ಅಲ್ಲು ಅರ್ಜುನ್ ಜಾತಕ ಹೇಗಿದೆ? ಜ್ಯೋತಿಷಿ ವೇಣು ಸ್ವಾಮಿ ಭವಿಷ್ಯ

|

Updated on: Dec 08, 2024 | 9:27 AM

Allu Arjun: ಅಲ್ಲು ಅರ್ಜುನ್ ನಟನೆಯ ‘ಪುಷ್ಪ 2’ ಕೆಲ ದಿನದ ಹಿಂದಷ್ಟೆ ಬಿಡುಗಡೆ ಆಗಿ ಬ್ಲಾಕ್ ಬಸ್ಟರ್ ಆಗಿದೆ. ಇದೀಗ ಸೆಲೆಬ್ರಿಟಿ ಜ್ಯೋತಿಷಿ ವೇಣು ಸ್ವಾಮಿ ಅಲ್ಲು ಅರ್ಜುನ್ ಭವಿಷ್ಯದ ಬಗ್ಗೆ ಅದೃಷ್ಟದ ಬಗ್ಗೆ ಮಾತನಾಡಿದ್ದಾರೆ.

ಅಲ್ಲು ಅರ್ಜುನ್ ಜಾತಕ ಹೇಗಿದೆ? ಜ್ಯೋತಿಷಿ ವೇಣು ಸ್ವಾಮಿ ಭವಿಷ್ಯ
Allu Arjun-Venu Swamy
Follow us on

ವೇಣು ಸ್ವಾಮಿ ಟಾಲಿವುಡ್​ನ ಸೆಲೆಬ್ರಿಟಿ ಜ್ಯೋತಿಷಿ. ಹಲವು ರಾಜಕಾರಣಿಗಳು, ಸಿನಿಮಾ ನಟ-ನಟಿಯರಿಗೆ ವಿಶೇಷ ಪೂಜೆಗಳನ್ನು ಮಾಡಿಸಿದ್ದಾರೆ. ಹಲವು ಸೆಲೆಬ್ರಿಟಿಗಳ ಜ್ಯೋತಿಷ್ಯವನ್ನು ಸಹ ವೇಣು ಸ್ವಾಮಿ ಹೇಳಿದ್ದಾರೆ. ಈ ಹಿಂದೆ ನಟಿ ರಶ್ಮಿಕಾ ಮಂದಣ್ಣ ಸೇರಿದಂತೆ ಹಲವು ನಟಿಯರು ವೇಣು ಸ್ವಾಮಿ ಬಳಿ ಪೂಜೆ ಮಾಡಿಸಿ ಯಶಸ್ಸು ಪಡೆದವರೆ. ಯೂಟ್ಯೂಬ್ ಚಾನೆಲ್​ಗಳಲ್ಲಿ ಸಿನಿಮಾ ನಟರ, ರಾಜಕಾರಣಿಗಳ ಭವಿಷ್ಯ ಹೇಳುತ್ತಿದ್ದ ವೇಣು ಸ್ವಾಮಿ ಇತ್ತೀಚೆಗೆ ಅದನ್ನು ನಿಲ್ಲಿಸಿಬಿಟ್ಟಿದ್ದರು. ಆದರೆ ಇದೀಗ ಅಲ್ಲು ಅರ್ಜುನ್ ನಟನೆಯ ‘ಪುಷ್ಪ 2’ ಸಿನಿಮಾ ಬಿಡುಗಡೆ ಆದ ಬಳಿಕ ಅಲ್ಲು ಅರ್ಜುನ್ ಭವಿಷ್ಯದ ಬಗ್ಗೆ ಮಾತನಾಡಿದ್ದಾರೆ.

ವಿಡಿಯೋ ಒಂದರಲ್ಲಿ ಮಾತನಾಡಿರುವ ವೇಣು ಸ್ವಾಮಿ, ‘ಅಲ್ಲು ಅರ್ಜುನ್ ನಟನೆಯ ‘ಪುಷ್ಪ 2’ ಸಿನಿಮಾ ನೋಡಿಕೊಂಡು ಬಂದೆ ಅಲ್ಲು ಅರ್ಜುನ್ ಅದ್ಭುತವಾಗಿ ನಟಿಸಿದ್ದಾರೆ. ಸಿನಿಮಾ ಅದ್ಭುತವಾಗಿದ್ದು, ದೇವಿಯ ಆಶೀರ್ವಾದದಿಂದ ಭಾರಿ ಯಶಸ್ಸನ್ನು ಈ ಸಿನಿಮಾ ಪಡೆದುಕೊಳ್ಳಲಿದೆ’ ಎಂದಿದ್ದಾರೆ. ಮುಂದುವರೆದು, ಈ ಸಂದರ್ಭದಲ್ಲಿ ಈ ಹಿಂದೆ ನಾನು ಅಲ್ಲು ಅರ್ಜುನ್ ಬಗ್ಗೆ ಹೇಳಿರುವ ಭವಿಷ್ಯವನ್ನು ನೋಡಿ ಎಂದು ಹೇಳಿ, ವೇಣು ಸ್ವಾಮಿ, ಈ ಹಿಂದೆ ಕೆಲ ಯೂಟ್ಯೂಬ್ ಚಾನೆಲ್​ಗಳಲ್ಲಿ ಅಲ್ಲು ಅರ್ಜುನ್ ಬಗ್ಗೆ ನುಡಿದಿರುವ ಭವಿಷ್ಯದ ವಿಡಿಯೋ ಹಾಕಿದ್ದಾರೆ.

ಹಳೆಯ ವಿಡಿಯೋಗಳಲ್ಲಿ ವೇಣು ಸ್ವಾಮಿ, ಅಲ್ಲು ಅರ್ಜುನ್ ತೆಲುಗು ಚಿತ್ರರಂಗದ ನಿಜವಾದ ಪ್ಯಾನ್ ಇಂಡಿಯಾ ಸ್ಟಾರ್. ಅವರ ಅದೃಷ್ಟ ಇನ್ನೂ ಹತ್ತು ವರ್ಷಗಳ ಕಾಲ ಹೀಗೆಯೇ ಇರಲಿದೆ. ತೆಲುಗು ಚಿತ್ರರಂಗದ ಪ್ರಸ್ತುತ ಸ್ಟಾರ್ ನಟರ ಪೈಕಿ ಅಲ್ಲು ಅರ್ಜುನ್ ಜಾತಕ ಅದ್ಭುತವಾಗಿದೆ. ಅವರು 100 ಕೋಟಿ ಸಂಭಾವನೆ, 500 ಕೋಟಿ ಕಲೆಕ್ಷನ್ ಮೂಲಕ ಮುಂದೆ ಸಾಗುತ್ತಿದ್ದಾರೆ, ಇನ್ನೂ ಹಲವು ವರ್ಷ ಹೀಗೆಯೇ ಇರಲಿದೆ. ಅವರ ಮೇಲೆ ಬಂಡವಾಳ ಹಾಕಿದವರಿಗೆ ನಷ್ಟ ಆಗುವುದೇ ಇಲ್ಲ ಎಂದೆಲ್ಲ ಹೇಳಿದ್ದರು. ಹಲವು ಸಂದರ್ಶನಗಳಲ್ಲಿ ವೇಣು ಸ್ವಾಮಿ, ಅಲ್ಲು ಅರ್ಜುನ್ ಅದೃಷ್ಟವಂತರೆಂದು, ಅವರಿಗೆ ಮುಂದಿನ ಹತ್ತು ವರ್ಷಗಳ ಕಾಲ ಸೋಲು ಇಲ್ಲವೆಂದು ಹೇಳಿದ್ದಾರೆ.

ಇದನ್ನೂ ಓದಿ:ಮಾಸ್ ಸಿನಿಮಾದಿಂದ ಕಾಮಿಡಿ ಸಿನಿಮಾದತ್ತ ಅಲ್ಲು ಅರ್ಜುನ್?

ಅಸಲಿಗೆ ಕಳೆದ ಸುಮಾರು ಆರೇಳು ವರ್ಷದಿಂದ ಅಲ್ಲು ಅರ್ಜುನ್ ಸಿನಿಮಾಗಳು ಸೋಲು ಕಂಡಿಲ್ಲ. ಅದರಲ್ಲೂ 2020 ರ ಬಳಿಕ ಅಲ್ಲು ಅರ್ಜುನ್ ನಟಿಸಿದ ಸಿನಿಮಾಗಳು ಬ್ಲಾಕ್ ಬಸ್ಟರ್​ ಎನಿಸಿಕೊಂಡಿವೆ. 2020 ರಲ್ಲಿ ಬಿಡುಗಡೆ ಆದ ‘ಅಲಾ ವೈಕುಂಟಪುರಂಲೋ’, ‘ಪುಷ್ಪ’ ಈಗ ಬಿಡುಗಡೆ ಆಗಿರುವ ‘ಪುಷ್ಪ 2’ ಸಿನಿಮಾ ಭಾರಿ ದೊಡ್ಡ ಹಿಟ್ ಆಗಿದೆ.

ಕಳೆದ ಆಂಧ್ರ ವಿಧಾನಸಭೆ ಚುನಾವಣೆ ಬಗ್ಗೆ ವೇಣು ಸ್ವಾಮಿ ಹೇಳಿದ ಭವಿಷ್ಯ ಸುಳ್ಳಾಯ್ತು ಹಾಗಾಗಿ ತಾವಿನ್ನು ಭವಿಷ್ಯ ಹೇಳುವುದಿಲ್ಲ ಎಂದಿದ್ದರು ವೇಣು ಸ್ವಾಮಿ. ಅದಾದ ಬಳಿಕ ನಾಗ ಚೈತನ್ಯ ಹಾಗೂ ಶೋಭಿತಾ ಬಗ್ಗೆ ವೇಣು ಸ್ವಾಮಿ ಭವಿಷ್ಯ ಹೇಳಿದರು. ಆ ಸಮಯದಲ್ಲಿ ಅಕ್ಕಿನೇನಿ ಕುಟುಂಬದವರು ವೇಣು ಸ್ವಾಮಿ ಮೇಲೆ ದೂರು ನೀಡಿದರು. ಇದರಿಂದ ಸಾಕಷ್ಟು ಸಮಸ್ಯೆಯನ್ನು ವೇಣು ಸ್ವಾಮಿ ಎದುರಿಸಿದರು. ಹಾಗಾಗಿ ತಾವು ಇನ್ನು ಮುಂದೆ ಯಾವುದೇ ಸೆಲೆಬ್ರಿಟಿಗಳ ಭವಿಷ್ಯವನ್ನು ಯೂಟ್ಯೂಬ್​ ನಲ್ಲಿ ಹೇಳುವುದಿಲ್ಲ ಎಂದಿದ್ದರು. ಈಗ ಅಲ್ಲು ಅರ್ಜುನ್ ಬಗ್ಗೆ ತಾವು ಹೇಳಿರುವ ಹಿಂದಿನ ಭವಿಷ್ಯದ ವಿಡಿಯೋಗಳನ್ನು ಮತ್ತೊಮ್ಮೆ ವೀಕ್ಷಕರಿಗೆ ತೋರಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:23 am, Sun, 8 December 24