ಪವನ್ ಕಲ್ಯಾಣ್ ಅವರನ್ನು ಆಂಧ್ರ ಪ್ರದೇಶ ಸಿಎಂ ಎಂದ ಊರ್ವಶಿ ರೌಟೇಲಾ; ಸೋಶಿಯಲ್ ಮೀಡಿಯಾದಲ್ಲಿ ಟೀಕೆ

ಊರ್ವಶಿ ರೌಟೇಲಾ ಅವರು ಸಿನಿಮಾ ರಿಲೀಸ್​ಗೂ ಮೊದಲು ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್​ನಲ್ಲಿ ಅವರು ಉದ್ದೇಶಪೂರ್ವಕವಾಗಿ ಮಾಡಿದ ತಪ್ಪಿಗೆ ಅನೇಕರು ಟೀಕೆ ಮಾಡಿದ್ದಾರೆ.

ಪವನ್ ಕಲ್ಯಾಣ್ ಅವರನ್ನು ಆಂಧ್ರ ಪ್ರದೇಶ ಸಿಎಂ ಎಂದ ಊರ್ವಶಿ ರೌಟೇಲಾ; ಸೋಶಿಯಲ್ ಮೀಡಿಯಾದಲ್ಲಿ ಟೀಕೆ
ಊರ್ವಶಿ-ಸಾಯಿ ಧರಮ್ ತೇಜ್-ಪವನ್ ಕಲ್ಯಾಣ್

Updated on: Jul 29, 2023 | 6:31 AM

ನಟಿ ಊರ್ವಶಿ ರೌಟೇಲಾ (Urvashi Rautela) ಅವರು ಇತ್ತೀಚೆಗೆ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಒಂದಿಲ್ಲೊಂದು ವಿಚಾರಕ್ಕೆ ಅವರು ಸುದ್ದಿ ಆಗುತ್ತಲೇ ಇರುತ್ತಾರೆ. ಟ್ರೋಲ್ ಆದರೂ ಅವರಿಗೆ ಬೇಸರ ಇಲ್ಲ. ಒಟ್ಟಿನಲ್ಲಿ ಹೆಸರು ಚಾಲ್ತಿಯಲ್ಲಿರಬೇಕು ಎಂದು ಅವರು ಬಯಸುತ್ತಾರೆ. ಈಗ ಊರ್ವಶಿ ಮತ್ತೆ ಸುದ್ದಿಯಲ್ಲಿದ್ದಾರೆ. ಅವರು ಪವನ್ ಕಲ್ಯಾಣ್ (Pawan Kalyan) ಅವರನ್ನು ಆಂಧ್ರಪ್ರದೇಶದ ಸಿಎಂ ಎಂದು ಘೋಷಣೆ ಮಾಡಿದ್ದಾರೆ. ಈ ಪೋಸ್ಟ್ ವೈರಲ್ ಆಗಿದೆ. ಫ್ಯಾನ್ಸ್ ಕಡೆಯಿಂದ ಇದಕ್ಕೆ ವಿವಿಧ ರೀತಿಯಲ್ಲಿ ಕಮೆಂಟ್​ಗಳು ಬರುತ್ತಿವೆ.

‘ಬ್ರೋ’ ಸಿನಿಮಾ ಇಂದು (ಜುಲೈ 28) ರಿಲೀಸ್ ಆಗಿದೆ. ಸಾಯಿ ಧರಮ್ ತೇಜ್ ಹಾಗೂ ಪವನ್ ಕಲ್ಯಾಣ್​ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರದಲ್ಲಿ ಊರ್ವಶಿ ರೌಟೇಲಾ ಕೂಡ ಅಭಿನಯಿಸಿದ್ದಾರೆ. ಅವರು ಸಿನಿಮಾ ರಿಲೀಸ್​ಗೂ ಮೊದಲು ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್​ನಲ್ಲಿ ಅವರು ಉದ್ದೇಶಪೂರ್ವಕವಾಗಿ ಮಾಡಿದ ತಪ್ಪಿಗೆ ಅನೇಕರು ಟೀಕೆ ಮಾಡಿದ್ದಾರೆ.

‘ಬ್ರೋ’ ಸಿನಿಮಾದ ಪ್ರೀ-ರಿಲೀಸ್ ಕಾರ್ಯಕ್ರಮ ನಡೆದಿದೆ. ಈ ವೇಳೆ ಊರ್ವಶಿ ಅವರು ಸಾಯಿ ಧರಮ್ ತೇಜ್ ಹಾಗೂ ಪವನ್ ಕಲ್ಯಾಣ್ ಜೊತೆ ಪೋಸ್ ಕೊಟ್ಟಿದ್ದಾರೆ. ‘ಗೌರವಾನ್ವಿತ ಆಂಧ್ರಪ್ರದೇಶದ ಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರು ನಮ್ಮ ಸಿನಿಮಾದಲ್ಲಿ ಬ್ರೋ ಅವತಾರದಲ್ಲಿ. ಈ ಸಿನಿಮಾ ವಿಶ್ವಾದ್ಯಂತ ರಿಲೀಸ್ ಆಗತ್ತಿದೆ. ಎಲ್ಲರೂ ಸಿನಿಮಾ ವೀಕ್ಷಿಸಿ’ ಎಂದು ಕೋರಿದ್ದಾರೆ.

ಇದನ್ನೂ ಓದಿ: ಪವನ್ ಕಲ್ಯಾಣ್ ಹಂಚಿಕೊಂಡ ಮೊದಲ ಇನ್​ಸ್ಟಾಗ್ರಾಂ ವಿಡಿಯೋನಲ್ಲಿ ಕನ್ನಡದ ನಾಲ್ಕು ನಟರು

ಇದಕ್ಕೆ ಅನೇಕರು ಟೀಕೆ ಮಾಡಿದ್ದಾರೆ. ‘ಅಕ್ಕಾ ಅವರು ಸಿಎಂ ಅಲ್ಲ. ಅವರ ಬಳಿ ಎಂಎಲ್​ಎ ಆಗೋಕೂ ಸಾಧ್ಯವಾಗಿಲ್ಲ. ನಿಮಗೆ ಒಳ್ಳೆಯ ಡಾಕ್ಟರ್ ಅವಶ್ಯಕತೆ ಇದೆ’ ಎಂದು ಕೆಲವರು ಬರೆದುಕೊಂಡಿದ್ದಾರೆ. ‘ಊರ್ವಶಿಗೆ ನಿಜಕ್ಕೂ ತಲೆಕೆಟ್ಟಿದೆ. ಖ್ಯಾತಿ ಪಡೆಯಲು ಅವರು ಏನು ಮಾಡಲೂ ರೆಡಿ ಇದ್ದಾರೆ’ ಎಂದು ಬರೆದುಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 11:50 am, Fri, 28 July 23

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us