ತ್ರಿಷಾ-ವಿಜಯ್ ಫೋಟೊ ಲೀಕ್: ಅಣ್ಣಾಮಲೈ ಸ್ಪೋಟಕ ಹೇಳಿಕೆ

Annamalai: ವಿಜಯ್ ಮತ್ತು ತ್ರಿಷಾ ಅವರ ಖಾಸಗಿ ವಿಮಾನ ಪ್ರಯಾಣದ ಫೋಟೋಗಳು ವೈರಲ್ ಆಗಿವೆ. ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಅವರು ಈ ಫೋಟೋ ಲೀಕ್‌ಗೆ ಡಿಎಂಕೆ ಐಟಿ ಸೆಲ್ ಮತ್ತು ರಾಜ್ಯ ಗುಪ್ತಚರ ಇಲಾಖೆಯ ಕೈವಾಡವಿದೆ ಎಂದು ಆರೋಪಿಸಿದ್ದಾರೆ. ವಿಜಯ್ ಅವರ ರಾಜಕೀಯ ಪ್ರವೇಶದ ನಂತರ ಇದು ರಾಜಕೀಯ ಚರ್ಚೆಗೆ ಕಾರಣವಾಗಿದೆ. ಈ ಘಟನೆಯು ಇಬ್ಬರ ನಡುವಿನ ಸಂಬಂಧದ ಬಗ್ಗೆ ಮತ್ತೊಮ್ಮೆ ಚರ್ಚೆಗೆ ಕಾರಣವಾಗಿದೆ.

ತ್ರಿಷಾ-ವಿಜಯ್ ಫೋಟೊ ಲೀಕ್: ಅಣ್ಣಾಮಲೈ ಸ್ಪೋಟಕ ಹೇಳಿಕೆ
Vijay Trishan

Updated on: Dec 20, 2024 | 6:09 PM

ನಟ ವಿಜಯ್ ಹಾಗೂ ತ್ರಿಷಾ ಇತ್ತೀಚೆಗೆ ಸುದ್ದಿಯಲ್ಲಿದ್ದರು. ಇಬ್ಬರು ಒಟ್ಟಿಗೆ ವಿಮಾನದಲ್ಲಿ ಪ್ರಯಾಣ ಮಾಡಿದ್ದು, ಈಗಾಗಲೇ ಚಾಲ್ತಿಯಲ್ಲಿರುವ ಇವರಿಬ್ಬರ ಸಂಬಂಧದ ಕತೆಗೆ ಇನ್ನಷ್ಟು ಪುಷ್ಠಿ ನೀಡಿತು. ತ್ರಿಷಾ ಹಾಗೂ ವಿಜಯ್ ಪರಸ್ಪರ ರಿಲೇಷನ್​ಶಿಪ್​ನಲ್ಲಿದ್ದಾರೆ ಎಂಬ ಸುದ್ದಿ ಕಳೆ ಕೆಲ ವರ್ಷಗಳಿಂದಲೂ ಹರಿದಾಡುತ್ತಿದೆ. ಅಸಲಿಗೆ ಈ ಇಬ್ಬರ ಸಂಬಂಧದ ಬಗ್ಗೆ ಹತ್ತು ವರ್ಷದ ಹಿಂದೆಯೂ ಸುದ್ದಿಯಾಗಿತ್ತು. ಇದೀಗ ಈ ಇಬ್ಬರು ಒಟ್ಟಿಗೆ ಖಾಸಗಿ ವಿಮಾನದಲ್ಲಿ ಟ್ರಾವೆಲ್ ಮಾಡುವ ಚಿತ್ರಗಳು ವೈರಲ್ ಆಗಿದ್ದು, ಈಗ ಮತ್ತೆ ಅದೇ ಸುದ್ದಿಗಳು ಹರಿದಾಡುತ್ತಿವೆ. ಆದರೆ ಈ ಬಗ್ಗೆ ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಸ್ಪೋಟಕ ಹೇಳಿಕೆಯೊಂದನ್ನು ನೀಡಿದ್ದಾರೆ.

ತ್ರಿಷಾ ಹಾಗೂ ವಿಜಯ್ ಅವರುಗಳ ಚಿತ್ರ ವೈರಲ್ ಆಗುವ ಹಿಂದೆ ತಮಿಳುನಾಡಿನ ಆಡಳಿತ ಪಕ್ಷವಾದ ಡಿಎಂಕೆಯ ಐಟಿ ಸೆಲ್​ ಹಾಗೂ ರಾಜ್ಯದ ಗುಪ್ತಚರ ಇಲಾಖೆಯ ಕೈವಾಡ ಇದೆ ಎಂದು ಅಣ್ಣಾಮಲೈ ಆರೋಪಿಸಿದ್ದಾರೆ. ಚೆನ್ನೈ ವಿಮಾನ ನಿಲ್ದಾಣದಲ್ಲಿ ವಿಜಯ್ ಮತ್ತು ತ್ರಿಷಾ ಅವರುಗಳು ಭದ್ರತಾ ಪರೀಕ್ಷೆಗೆ ಒಳಗಾಗುವ ವೇಳೆ ರಾಜ್ಯ ಗುಪ್ತಚರ ಇಲಾಖೆಯವರು ಅವರಿಬ್ಬರ ವಿಡಿಯೋಗಳನ್ನು ಗುಟ್ಟಾಗಿ ತೆಗೆದು ಅವುಗಳನ್ನು ವೈರಲ್ ಮಾಡಿದ್ದಾರೆ ಎಂದು ಅಣ್ಣಾಮಲೈ ಹೇಳಿದ್ದಾರೆ.

ಇದನ್ನೂ ಓದಿ:ಕೀರ್ತಿ ಸುರೇಶ್ ಮದುವೆಯಲ್ಲಿ ದಳಪತಿ ವಿಜಯ್; ಅಪರೂಪದ ಫೋಟೋ ಹಂಚಿಕೊಂಡ ನಟಿ

‘ವಿಜಯ್ ಇತ್ತೀಚೆಗಷ್ಟೆ ರಾಜಕೀಯಕ್ಕೆ ಬಂದಿದ್ದಾರೆ. ಅವರು ಕಳೆದ ವಾರ ಮದುವೆಗೆಂದು ಗೋವಾಕ್ಕೆ ಹೋಗಿದ್ದರು. ವಿಮಾನ ನಿಲ್ದಾಣದ ಗೇಟ್ ನಂ.6ರಲ್ಲಿ ಭದ್ರತಾ ತಪಾಸಣೆ ನಡೆಸಿ ಖಾಸಗಿ ವಿಮಾನದಲ್ಲಿ ತೆರಳಿದರು. ಆದರೆ ಅವರು ಫೊಟೊ ಲೀಕ್ ಆಗಿದೆ. ವಿಜಯ್ ಮದುವೆಗೆ ಯಾರೊಂದಿಗೆ ಬೇಕಾದರೂ ಹೋಗಬಹುದು. ಅದು ಅವರ ವೈಯಕ್ತಿಕ ಆಯ್ಕೆ, ಆದರೆ ಆ ಫೋಟೋ ತೆಗೆದು ಬಿಡುಗಡೆ ಮಾಡಿದವರು ಯಾರು? ಆ ಫೋಟೊಗಳನ್ನು ಡಿಎಂಕೆ ಐಟಿ ವಿಂಗ್​ ಕೈಗೆ ಕೊಟ್ಟಿದ್ದು ಯಾರು? ಎಂದು ಅಣ್ಣಾಮಲೈ ಪ್ರಶ್ನೆ ಮಾಡಿದ್ದಾರೆ.

ಕೆಲ ದಿನಗಳ ಹಿಂದೆ ಗೋವಾನಲ್ಲಿ ಕೀರ್ತಿ ಸುರೇಶ್ ಮತ್ತು ಆಂಟೊನಿ ತಟ್ಟಿಲ್ ಅವರ ವಿವಾಹ ನಡೆದಿತ್ತು. ಈ ಮದುವೆಗೆಂದು ವಿಜಯ್ ಮತ್ತು ತ್ರಿಷಾ ಒಟ್ಟಿಗೆ ಹೋಗಿದ್ದರು. ಈ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು. ರಾಜಕೀಯಕ್ಕೆ ಇಳಿದಿರುವ ವಿಜಯ್ ಅವರ ಈ ಚಿತ್ರಗಳನ್ನು ಎದುರಾಳಿ ಪಕ್ಷಗಳು ಬಳಸಿಕೊಂಡು ಮಾನಹಾನಿಗೆ ಇಳಿದಿದ್ದವು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ