ಅಜಿತ್ ಜೊತೆ ನಯನತಾರಾ ಪತಿಯ ‘ಕೆಜಿಎಫ್’ ಮಾದರಿ ಸಿನಿಮಾ ನಿಂತುಹೋಗಿದ್ದೇಕೆ?

Vignesh Shivan: ‘ಕೆಜಿಎಫ್’ನಿಂದ ಸ್ಪೂರ್ತಿ ಪಡೆದು ಹಲವು ನಿರ್ದೇಶಕರು ಬೇರೆ ಬೇರೆ ರೀತಿಯ ಸಿನಿಮಾಗಳನ್ನು ಮಾಡಿದರು. ಕನ್ನಡದಲ್ಲಿ ‘ಕಬ್ಜ’ ಸಿನಿಮಾ ಸಹ ‘ಕೆಜಿಎಫ್’ ಸ್ಪೂರ್ತಿಯಿಂದಲೇ ಬಂದಿದ್ದು. ಅಸಲಿಗೆ ಸ್ಟಾರ್ ನಟಿ ನಯನತಾರಾ ಅವರ ಪತಿ ವಿಘ್ನೇಶ್ ಶಿವನ್ ಸಹ ‘ಕೆಜಿಎಫ್’ ಸಿನಿಮಾದಿಂದ ಸ್ಪೂರ್ತಿ ಪಡೆದು ಸಿನಿಮಾ ಕತೆಯೊಂದನ್ನು ರೆಡಿ ಮಾಡಿಕೊಂಡಿದ್ದರು, ಆದರೆ ಅದು ಸಿನಿಮಾ ಆಗಲಿಲ್ಲ.

ಅಜಿತ್ ಜೊತೆ ನಯನತಾರಾ ಪತಿಯ ‘ಕೆಜಿಎಫ್’ ಮಾದರಿ ಸಿನಿಮಾ ನಿಂತುಹೋಗಿದ್ದೇಕೆ?
Kgf Ajit

Updated on: Apr 17, 2026 | 6:31 PM

ಕೆಜಿಎಫ್’ (KGF) ಮತ್ತು ‘ಕೆಜಿಎಫ್ 2’ ಸಿನಿಮಾಗಳು ಹಲವು ಸಿನಿಮಾ ನಿರ್ದೇಶಕರಿಗೆ, ನಾಯಕರಿಗೆ, ನಿರ್ಮಾಪಕರಿಗೆ ಮಾದರಿ ಹಾಕಿಕೊಟ್ಟ ಸಿನಿಮಾಗಳು. ನಾಯಕನ ಎಲಿವೇಶನ್, ಚಿತ್ರೀಕರಣದ ರೀತಿ, ಸಿನಿಮಾದ ಸ್ಕೇಲ್, ಆಧುನಿಕ ಗ್ಯಾಂಗ್​​ಸ್ಟರ್ ಕತೆಗಳು ಹೇಗಿರಬೇಕು ಎಂಬುದಕ್ಕೆ ಉದಾಹರಣೆಯಂತಿತ್ತು ಆ ಸಿನಿಮಾ. ‘ಕೆಜಿಎಫ್’ನಿಂದ ಸ್ಪೂರ್ತಿ ಪಡೆದು ಹಲವು ನಿರ್ದೇಶಕರು ಬೇರೆ ಬೇರೆ ರೀತಿಯ ಸಿನಿಮಾಗಳನ್ನು ಮಾಡಿದರು. ಕನ್ನಡದಲ್ಲಿ ‘ಕಬ್ಜ’ ಸಿನಿಮಾ ಸಹ ‘ಕೆಜಿಎಫ್’ ಸ್ಪೂರ್ತಿಯಿಂದಲೇ ಬಂದಿದ್ದು. ಅಸಲಿಗೆ ಸ್ಟಾರ್ ನಟಿ ನಯನತಾರಾ ಅವರ ಪತಿ ವಿಘ್ನೇಶ್ ಶಿವನ್ ಸಹ ‘ಕೆಜಿಎಫ್’ ಸಿನಿಮಾದಿಂದ ಸ್ಪೂರ್ತಿ ಪಡೆದು ಸಿನಿಮಾ ಕತೆಯೊಂದನ್ನು ರೆಡಿ ಮಾಡಿಕೊಂಡಿದ್ದರು, ಆದರೆ ಅದು ಸಿನಿಮಾ ಆಗಲಿಲ್ಲ.

ಅವರೇ ಹೇಳಿಕೊಂಡಿರುವಂತೆ, ತಮಿಳಿನ ಸ್ಟಾರ್ ನಟ ಅಜಿತ್ ಅವರನ್ನು ಮನಸಿನಲ್ಲಿಟ್ಟುಕೊಂಡು ದೊಡ್ಡ ಸ್ಕೇಲ್​​ನ ‘ಕೆಜಿಎಫ್’ ಮಾದರಿ ಗ್ಯಾಂಗ್​​ಸ್ಟರ್ ಕತೆಯೊಂದನ್ನು ಅವರು ಮಾಡಿದ್ದರಂತೆ. ಆದರೆ ಬಜೆಟ್ ಸಮಸ್ಯೆಯಿಂದಾಗಿ ಆ ಕತೆ ಸಿನಿಮಾ ಆಗಲಿಲ್ಲ ಎಂದಿದ್ದಾರೆ ವಿಘ್ನೇಶ್ ಶಿವನ್. ಅಸಲಿಗೆ ಅಜಿತ್ ಅವರ 62ನೇ ಸಿನಿಮಾವನ್ನು ವಿಘ್ನೇಶ್ ಶಿವನ್ ಅವರು ನಿರ್ದೇಶಿಸಬೇಕಿತ್ತು. ಆ ಬಗ್ಗೆ ಘೋಷಣೆಯೂ ಆಗಿತ್ತು. ಆದರೆ ಕೊನೆಯ ಕ್ಷಣದಲ್ಲಿ ಸಿನಿಮಾ ಸೆಟ್ಟೇರಲಿಲ್ಲ. ಇದೀಗ ವಿಘ್ನೇಶ್ ಅವರ ‘ಎಲ್​ಐಕೆ’ ಹೆಸರಿನ ಸಿನಿಮಾ ಬಿಡುಗಡೆ ಆಗಿದ್ದು, ಸಿನಿಮಾದ ಕಾರ್ಯಕ್ರಮದಲ್ಲಿ ಅವರು ಅಜಿತ್ ಸಿನಿಮಾ ಬಗ್ಗೆ ಮಾತನಾಡಿದ್ದಾರೆ.

ಇದನ್ನೂ ಓದಿ:‘ರಾಮಾಯಣ’ ಚಿತ್ರದ ದೊಡ್ಡ ಸ್ಪಾಯ್ಲರ್ ರಿವೀಲ್ ಮಾಡಿ ತಪ್ಪು ಮಾಡಿದ್ರಾ ಯಶ್?

‘ಮದುವೆಯ ದಿನ ತಾಳಿ ಕಟ್ಟುವ ಕೊನೆಯ ಕ್ಷಣದಲ್ಲಿ ವರ ಮಂಟಪದಿಂದ ಎದ್ದು ಹೋದರೆ ವಧುವಿನ ಸ್ಥಿತಿ ಹೇಗಿರುತ್ತದೆಯೋ, ಅಜಿತ್ ಸರ್ ಸಿನಿಮಾ ನಿಂತುಹೋದಾಗ ನನಗೂ ಹಾಗೆಯೇ ಅನ್ನಿಸಿತು. ಅಂತಹ ದೊಡ್ಡ ಅವಕಾಶ ಕೈತಪ್ಪಿದಾಗ ಮತ್ತೊಂದು ಸಿನಿಮಾವನ್ನು ಆರಂಭಿಸುವುದು ಬಹಳ ಕಷ್ಟವಾಗಿತ್ತು’ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

‘ನಾನು ಅಜಿತ್ ಅವರಿಗಾಗಿ ಕತೆಯೊಂದನ್ನು ಬರೆದಿದ್ದೆ, ಸುಮಾರು ಎರಡು-ಮೂರು ವರ್ಷ ಅದಕ್ಕಾಗಿ ವ್ಯಯಿಸಿದ್ದೆ. ಆದರೆ ನಿರ್ಮಾಣ ತಂಡವು ಚಿತ್ರದ ದ್ವಿತೀಯಾರ್ಧವನ್ನು ಬದಲಾಯಿಸುವಂತೆ ಸಲಹೆ ನೀಡಿತು. ನಿರ್ದೇಶಕ ಪ್ರಶಾಂತ್ ನೀಲ್ ಅವರ ‘ಕೆಜಿಎಫ್’ ಚಿತ್ರದ ಕನಸಿಗೆ ಹೊಂಬಾಳೆ ಫಿಲ್ಮ್ಸ್ ಬೆನ್ನೆಲುಬಾಗಿ ನಿಂತಿತ್ತು. ನಾನು ಕೆಜಿಎಫ್, ಆರ್ ಆರ್ ಆರ್ ನಂತಹ ಚಿತ್ರಗಳನ್ನು ನೋಡಿ, ಅಜಿತ್ ಸರ್ ಅವರ ಅಭಿಮಾನಿಯಾಗಿ ಅವರ ಜೊತೆ ಅಷ್ಟೇ ಬೃಹತ್ ಮಟ್ಟದ ಸಿನಿಮಾ ಮಾಡಬೇಕೆಂದು ಬಯಸಿದ್ದೆ. ಆದರೆ, ನಾನು ಆ ಚಿತ್ರಕ್ಕಾಗಿ ಅಂದುಕೊಂಡಿದ್ದ ಬಜೆಟ್‌ಗೆ ನಿರ್ಮಾಣ ಸಂಸ್ಥೆಯು ಬೆಂಬಲ ನೀಡಲಿಲ್ಲ’ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us