
ರಷ್ಯಾ (Russia) ಮತ್ತು ಉಕ್ರೇನ್ (Ukraine) ನಡುವಿನ ಯುದ್ಧ ಮುಂದುವರಿದಿದೆ. ಈ ಯುದ್ಧದಲ್ಲಿ ಅದೆಷ್ಟೋ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇನ್ನೂ ಹಲವರು ಪ್ರಾಣ ಉಳಿಸಿಕೊಳ್ಳಲು ವಲಸೆ ಹೋಗಿದ್ದಾರೆ. ಆದರೆ, ಯುದ್ಧ ಮಾತ್ರ ನಿಲ್ಲುತ್ತಿಲ್ಲ. ಉಕ್ರೇನ್ನ ಪರಿಸ್ಥಿತಿ ದಿನ ಕಳೆದಂತೆ ಹದಗೆಡುತ್ತಲೇ ಇದೆ. ಈ ಮಧ್ಯೆ ಉಕ್ರೇನ್ ರಕ್ಷಣಾ ಪಡೆ ‘ಮಿಲಿಟರಿ ಆಸ್ಕರ್ ಪ್ರಶಸ್ತಿ’ (Military Oscar Award) ನೀಡುವ ಬಗ್ಗೆ ಘೋಷಣೆ ಮಾಡಿದೆ. ಯುದ್ಧದ ಸನ್ನಿವೇಶವನ್ನು ವಿವರಿಸುವ ವಿಷಯವನ್ನು ಇಟ್ಟುಕೊಂಡು ಒಟ್ಟೂ ಏಳು ವಿಭಾಗಗಳಲ್ಲಿ ಪ್ರಶಸ್ತಿ ನೀಡಿದೆ. ವಿಚಿತ್ರ ಎಂದರೆ ಟ್ರ್ಯಾಕ್ಟರ್ಗೂ ಇಲ್ಲಿ ಅವಾರ್ಡ್ ಸಿಕ್ಕಿದೆ!
ಕಪ್ಪು ಸಮುದ್ರದಲ್ಲಿ ಬ್ಯಾಲಿಸ್ಟಿಕ್ ಕ್ಷಿಪಣಿಯಿಂದ ರಷ್ಯಾದ ಯುದ್ಧನೌಕೆಯನ್ನು ಹೊಡೆದುರುಳಿಸಲಾಗಿತ್ತು. ಯುದ್ಧನೌಕೆ ಹೊತ್ತಿ ಉರಿಯುತ್ತಿರುವ ಫೋಟೋಗೆ ‘ಅತ್ಯುತ್ತಮ ಚಿತ್ರ’ ಪ್ರಶಸ್ತಿ ನೀಡಲಾಗಿದೆ. ಹೆಲಿಕಾಪ್ಟರ್ ಅನ್ನು ಹೊಡೆದುರುಳಿಸಿದ ದೃಶ್ಯವನ್ನು ಸೆರೆಹಿಡಿದಿದ್ದಕ್ಕೆ ಅತ್ಯುತ್ತಮ ಸಿನಿಮಾಟೋಗ್ರಾಫಿ ಅವಾರ್ಡ್ ನೀಡಲಾಗಿದೆ.
ರಷ್ಯಾ ಸೈನ್ಯದ ವಿರುದ್ಧ ಉಕ್ರೇನ್ನ ರೈತರು ತೊಡೆತಟ್ಟಿದ್ದರು. ರಷ್ಯಾದ ಟ್ಯಾಂಕರ್ಗಳನ್ನು ಟ್ರ್ಯಾಕ್ಟರ್ ಮೂಲಕ ಎಳೆದುಕೊಂಡು ಹೋಗಿದ್ದರು. ಈ ಮೂಲಕ ರಷ್ಯಾ ಪಡೆಗೆ ಸವಾಲೊಡ್ಡುವ ಕೆಲಸ ಮಾಡಿದ್ದರು. ಈ ಟ್ರ್ಯಾಕ್ಟರ್ಗಳಿಗೆ ‘ಅತ್ಯುತ್ತಮ ಪೋಷಕ ಕಲಾವಿದರು’ ಪ್ರಶಸ್ತಿಯನ್ನು ನೀಡಲಾಗಿದೆ!
ರಷ್ಯಾ ಸೇನೆ ವಿರುದ್ಧ ಏರ್ಸ್ಟ್ರೈಕ್ ಮಾಡಲು ಬೈರಕ್ತರ್ ಟಿಬಿ 2 ಡ್ರೋನ್ಗಳನ್ನು ಬಳಸಿಕೊಳ್ಳಲಾಗಿತ್ತು. ಈ ಮಿಸೈಲ್ಗೆ ‘ಇಂಟರ್ನ್ಯಾಷನಲ್ ಅವಾರ್ಡ್’ ಕೊಡಲಾಗಿದೆ. ಈ ಮಿಸೈಲ್ನಿಂದ ಯುದ್ಧ ವಾಹನ, 9 ಹೆಲಿಕಾಪ್ಟರ್ ಮುಂತಾದವನ್ನು ಈ ಮಿಸೈಲ್ಗಳ ಮೂಲಕ ಹೊಡೆದುರುಳಿಸಲಾಗಿದೆ.
ಸ್ಟಿಂಗರ್ ಮಿಸೈಲ್ನಿಂದ ರಷ್ಯಾದ ಹೆಲಿಕಾಪ್ಟರ್ ಅನ್ನು ಹೊಡೆದುರುಳಿಸಲಾಗಿದೆ. ಇದನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದೆ. ಈ ಫೋಟೋಗೆ ಅತ್ಯುತ್ತಮ ಛಾಯಾಗ್ರಹಣ ಪ್ರಶಸ್ತಿ ಸಿಕ್ಕಿದೆ! ಇದರ ಜತೆಗೆ ಹಲವು ಭಾವನಾತ್ಮಕ ವಿಚಾರಗಳಿಗೂ ಈ ಯುದ್ಧ ಸಾಕ್ಷಿ ಆಗಿದೆ. ಇಲ್ಲಿ ಖಾರ್ಕಿವ್ ಸಂತ್ರಸ್ತ ತಾಣದಲ್ಲಿ ಮಕ್ಕಳು ದೇಶದ ರಾಷ್ಟ್ರಗೀತೆಯನ್ನು ಹಾಡಿದ್ದರು. ಇವರಿಗೆ, ‘ಬೆಸ್ಟ್ ಸಾಂಗ್’ ಅವಾರ್ಡ್ ಸಿಕ್ಕಿದೆ. ಈ ಪ್ರಶಸ್ತಿಗಳು ವಿಡಂಬನಾತ್ಮಕವಾಗಿದೆ.
ಇದನ್ನೂ ಓದಿ: 33ನೇ ವಯಸ್ಸಿಗೆ ಕ್ಯಾನ್ಸರ್ನಿಂದ ಖ್ಯಾತ ಸಿಂಗರ್ ನಿಧನ; ಸಂತಾಪ ಸೂಚಿಸಿದ ಯುವರಾಜ್ ಸಿಂಗ್
ಪಡ್ಡೆಗಳ ಕಣ್ಣು ಕುಕ್ಕಿದ ಸಮಂತಾ ಹೊಸ ಅವತಾರ; ಇಲ್ಲಿದೆ ಫೋಟೋ ಗ್ಯಾಲರಿ
Published On - 11:46 am, Fri, 1 April 22