‘ದಿ ಫ್ಯಾಮಿಲಿ ಮ್ಯಾನ್-2’ ವೆಬ್ ಸೀರಿಸ್ ಟ್ರೇಲರ್ ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ವಿವಾದ ಹೊತ್ತಿಸಿತ್ತು. ಈ ವೆಬ್ ಸೀರಿಸ್ನಲ್ಲಿ ತಮಿಳರನ್ನು ಉಗ್ರಗಾಮಿಗಳಂತೆ ತೋರಿಸಲಾಗಿದೆ ಎನ್ನುವ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗಳು ಕೂಡ ನಡೆದಿದ್ದವು. ಈಗ ಈ ವೆಬ್ ಸೀರಿಸ್ಗೆ ಬ್ಯಾನ್ ಆಗುವ ಭಯ ಕಾಡಿದೆ.
2019ರಲ್ಲಿ ಬಿಡುಗಡೆ ಆಗಿದ್ದ ‘ದಿ ಫ್ಯಾಮಿಲಿ ಮ್ಯಾನ್’ ವೆಬ್ ಸಿರೀಸ್ ಸಿಕ್ಕಾಪಟ್ಟೆ ಹಿಟ್ ಆಗಿತ್ತು. ಮನೋಜ್ ಬಾಜಪೇಯ್, ಪ್ರಿಯಾಮಣಿ ಮುಂತಾದವರು ಮುಖ್ಯಭೂಮಿಕೆ ನಿಭಾಯಿಸಿದ್ದರು. ‘ದಿ ಫ್ಯಾಮಿಲಿ ಮ್ಯಾನ್ 2’ಗಾಗಿ ಎಲ್ಲರೂ ಕಾದಿದ್ದರು. ಆದರೆ, ಸಿನಿಮಾ ಟ್ರೇಲರ್ ತಮಿಳಿಯನ್ನರ ಆಕ್ರೋಶಕ್ಕೆ ಕಾರಣವಾಗಿದೆ. ತಮಿಳು ಜನರನ್ನು ಉಗ್ರಗಾಮಿಗಳ ರೀತಿಯಲ್ಲಿ ತೋರಿಸಲಾಗಿದೆ ಎನ್ನುವ ಆರೋಪ ಮಾಡಲಾಗಿದೆ. ಹೀಗಾಗಿ, ಅಮೇಜಾನ್ ಪ್ರೈಮ್ ಟ್ರೇಲರ್ ಎಡಿಟ್ ಮಾಡುವ ಕೆಲಸವನ್ನು ಕೂಡ ಮಾಡಿದೆ.
ಈಗ ರಾಜ್ಯಸಭಾ ಸದಸ್ಯ ವೈಕೊ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಪ್ರಕಾಶ್ ಜಾವ್ಡೇಕರ್ಗೆ ಪತ್ರ ಬರೆದಿದ್ದು, ಈ ವೆಬ್ ಸೀರಿಸ್ ಮೇಲೆ ನಿಷೇಧ ಹೇರುವಂತೆ ಒತ್ತಾಯಿಸಿದ್ದಾರೆ. ‘ದಿ ಫ್ಯಾಮಿಲಿ ಮ್ಯಾನ್-2 ಟ್ರೇಲರ್ ತಮಿಳಿಯನ್ನರನ್ನು ಉಗ್ರರು ಹಾಗೂ ಪಾಕಿಸ್ತಾನದ ಐಎಸ್ಐ ಏಜೆಂಟ್ಗಳು ಎಂದು ಬಿಂಬಿಸಿದೆ. ತಮಿಳು ಈಲಂ ಯೋಧರು ಮಾಡಿದ ತ್ಯಾಗಗಳನ್ನು ಸಹ ಭಯೋತ್ಪಾದಕ ಕೃತ್ಯವೆಂದು ತಪ್ಪಾಗಿ ತೋರಿಸಲಾಗಿದೆ. ಈ ಎಲ್ಲಾ ಚಿತ್ರಣಗಳು ತಮಿಳು ಜನರ ಭಾವನೆ ಮತ್ತು ಸಂಸ್ಕೃತಿಯನ್ನು ನೋಯಿಸಿವೆ ಎಂದು’ ಪತ್ರದಲ್ಲಿ ಹೇಳಲಾಗಿದ್ದು, ಈ ವೆಬ್ ಸೀರಿಸ್ ಬ್ಯಾನ್ ಮಾಡುವಂತೆ ಒತ್ತಾಯಿಸಿದ್ದಾರೆ. ಒಂದೊಮ್ಮೆ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯ ಇದನ್ನು ಗಂಭೀರವಾಗಿ ಪರಿಗಣಿಸಿದರೆ ದಿ ಫ್ಯಾಮಿಲಿ ಮ್ಯಾನ್-2ಗೆ ಸಂಕಷ್ಟ ಗ್ಯಾರಂಟಿ.
‘ದಿ ಫ್ಯಾಮಿಲಿ ಮ್ಯಾನ್ ಸೀಸನ್-2’ ಜೂನ್ 4ರಂದು ಅಮೇಜಾನ್ ಪ್ರೈಮ್ನಲ್ಲಿ ಪ್ರೀಮಿಯರ್ ಆಗುತ್ತಿದೆ. ಈ ವೆಬ್ ಸೀರಿಸ್ನ ನಿರ್ದೇಶನ ಜವಾಬ್ದಾರಿಯನ್ನು ರಾಜ್ ಮತ್ತು ಡಿ.ಕೆ. ನಿಭಾಯಿಸಿದ್ದಾರೆ. ಮೊದಲ ಸೀಸನ್ ದೊಡ್ಡಮಟ್ಟದಲ್ಲಿ ಹಿಟ್ ಆದ್ದರಿಂದ ಎರಡನೇ ಸೀಸನ್ಮೇಲೆ ಹೆಚ್ಚು ನಿರೀಕ್ಷೆ ಇದೆ.
ಇದನ್ನೂ ಓದಿ: ತಮಿಳರ ಕೋಪಕ್ಕೆ ಕಾರಣವಾದ ಸಮಂತಾ; ‘ದಿ ಫ್ಯಾಮಿಲಿ ಮ್ಯಾನ್ 2’ ವೆಬ್ ಸಿರೀಸ್ನಲ್ಲಿ ಅವರು ಮಾಡಿದ ತಪ್ಪೇನು?
‘ದಿ ಫ್ಯಾಮಿಲಿ ಮ್ಯಾನ್’ ನಿರ್ದೇಶಕರ ಜೊತೆ ಮಹೇಶ್ ಬಾಬು ಅಥವಾ ದೇವರಕೊಂಡ ಸಿನಿಮಾ; ಹೊರಬಿತ್ತು ಹೊಸ ಸುದ್ದಿ
Published On - 8:28 pm, Mon, 24 May 21