
ಟಾಲಿವುಡ್ನ ಸ್ಟಾರ್ ನಟ ವಿಜಯ್ ದೇವರಕೊಂಡ ಹಾಗೂ ಜನಪ್ರಿಯ ನಟಿ ರಶ್ಮಿಕಾ ಮಂದಣ್ಣ ಜೋಡಿಯಾಗಿ ನಟಿಸಿರುವ’ರಾಣಬಾಲಿ’ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಮೊದಲ ದಿನ ಪೂರ್ಣಗೊಳಿಸಿದೆ. ಇವರಿಬ್ಬರ ಮದುವೆಯ ಬಳಿಕ ಬಿಡುಗಡೆಯಾದ ಮೊದಲ ಚಿತ್ರವಾಗಿರುವುದರಿಂದ ಪ್ರೇಕ್ಷಕರು ಹಾಗೂ ಅಭಿಮಾನಿಗಳಲ್ಲಿ ಈ ಸಿನಿಮಾ ಕುರಿತು ಭಾರೀ ನಿರೀಕ್ಷೆಯಿತ್ತು. ಈ ಚಿತ್ರದ ಗಳಿಕ ವಿವರ ಇಲ್ಲಿದೆ.
ಅಕ್ಟೋಬರ್ 16, 2026ರಂದು (ಮೊದಲ ಶುಕ್ರವಾರ) ಬಿಡುಗಡೆಯಾದ ಈ ಚಿತ್ರವು ಮೊದಲ ದಿನದಂದು ದೇಶಾದ್ಯಂತ ಒಟ್ಟು 2,515 ಪ್ರದರ್ಶನಗಳೊಂದಿಗೆ ಶೇಕಡಾ 57.0ರಷ್ಟು ಆಕ್ಯುಪೆನ್ಸಿ ದಾಖಲಿಸಿದೆ. ಮೊದಲ ದಿನದ ಅಂಕಿಅಂಶಗಳ ಪ್ರಕಾರ, ಚಿತ್ರವು ಭಾರತದಲ್ಲಿ ಒಟ್ಟು 9.25 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಹಾಗೂ 10.75 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಗಳಿಸಿದೆ. ಇನ್ನು ವಿದೇಶಿ ಮಾರುಕಟ್ಟೆಯಲ್ಲಿ 5.75 ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಮೂಲಕ, ಚಿತ್ರದ ಒಟ್ಟು ವಿಶ್ವಾದ್ಯಂತ ಗಳಿಕೆಯು ಮೊದಲ ದಿನದ ಅಂತ್ಯಕ್ಕೆ 16.50 ಕೋಟಿ ರೂಪಾಯಿಗೆ ತಲುಪಿದೆ.
ಸಿನಿಮಾಗೆ ಇಂದು, ನಾಳೆ ಹಾಗೂ ಮುಂಬರುವ ಹಬ್ಬದ ರಜಾ ದಿನಗಳು ಪ್ರಮುಖವಾಗಿವೆ. ಅಂದು ಸಿನಿಮಾ ಎಷ್ಟು ಕೋಟಿ ರೂಪಾಯಿ ಗಳಿಸುತ್ತದೆ ಎಂಬ ಕುತೂಹಲ ಮೂಡಿದೆ. ವಿಜಯ್ ಹಾಗೂ ರಶ್ಮಿಕಾ ಅವರ ಈ ಸಿನಿಮಾ ಹಳೆಯ ಕಾಲದ ಕಥೆಯನ್ನು ಹೊಂದಿದೆ. ಹೀಗಾಗಿ, ಇದರ ಮೇಕಿಂಗ್ ದೊಡ್ಡ ಚಾಲೆಂಜಿಂಗ್ ಆಗಿತ್ತು.
ಇದನ್ನೂ ಓದಿ: ಹಳೆಯ ಸಿನಿಮಾ ಸೋಲನ್ನು ನೆನಪಿಸಿಕೊಂಡ ವಿಜಯ್ ದೇವರಕೊಂಡ
ವಿಜಯ್ ದೇವರಕೊಂಡ ಅವರು ಒಂದು ದೊಡ್ಡ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ‘ರಣಬಾಲಿ’ ಸಿನಿಮಾ ಗೆಲ್ಲಲಿ ಎಂಬುದು ಅವರ ಅಭಿಮಾನಿಗಳ ಹಾರೈಕೆ ಆಗಿದೆ. ಪ್ರೇಕ್ಷಕರು ಇದನ್ನು ಮುಂದಿನ ದಿನಗಳಲ್ಲಿ ನಿರ್ಧಾರ ಮಾಡಲಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.