗಿ ಒಟ್ಟಿಗೆ ಕಾಣಿಸಿಕೊಂಡಿರುವುದು ಅಭಿಮಾನಿಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ. ಈ ವಿಡಿಯೋ ಸದ್ಯ ಇಂಟರ್ನೆಟ್‌ನಲ್ಲಿ ಸಖತ್ ವೈರಲ್ ಆಗುತ್ತಿದೆ. ನೆಟ್ಟಿಗರು ಹಲವು ಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.

ವಿಜಯ್ ಅವರ ಪತ್ನಿ ಸಂಗೀತಾ ಸಲ್ಲಿಸಿದ್ದಾರೆ ಎನ್ನಲಾದ ವಿಚ್ಛೇದನ ಅರ್ಜಿಯಲ್ಲಿ, ವಿಜಯ್ ಅವರಿಗೆ ಓರ್ವ ನಟಿಯೊಂದಿಗೆ ಸಂಬಂಧವಿದೆ ಎಂದು ಆರೋಪಿಸಲಾಗಿತ್ತು. ಈ ನಟಿ ಬೇರೆ ಯಾರೂ ಅಲ್ಲ, ಅದು ತ್ರಿಷಾ ಕೃಷ್ಣನ್ ಎಂದೇ ನೆಟ್ಟಿಗರು ಊಹಿಸುತ್ತಿದ್ದಾರೆ. ಇವರಿಬ್ಬರೂ ದೀರ್ಘಕಾಲದಿಂದ ಲಿವ್-ಇನ್ ರಿಲೇಷನ್‌ಶಿಪ್‌ನಲ್ಲಿದ್ದಾರೆ ಎಂಬ ಗಾಳಿಸುದ್ದಿಗಳು ಈ ಹಿಂದೆಯೇ ಹರಿದಾಡುತ್ತಿದ್ದವು. ಇಂದಿನ ಘಟನೆಯು ಆ ವದಂತಿ ಬೆಂಕಿಗೆ ಮತ್ತಷ್ಟು ತುಪ್ಪ ಸುರಿದಂತಾಗಿದೆ.

ತ್ರಿಷಾ ಕೃಷ್ಣನ್,  ದಳಪತಿ ವಿಜಯ್ ವೈರಲ್ ವಿಡಿಯೋ:

ಈ ವಿವಾದದ ಬಗ್ಗೆ ತಮಿಳುನಾಡಿನ ಜನತೆ ಬೇರೆ ಬೇರೆ ಅಭಿಪ್ರಾಯ ಹೊಂದಿದ್ದಾರೆ. ಟೀಕೆ ಮಾಡುವವರು ವಿಜಯ್ ಅವರ ನೈತಿಕತೆಯ ಬಗ್ಗೆ ಪ್ರಶ್ನೆ ಎತ್ತುತ್ತಿದ್ದು, ಸಂಗೀತಾಗೆ ಆದ ಅನ್ಯಾಯದ ಬಗ್ಗೆ ಮಾತನಾಡುತ್ತಿದ್ದಾರೆ. ಬೆಂಬಲಿಗರು ಮತ್ತು ವಿಜಯ್ ಅವರ ಅಭಿಮಾನಿಗಳು ಇದೊಂದು ರಾಜಕೀಯ ಪಿತೂರಿ ಎನ್ನುತ್ತಿದ್ದಾರೆ. ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ, ವಿಜಯ್ ಅವರ ರಾಜಕೀಯ ಜೀವನಕ್ಕೆ ಅಡ್ಡಿಪಡಿಸಲು ವಿರೋಧ ಪಕ್ಷಗಳು ಈ ವಿಚ್ಛೇದನದ ವಿಚಾರವನ್ನು ದಾಳವಾಗಿ ಬಳಸಿಕೊಳ್ಳುತ್ತಿವೆ ಎಂಬುದು ಫ್ಯಾನ್ಸ್ ವಾದ.

ಇದನ್ನೂ ಓದಿ: ವಿಚ್ಛೇದನಕ್ಕೆ ಅರ್ಜಿ: ದಳಪತಿ ವಿಜಯ್ ಪತ್ನಿಗೆ 250 ಕೋಟಿ ರೂ. ಜೀವನಾಂಶ?

ಸಾಮಾನ್ಯವಾಗಿ ವೈಯಕ್ತಿಕ ಜೀವನದ ಬಗ್ಗೆ ಗಾಸಿಪ್ ಕೇಳಿಬಂದಾಗ ಅದನ್ನು ತಳ್ಳಿಹಾಕಲು ಸೆಲೆಬ್ರಿಟಿಗಳು ಬಯಸುತ್ತಾರೆ. ಆದರೆ ತ್ರಿಷಾ ಮತ್ತು ವಿಜಯ್ ಅವರು ಆ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಧೈರ್ಯವಾಗಿಯೇ ಅವರು ಮದುವೆ ಸಮಾರಂಭಕ್ಕೆ ಜೊತೆಯಾಗಿ ಬಂದಿದ್ದಾರೆ. ಹಾಗಾದರೆ ಅವರು ಸದ್ಯದಲ್ಲೇ ಏನಾದರೂ ಅಧಿಕೃತ ಘೋಷಣೆ ಮಾಡುತ್ತಾರಾ ಎಂಬ ಪ್ರಶ್ನೆ ಕೂಡ ಜನರಲ್ಲಿ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us