
ಸಮಂತಾ ಅಕ್ಕಿನೇನಿ, ಮನೋಜ್ ಬಾಜಪಾಯಿ, ಪ್ರಿಯಾಮಣಿ ನಟನೆಯ ‘ದಿ ಫ್ಯಾಮಿಲಿ ಮ್ಯಾನ್ 2’ ವೆಬ್ ಸಿರೀಸ್ ಬಿಡುಗಡೆ ಆಗಿದೆ. ಅಮೇಜಾನ್ ಪ್ರೈಂ ವಿಡಿಯೋದಲ್ಲಿ ಗುರುವಾರ (ಜೂ.3) ಸಂಜೆಯೇ ವೀಕ್ಷಣೆಗೆ ಲಭ್ಯವಾಗಿದೆ. ಬಹಳ ದಿನಗಳಿಂದ ಈ ವೆಬ್ ಸಿರೀಸ್ಗಾಗಿ ಕಾದಿದ್ದ ಬಹುತೇಕರು ಒಂದೇ ಬಾರಿಗೆ ಎಲ್ಲ ಎಪಿಸೋಡ್ಗಳನ್ನು ನೋಡಿ ಮುಗಿಸುತ್ತಿದ್ದಾರೆ. ಎಲ್ಲರಿಂದಲೂ ಪಾಸಿಟಿವ್ ಪ್ರತಿಕ್ರಿಯೆಗಳು ಬರುತ್ತಿವೆ. ಮೊದಲ ಸೀಸನ್ಗಿಂತಲೂ ಎರಡನೇ ಸೀಸನ್ ಚೆನ್ನಾಗಿ ಮೂಡಿಬಂದಿದೆ ಎಂಬ ಅಭಿಪ್ರಾಯ ಕೇಳಿಬರುತ್ತಿದೆ. ಸೋಶಿಯಲ್ ಮೀಡಿಯಾ ಮೂಲಕ ಪ್ರೇಕ್ಷಕರು ತಮ್ಮ ವಿಮರ್ಶೆ ತಿಳಿಸುತ್ತಿದ್ದಾರೆ.
ಇದೇ ಮೊದಲ ಬಾರಿಗೆ ‘ದಿ ಫ್ಯಾಮಿಲಿ ಮ್ಯಾನ್ 2’ ಮೂಲಕ ಸಮಂತಾ ಅವರು ವೆಬ್ ಸಿರೀಸ್ ಲೋಕಕ್ಕೆ ಕಾಲಿಟ್ಟಿದ್ದು, ರಗಡ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಅಭಿನಯಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. 9 ಎಪಿಸೋಡ್ಗಳ ಈ ಸಿರೀಸ್ನಲ್ಲಿ ಭರ್ಜರಿ ಆ್ಯಕ್ಷನ್ ದೃಶ್ಯಗಳು ಕೂಡ ಇದೆ. ಒಟ್ಟಾರೆ ಈ ವೆಬ್ ಸರಣಿ ಕಣ್ತುಂಬಿಕೊಂಡವರು ಒಂದೇ ಮಾತಿನಲ್ಲಿ ‘ಮಾಸ್ಟರ್ಪೀಸ್’ ಎಂದು ಹೊಗಳುತ್ತಿದ್ದಾರೆ.
ರಾಜ್ ಮತ್ತು ಡಿಕೆ ಜೊತೆಯಾಗಿ ನಿರ್ದೇಶನ ಮಾಡಿರುವ ‘ದಿ ಫ್ಯಾಮಿಲಿ ಮ್ಯಾನ್ 2’ ನಿರೂಪಣೆ ಬಿಗಿಯಾಗಿದೆ. ಪ್ರತಿ ಎಪಿಸೋಡ್ ಕೂಡ ಥ್ರಿಲ್ಲಿಂಗ್ ಆಗಿದೆ. ನೋಡುಗರನ್ನು ಸೆಳೆದುಕೊಳ್ಳುವ ಗುಣ ಇದಕ್ಕಿದೆ. ಸಾಹಸ ದೃಶ್ಯಗಳು ಮಾತ್ರವಲ್ಲದೆ ಕಾಮಿಡಿ ಸನ್ನಿವೇಶಗಳು ಕೂಡ ಇಲ್ಲಿನ ಪ್ಲಸ್ ಪಾಯಿಂಟ್. ಕಥೆ ಕೂಡ ಕುತೂಹಲ ಭರಿತವಾಗಿದೆ ಎಂದು ಪ್ರೇಕ್ಷಕರು ಅನಿಸಿಕೆ ಹಂಚಿಕೊಂಡಿದ್ದಾರೆ.
ಮೊದಲ ಸೀಸನ್ ರೀತಿಯೇ ಎರಡನೇ ಸೀಸನ್ನಲ್ಲೂ ನಟ ಮನೋಜ್ ಬಾಜಪಾಯಿ ಮೋಡಿ ಮಾಡಿದ್ದಾರೆ. ತನಿಖಾಧಿಕಾರಿಯಾಗಿ ಮತ್ತು ಫ್ಯಾಮಿಲಿ ಮ್ಯಾನ್ ಆಗಿ ಅವರ ನಟನೆಗೆ ಪ್ರೇಕ್ಷಕರು ಫಿದಾ ಆಗುತ್ತಿದ್ದಾರೆ. ‘6ರಿಂದ 9ನೇ ಎಪಿಸೋಡ್ವರೆಗೆ ವೇಗದ ನಿರೂಪಣೆ ಇದೆ. ಮನೋಜ್ ಬಾಯಪಾಯಿ ನಿಜವಾಗಿಯೂ ಲೆಜೆಂಡ್. ಅವರನ್ನು ನಾವು ಇನ್ನಷ್ಟು ಪ್ರೀತಿಸಬೇಕಿದೆ’ ಎಂದು ಅಭಿಮಾನಿಯೊಬ್ಬರು ಮೆಚ್ಚುಗೆ ಸೂಚಿಸಿದ್ದಾರೆ.
ಇಷ್ಟು ದಿನಗಳ ಕಾಲ ಸಮಂತಾ ಅವರನ್ನು ಬೇರೆ ಬೇರೆ ಪಾತ್ರಗಳಲ್ಲಿ ನೋಡಿದ್ದ ಪ್ರೇಕ್ಷಕರಿಗೆ ‘ದಿ ಫ್ಯಾಮಿಲಿ ಮ್ಯಾನ್ 2’ನಲ್ಲಿ ಸರ್ಪ್ರೈಸ್ ಸಿಕ್ಕಿದೆ. ಸಿಕ್ಕಾಪಟ್ಟೆ ರಫ್ ಆ್ಯಂಡ್ ಟಫ್ ಆದಂತಹ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ವೆಬ್ ಸಿರೀಸ್ ಲೋಕಕ್ಕೆ ಕಾಲಿಡುತ್ತಲೇ ಅವರು ಸಿಕ್ಕಾಪಟ್ಟೆ ಧೂಳೆಬ್ಬಿಸಿದ್ದಾರೆ.
‘ನಿಮ್ಮನ್ನು ನಾವು ಇಂಥ ಅವತಾರದಲ್ಲಿ ನೋಡಿಯೇ ಇರಲಿಲ್ಲ. ಈ ಪಾತ್ರವನ್ನು ನಿಮಗಿಂತ ಚೆನ್ನಾಗಿ ಬೇರೆ ಯಾರೂ ಮಾಡಲು ಸಾಧ್ಯವಿಲ್ಲ’ ಎಂದು ನೆಟ್ಟಿಗರೊಬ್ಬರು ಟ್ವೀಟ್ ಮಾಡಿದ್ದಾರೆ. ‘ಮನೋಜ್ ಬಾಜಪೇಯ್ ನಟನೆಯನ್ನು ವರ್ಣಿಸಲು ಪದಗಳೇ ಇಲ್ಲ’ ಎಂದು ಅವರು ಹೇಳಿದ್ದಾರೆ. ಇಂಥ ನೂರಾರು ಟ್ವೀಟ್ಗಳ ಮೂಲಕ ‘ದಿ ಫ್ಯಾಮಿಲಿ ಮ್ಯಾನ್ 2’ಗೆ ಜನರು ಮೆಚ್ಚುಗೆ ಸೂಚಿಸುತ್ತಿದ್ದಾರೆ.
ಇದನ್ನೂ ಓದಿ:
‘ದಿ ಫ್ಯಾಮಿಲಿ ಮ್ಯಾನ್ 2’ ವಿವಾದದ ಬಗ್ಗೆ ಮೌನ ಮುರಿದ ಮನೋಜ್ ಬಾಜಪೇಯ್
ತಮಿಳರ ಕೋಪಕ್ಕೆ ಕಾರಣವಾದ ಸಮಂತಾ; ‘ದಿ ಫ್ಯಾಮಿಲಿ ಮ್ಯಾನ್ 2’ ವೆಬ್ ಸಿರೀಸ್ನಲ್ಲಿ ಅವರು ಮಾಡಿದ ತಪ್ಪೇನು?
Published On - 11:31 am, Fri, 4 June 21