ಊರ್ವಶಿ ರೌಟೇಲಾ ಬಾತ್​ರೂಂ ವಿಡಿಯೋ ಲೀಕ್; ಸಿಟ್ಟಾದ ನಟಿ

|

Updated on: Jul 18, 2024 | 12:26 PM

ವಿಡಿಯೋನಲ್ಲಿ ಕುರ್ತಾ ಧರಿಸಿರುವ ಊರ್ವಶಿ ರೌಟೆಲಾ, ಸ್ನಾನ ಮಾಡಲೆಂದು ಬಾತ್​ರೂಂಗೆ ಬರುತ್ತಾರೆ. ಅವರ ಕೊರಳಿನಲ್ಲಿ ತಾಳಿ ರೀತಿ ಕಾಣುವ ಸರವೂ ಇದೆ. ಊರ್ವಶಿ ಟವೆಲ್ ಅನ್ನು ಹ್ಯಾಂಗರ್​ಗೆ ನೇತುಹಾಕಿ ತಮ್ಮ ಬಟ್ಟೆ ಕಳೆಯಲು ಮುಂದಾಗುತ್ತಾರೆ ಅಲ್ಲಿಗೆ ವಿಡಿಯೋ ಎಂಡ್ ಆಗಿದೆ.

ಊರ್ವಶಿ ರೌಟೇಲಾ ಬಾತ್​ರೂಂ ವಿಡಿಯೋ ಲೀಕ್; ಸಿಟ್ಟಾದ ನಟಿ
ಊರ್ವಶಿ
Follow us on

ನಟಿ ಊರ್ವಶಿ ರೌಟೇಲಾ ಅವರು ಆಗಾಗ ಸುದ್ದಿ ಆಗುತ್ತಲೇ ಇರುತ್ತಾರೆ. ಹಲವು ರೀತಿಯ ಕಾರಣಕ್ಕೆ ಅವರ ಹೆಸರು ಚರ್ಚೆ ಆಗುತ್ತಾ ಇರುತ್ತದೆ. ಈಗ ಊರ್ವಶಿ ಅವರ ವೈಯಕ್ತಿಕ ವಿಡಿಯೋ ಲೀಕ್ ಆಗಿದೆ. ಬಾತ್​ರೂಂನಲ್ಲಿ ಸ್ನಾನ ಮಾಡುತ್ತಿರುವ ವಿಡಿಯೋದಿಂದ ಊರ್ವಶಿ ರೌಟೇಲಾ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ವಿಡಿಯೋ ಲೀಕ್ ಆಗಿದ್ದು ಹೇಗೆ ಎನ್ನುವ ಪ್ರಶ್ನೆ ಅನೇಕರಲ್ಲಿ ಮೂಡಿದೆ. ಈ ಪ್ರಕರಣದ ಬಗ್ಗೆ ಅವರು ಸಿಟ್ಟಾಗಿದ್ದಾರೆ.

ಊರ್ವಶಿ ರೌಟೇಲಾ ಅವರು ಬಾತ್​ರೂಂಗೆ ಒಳಗೆ ಬಂದು ಬಟ್ಟೆ ತೆಗೆಯುತ್ತಾರೆ. ಈ ರೀತಿಯಲ್ಲಿ ವಿಡಿಯೋ ಇದೆ. ಇದನ್ನು ಯಾರೋ ರಹಸ್ಯ ಕ್ಯಾಮೆರಾ ಇಟ್ಟು ಶೂಟ್ ಮಾಡಿದಂತೆ ಇದೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಸೃಷ್ಟಿ ಮಾಡಿದೆ. ಸದ್ಯ ವಿಡಿಯೋ ಎಲ್ಲ ಕಡೆಗಳಲ್ಲಿ ವೈರಲ್ ಆಗುತ್ತಿದೆ.

ಈ ಪ್ರಕರಣದ ಬಗ್ಗೆ ಊರ್ವಶಿ ಅವರ ಮ್ಯಾನೇಜರ್ ಪ್ರತಿಕ್ರಿಯೆ ನೀಡಿದ್ದಾರೆ. ‘ಈ ರೀತಿಯ ವಿಡಿಯೋಗಳು ಹೇಗೆ ಲೀಕ್ ಆಗುತ್ತವೆ ಅನ್ನೋದು ಗೊತ್ತಿಲ್ಲ. ಈ ವಿಡಿಯೋನ ಸೋಶಿಯಲ್ ಮೀಡಿಯಾದಿಂದ ತೆಗೆದು ಹಾಕುವ ಪ್ರಯತ್ನದಲ್ಲಿ ಇದ್ದೇವೆ’ ಎಂದಿದ್ದಾರೆ. ಆದರೆ, ಸದ್ಯಕ್ಕಂತೂ ಈ ವಿಡಿಯೋಗೆ ಬ್ರೇಕ್ ಹಾಕೋಕೆ ಸಾಧ್ಯ ಆಗುತ್ತಿಲ್ಲ.

ಇದನ್ನೂ ಓದಿ: ಆ್ಯಕ್ಷನ್ ದೃಶ್ಯ ಮಾಡಲು ಹೋಗಿ ಕಾಲು ಮುರಿದುಕೊಂಡ ನಟಿ ಊರ್ವಶಿ ರೌಟೇಲಾ

ಊರ್ವಶಿ ರೌಟೇಲಾ ಅವರು ಪ್ರಚಾರ ಪ್ರಿಯೆ. ಸದಾ ಪ್ರಚಾರದಲ್ಲಿ ಇರಲು ಬಯಸುತ್ತಾರೆ. ಈಗ ಲೀಕ್ ಆಗಿರೋ ವಿಡಿಯೋ ಕೂಡ ಪ್ರಚಾರದ ಭಾಗವೇ ಆಗಿರಬಹುದು ಎಂಬುದು ಕೆಲವರ ಊಹೆ ಮಾಡಿದ್ದಾರೆ. ಏಕೆಂದರೆ ಅವರು ಸರಿಯಾಗಿ ಬಟ್ಟೆ ತೆಗೆಯುವ ವೇಳೆಗೆ ವಿಡಿಯೋ ಕಟ್ ಆಗಿದೆ. ಇದು ಹೇಗೆ ಸಾಧ್ಯ ಅನ್ನೋದು ಅನೇಕರ ಪ್ರಶ್ನೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.