ದಕ್ಷಿಣ ಭಾರತದ ಖ್ಯಾತ ನಟಿ ತಮನ್ನಾ ಭಾಟಿಯಾ(Thamanna Bhatia) ಯಾರಿಗೆ ಗೊತ್ತಿಲ್ಲ ಹೇಳಿ. ತಮ್ಮ ನಟನೆಯಿಂದ ಅಪಾರ ಅಭಿಮಾನಿ ಬಳಗವನ್ನು ಹೊಂದಿರುವ ಅವರು ಇನ್ಸ್ಟಾಗ್ರಾಂನಲ್ಲಿ ಸದಾ ಚಟುವಟಿಕೆಯಿಂದಿರುತ್ತಾರೆ. ಇದೀಗ ಅವರು ನೃತ್ಯ ಮಾಡುತ್ತಿರುವ ವಿಡಿಯೊ ಹಂಚಿಕೊಂಡಿದ್ದು ಅದು ವೈರಲ್ ಆಗಿದೆ.
ಅಮೇರಿಕಾದ ಖ್ಯಾತ ಗಾಯಕಿ ದೋಜಾ ಕ್ಯಾಟ್ (Doja Cat) ಹಾಡಿರುವ ‘ಕಿಸ್ ಮಿ ಮೋರ್’(Kiss Me More) ಹಾಡಿಗೆ ತಮನ್ನಾ ಭರ್ಜರಿ ನೃತ್ಯ ಮಾಡಿದ್ದಾರೆ. ಬಾಹುಬಲಿ ಸೇರಿದಂತೆ ಹಲವಾರು ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿರುವ ಈ ನಟಿ ಈಗ ತಮ್ಮ ನೃತ್ಯದಿಂದ ಅಭಿಮಾನಿಗಳ ಮನಗೆದ್ದಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ಇತ್ತೀಚೆಗೆ ಹಂಚಿಕೊಂಡಿರುವ ವಿಡಿಯೊದಲ್ಲಿ ತಮನ್ನಾ ತಮ್ಮ ನೃತ್ಯ ಸಂಯೋಜಕಿ ಶಾಜಿಯಾ ಸಮ್ಜಿ(Shazia Samji) ಜೊತೆ ಈ ನೃತ್ಯವನ್ನು ಮಾಡಿದ್ದಾರೆ.
ನೀಲಿ ಬಣ್ಣದ ಟ್ರಾಕ್ ಪ್ಯಾಂಟ್ ಹಾಗೂ ಕಪ್ಪು ಬಣ್ಣದ ಶರ್ಟ್ ಅನ್ನು ತೊಟ್ಟಿರುವ ತಮನ್ನಾ, ಹಿಪ್- ಹಾಪ್ ಮಾದರಿಯ ನೃತ್ಯಕ್ಕೆ ಹೊಸ ಮೆರುಗನ್ನು ನೀಡಿ ಡಾನ್ಸ್ ಮಾಡಿದ್ಧಾರೆ. ಈ ವಿಡಿಯೊ ಜೊತೆಗೆ ‘ಕಟ್ ದಿ ರಬ್ಬಿಶ್’ ಎಂದು ಅಡಿಬರಹವನ್ನು ಬರೆದು ತಮನ್ನಾ ಹಂಚಿಕೊಂಡಿದ್ದಾರೆ.
ಸದ್ಯ ತಮನ್ನಾ ಭಾಟಿಯಾ ಇತ್ತೀಚೆಗೆ ಎರಡು ವೆಬ್ ಶೋಗಳಲ್ಲಿ ಕಾಣಿಸಿಕೊಂಡಿದ್ದರು. ‘ನವೆಂಬರ್ ಸ್ಟೋರಿ’ ಹಾಗೂ ’11th hour’ ಎಂಬ ಈ ಎರಡೂ ಶೋಗಳು ಈ ವರ್ಷದ ಮೊದಲಿಗೆ ಬಿಡುಗಡೆಯಾಗಿತ್ತು. ಸದ್ಯ ಅವರು ‘ಮಾಸ್ಟರ್ ಚೆಫ್ ಇಂಡಿಯಾ- ತೆಲುಗು’ ಅವತರಣಿಕೆಯ ಚಿತ್ರೀಕರಣದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಚಿತ್ರಗಳ ವಿಚಾರಕ್ಕೆ ಬಂದರೆ ಅವರು ಕೊನೆಗೆ ಕಾಣಿಸಿಕೊಂಡಿದ್ದು 2019ರಲ್ಲಿ ತೆರೆಕಂಡ ‘ಆಕ್ಷನ್’ ಚಿತ್ರದಲ್ಲಿ. ನಂತರ ನವಾಜುದ್ದೀನ್ ಸಿದ್ದಿಕಿಯವರೊಂದಿಗೆ ‘ಬೋಲೆ ಚುಡಿಯಾ’ ಚಿತ್ರದಲ್ಲೂ ಕಾಣಿಸಿಕೊಂಡಿದ್ಧಾರೆ.
ಅವರ ಮುಂದಿನ ಚಿತ್ರ ಹಿಂದಿಯ ಸೂಪರ್ ಹಿಟ್ ಚಿತ್ರ ಕ್ವೀನ್ನ ತೆಲುಗು ಅವತರಣಿಕೆಯಾದ ‘ದಟ್ ಈಸ್ ಮಹಾಲಕ್ಷ್ಮಿ’. ಅವರು ಅಂಧಾದುನ್ನ ತೆಲುಗು ರಿಮೇಕ್ನಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ.
(Thamanna Bhatia’s dance for Kiss Me More song gets huge appreciationn from fans)
Published On - 1:45 pm, Wed, 14 July 21