
ನಟಿ ವನಿತಾ ವಿಜಯ್ಕುಮಾರ್ ಅವರು ಮದುವೆ ವಿಚಾರಕ್ಕೆ ಸಾಕಷ್ಟು ಸುದ್ದಿ ಆಗುತ್ತಿರುತ್ತಾರೆ. ಈಗಾಗಲೇ ಅವರು ಮೂರು ಮದುವೆ ಆಗಿದ್ದು, ಮೂರೂ ಸಂಬಂಧಗಳು ಮುರಿದು ಬಿದ್ದಿವೆ. ಈಗ ಅವರು ಮತ್ತೊಂದು ಮದುವೆ ಆಗುವ ಸೂಚನೆ ನೀಡಿದ್ದಾರೆ. ಸದ್ಯ ಅವರ ಟ್ವೀಟ್ ಸಾಕಷ್ಟು ವೈರಲ್ ಆಗಿದೆ.
ವನಿತಾ ವಿಜಯ್ಕುಮಾರ್ ಕಳೆದ ಜೂನ್ 27ರಂದು ಪೀಟರ್ ಪೌಲ್ ಜತೆ ಮದುವೆ ಆಗಿದ್ದರು. ಪೀಟರ್ ಪೌಲ್ಗೆ ಆಗಲೇ ವಿವಾಹ ಆಗಿತ್ತು. ಪೀಟರ್ ಮೊದಲನೇ ಪತ್ನಿ ಜಗಳ ತೆಗೆದಿದ್ದರು. ‘ನನಗೆ ವಿಚ್ಛೇದನ ನೀಡದೇ ನನ್ನ ಪತಿ ಎರಡನೇ ಮದುವೆ ಆಗಿದ್ದಾನೆ. ಹೀಗಾಗಿ, ಆತನ ಎರಡನೇ ಮದುವೆಗೆ ಕಾನೂನಿನಲ್ಲಿ ಮನ್ನಣೆ ಇಲ್ಲ’ ಎಂದು ಅವರ ಪತ್ನಿ ವಾದಿಸಿದ್ದರು.
ಪೀಟರ್ ಸ್ವಲ್ಪ ಹೆಚ್ಚಾಗಿ ಕುಡಿಯುತ್ತಿದ್ದ. ಕೆಲ ಸಮಯ ಇದನ್ನು ವನಿತಾ ಸಹಿಸಿಕೊಂಡರು. ಕೊನೆಗೆ ಕಳೆದ ನವೆಂಬರ್ ತಿಂಗಳಲ್ಲಿ ಇಬ್ಬರೂ ಬೇರೆ ಆದರು. ಈ ಮೂಲಕ ಅವರ ಮೂರನೇ ಸಂಬಂಧವೂ ಮುರಿದು ಬಿದ್ದಿತ್ತು. ಸದ್ಯ, ಅವರು ತಮ್ಮ ಟಿವಿ ಶೋ ಹಾಗೂ ಯೂಟ್ಯೂಬ್ ಚಾನೆಲ್ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ.
ಈಗ ಅವರು ಅಚ್ಚರಿಯ ಟ್ವೀಟ್ ಒಂದನ್ನು ಮಾಡಿದ್ದಾರೆ. ‘ನಾನು ಸಿಂಗಲ್ ಆಗಿದ್ದೇನೆ ಮತ್ತು ಲಭ್ಯವಿದ್ದೇನೆ. ನನ್ನ ಬಗ್ಗೆ ಯಾವುದೇ ಸುಳ್ಳು ಸುದ್ದಿ ಹಬ್ಬಿಸಬೇಡಿ ಮತ್ತು ಅದನ್ನು ನಂಬಬೇಡಿ’ ಎಂದು ಹೇಳಿದ್ದಾರೆ. ಅಂದಹಾಗೆ, ವನಿತಾ ಯಾವ ಅರ್ಥದಲ್ಲಿ ಈ ಟ್ವೀಟ್ ಮಾಡಿದ್ದಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ. ಕೆಲವರು ವನಿತಾ ನಾಲ್ಕನೇ ಮದುವೆ ಆಗುತ್ತಿದ್ದಾರೆ ಎಂದು ಬರೆದುಕೊಂಡಿದ್ದಾರೆ.
ಸದ್ಯ ವನಿತಾ ಬಿಗ್ ಬಾಸ್ ಜೋಡಿಗಳ್ ಶೋನಲ್ಲಿ ಸ್ಪರ್ಧಿಯಾಗಿದ್ದಾರೆ. ಬಿಗ್ ಬಾಸ್ನಲ್ಲಿ ಪಾಲ್ಗೊಂಡ ಸ್ಪರ್ಧಿಗಳು ಇದರಲ್ಲಿ ಸ್ಪರ್ಧಿಗಳಾಗಿದ್ದಾರೆ.
ಇದನ್ನೂ ಓದಿ: Viral Photo: ಮಮತಾ ಬ್ಯಾನರ್ಜಿಗೆ ಮದುವೆಯಂತೆ! ವರ ಯಾರು ಗೊತ್ತಾ? ಲಗ್ನ ಪತ್ರಿಕೆ ನೋಡಿ