ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್ ಸಂಸದೆ ಹಾಗೂ ನಟ ನುಸ್ರತ್ ಜಹಾನ್ ಗುರುವಾರ ಮಧ್ಯಾಹ್ನ ಕೋಲ್ಕತ್ತಾದ ಖಾಸಗಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಬುಧವಾರ ಸಂಜೆ ಪಾರ್ಕ್ ಸ್ಟ್ರೀಟ್‌ನಲ್ಲಿರುವ ಆಸ್ಪತ್ರೆಗೆ ದಾಖಲಾಗಿದ್ದ 31 ವರ್ಷದ ಜಹಾನ್, ಮಧ್ಯಾಹ್ನ 12.20 ರ ಸುಮಾರಿಗೆ, ಖಾಸಗಿ ಆಸ್ಪತ್ರೆಯೊಂದರಲ್ಲಿ ಮಗುವಿಗೆ ಜನ್ಮ ನೀಡಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಮತ್ತು ವೈದ್ಯರ ಕಣ್ಗಾವಲಿನಲ್ಲಿ ಇದ್ದಾರೆ ಎಂದು ಮೂಲಗಳು ತಿಳಿಸಿವೆ. ನುಸ್ರತ್ ಜಹಾನ್ ಅವರ ಸ್ನೇಹಿತ ಯಶ್ ದಾಸ್ ಗುಪ್ತಾ ಆಸ್ಪತ್ರೆಯಲ್ಲಿದ್ದರು ಎಂದು ಚಿತ್ರರಂಗದ ಮೂಲಗಳು ತಿಳಿಸಿವೆ.
ಈ ಕುರಿತು ಪಿಟಿಐ ಹಂಚಿಕೊಂಡಿರುವ ಟ್ವೀಟ್:
Trinamool Congress MP and actor Nusrat Jahan gives birth to baby boy at private hospital in Kolkata
— Press Trust of India (@PTI_News) August 26, 2021
ನುಸ್ರತ್ ಸ್ನೇಹಿತ ಯಶ್ ದಾಸ್ ಗುಪ್ತಾ ತಾಯಿ ಹಾಗೂ ಮಗು ಆರೋಗ್ಯವಾಗಿದ್ದಾರೆ ಎಂದು ತಿಳಿಸಿದ್ದಾರೆ. ಈ ಮೊದಲು ನುಸ್ರತ್, ನಿಖಿಲ್ ಜೈನ್ ಅವರನ್ನು ವಿವಾಹವಾಗಿ ಬೇರ್ಪಟ್ಟಿದ್ದರು. ಪ್ರಸ್ತುತ ಯಶ್ ದಾಸ್ ಗುಪ್ತಾ ಅವರೊಂದಿಗೆ ನುಸ್ರತ್ ಕಾಣಿಸಿಕೊಂಡಿದ್ದರೂ ಕೂಡಾ, ಈರ್ವರು ಸಂಬಂಧದ ಕುರಿತು ಹೆಚ್ಚಿನ ಮಾಹಿತಿ ಹಂಚಿಕೊಂಡಿಲ್ಲ.
ಇದನ್ನೂ ಓದಿ:
ಪ್ರಧಾನಿ ನರೇಂದ್ರ ಮೋದಿ ಪಾತ್ರದಲ್ಲಿ ರಾಜಮೌಳಿ ತಂದೆ? ವಿಜಯೇಂದ್ರ ಪ್ರಸಾದ್ಗೆ ಬಂತು ಆಫರ್
Viral Video: ಮೊಮ್ಮಗನೊಂದಿಗೆ 89 ವರ್ಷದ ಅಜ್ಜಿಯ ಸಕತ್ ಡಾನ್ಸ್; ವಿಡಿಯೋ ನೋಡಿದ್ರೆ ನೀವೂ ಫಿದಾ ಆಗ್ತೀರಾ
(TMC MP and Bengali actress Nusrat Jahan gives birth to Baby Boy)