ವಿಚ್ಛೇದನದ ಬಗ್ಗೆ ವಿಜಯ್ ಮಾತು: ಹಳೆ ವಿಡಿಯೋ ವೈರಲ್ ಮಾಡಿ ಟ್ರೋಲ್

Thalapathy Vijay: ವಿಜಯ್ ಪತ್ನಿ ವಿಚ್ಛೇದನಕ್ಕಾಗಿ ಅರ್ಜಿ ಹಾಕಿದ್ದಾರೆ. ಅದರ ಬೆನ್ನಲ್ಲೆ, ವಿಜಯ್ ಸಹ ನಟಿ ತ್ರಿಷಾ ಜೊತೆಗೆ ಬಹಿರಂಗವಾಗಿ ಕಾಣಿಸಿಕೊಂಡಿದ್ದು, ತಮ್ಮ ವಿಚ್ಛೇದನ ವಿಷಯವನ್ನು ಖಾತ್ರಿ ಪಡಿಸಿದ್ದಾರೆ. ವಿಜಯ್ ವಿಚ್ಛೇದನ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹಾಟ್ ಟಾಪಿಕ್ ಆಗಿದೆ. ಹೀಗಿರುವಾಗಲೇ ವಿಜಯ್ ಅವರ ಹಳೆಯ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ವಿಪರೀತ ಟ್ರೋಲ್ ಮಾಡಲಾಗುತ್ತಿದೆ.

ವಿಚ್ಛೇದನದ ಬಗ್ಗೆ ವಿಜಯ್ ಮಾತು: ಹಳೆ ವಿಡಿಯೋ ವೈರಲ್ ಮಾಡಿ ಟ್ರೋಲ್
Thalapathy Vijay Trisha

Updated on: Mar 12, 2026 | 3:44 PM

ದಳಪತಿ ವಿಜಯ್ (Thalapathy Vijay) ಪತ್ನಿ ವಿಚ್ಛೇದನಕ್ಕಾಗಿ ಅರ್ಜಿ ಹಾಕಿದ್ದು, ನಟ ವಿಜಯ್​​ಗೆ ನಟಿಯೊಬ್ಬರೊಟ್ಟಿಗೆ ಸಂಬಂಧ ಇದೆ, ಇದೇ ಆಧಾರದ ಮೇಲೆ ತಮಗೆ ಜೀವನಾಂಶದ ಜೊತೆಗೆ ವಿಚ್ಛೇದನ ಕೊಡಿಸಬೇಕು ಎಂದು ನ್ಯಾಯಾಲಯದಲ್ಲಿ ಕೇಳಿಕೊಂಡಿದ್ದಾರೆ. ಅದರ ಬೆನ್ನಲ್ಲೆ, ವಿಜಯ್ ಸಹ ನಟಿ ತ್ರಿಷಾ ಜೊತೆಗೆ ಬಹಿರಂಗವಾಗಿ ಕಾಣಿಸಿಕೊಂಡಿದ್ದು, ತಮ್ಮ ವಿಚ್ಛೇದನ ವಿಷಯವನ್ನು ಖಾತ್ರಿ ಪಡಿಸಿದ್ದಾರೆ. ವಿಜಯ್ ವಿಚ್ಛೇದನ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹಾಟ್ ಟಾಪಿಕ್ ಆಗಿದೆ. ಹೀಗಿರುವಾಗಲೇ ವಿಜಯ್ ಅವರ ಹಳೆಯ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ವಿಪರೀತ ಟ್ರೋಲ್ ಮಾಡಲಾಗುತ್ತಿದೆ.

ವಿಜಯ್ ಅವರ ಹಳೆಯ ಸಿನಿಮಾ ಒಂದರ ವಿಡಿಯೋ ತುಣುಕೊಂದನ್ನು ವೈರಲ್ ಮಾಡಲಾಗಿದ್ದು, ವಿಡಿಯೋನಲ್ಲಿ ವಿಜಯ್, ವಿಚ್ಛೇದನವನ್ನು ವಿರೋಧಿಸಿ ಮಾತನಾಡಿದ್ದಾರೆ. ವಿಚ್ಛೇದನ ಪಡೆದುಕೊಳ್ಳುತ್ತಿರುವ ಮಹಿಳೆಯನ್ನು ಟೀಕಿಸಿ ಆಕೆಗೆ ಬುದ್ಧಿ ಹೇಳುವ ಸೀನ್ ಅದಾಗಿದೆ. ಇದೀಗ ಈ ವಿಡಿಯೋವನ್ನು ಹಂಚಿಕೊಳ್ಳುತ್ತಿರುವ ನೆಟ್ಟಿಗರು, ವಿಜಯ್, ವಿಚ್ಛೇದನದ ಬಗ್ಗೆ ಹೀಗೆಲ್ಲ ಹೇಳಿ, ಈಗ ಅವರೇ ವಿಚ್ಛೇದನ ಪಡೆದುಕೊಳ್ಳುತ್ತಿದ್ದಾರೆ ಎಂದು ಟೀಕೆ ಮಾಡಿದ್ದಾರೆ.

ವಿಜಯ್ ಅವರ ಹಳೆ ಸಿನಿಮಾದ ದೃಶ್ಯ ಇದಾಗಿದ್ದು, ವಿದೇಶದಲ್ಲಿ ನಡೆಯುವ ಆ ದೃಶ್ಯದಲ್ಲಿ ನಾಯಕಿ, ತನ್ನ ಗೆಳತಿಯೊಂದಿಗೆ ಮಾತನಾಡುತ್ತಿರುತ್ತಾಳೆ, ಗೆಳತಿ, ತಾನು ವಿಚ್ಛೇದನ ಪಡೆದಿದ್ದು, ಈಗ ಮತ್ತೊಂದು ಮದುವೆ ಆಗುತ್ತಿದ್ದೇನೆ ಎನ್ನುತ್ತಾಳೆ ಆಗ ನಾಯಕಿ, ‘ಮುಂದಿನ ಜೀವನಕ್ಕೆ ಒಳ್ಳೆಯದಾಗಲಿ’ ಎಂದು ಶುಭ ಹಾರೈಸುತ್ತಾಳೆ. ಆಗ ಅಲ್ಲಿಯೇ ಇದ್ದ ನಾಯಕ ವಿಜಯ್, ನಾಯಕಿಯ ಗೆಳತಿಯನ್ನುದ್ದೇಶಿಸಿ, ‘ನೀವು ಭಾರತೀಯರು ತಾನೆ?’ ಎನ್ನುತ್ತಾರೆ. ಅದಕ್ಕೆ ಗೆಳತಿ, ‘ಹೌದು, ಆದರೆ ನಾವು ವಿದೇಶದಲ್ಲಿ ಸೆಟಲ್ ಆಗಿ ಹಲವು ವರ್ಷಗಳೇ ಆಯ್ತು’ ಎನ್ನುತ್ತಾರೆ. ಆಗ ವಿಜಯ್ ತಮ್ಮ ಭಾಷಣ ಆರಂಭಿಸುತ್ತಾರೆ.

ಇದನ್ನೂ ಓದಿ:ರಶ್ಮಿಕಾ ಜೊತೆ ಡ್ಯಾನ್ಸ್ ಮಾಡಿದ ವಿಜಯ್ ಸಹೋದರ

‘ವಿದೇಶದಲ್ಲಿ ಸೆಟಲ್ ಆಗಿರುವುದಕ್ಕೆ ನೀವು ನಮ್ಮ ಭಾರತೀಯ ಸಂಸ್ಕೃತಿಯನ್ನು ಮರೆತು, ಪ್ರೀತಿ ಮತ್ತು ಬಾಂಧವ್ಯದ ಬಗ್ಗೆ ಬಹಳ ಕೀಳಾಗಿ ಮಾತನಾಡುತ್ತಿದ್ದೀರಿ. ಮಹಿಳೆ ಅಥವಾ ಪುರುಷನ ಜೀವನದಲ್ಲಿ ಪ್ರೀತಿ ಮತ್ತು ಮದುವೆ ಕೇವಲ ಒಂದು ಬಾರಿ ಆಗಬೇಕು. ಮದುವೆ ಆದವನು ಒಳ್ಳೆಯವನೋ, ಕೆಟ್ಟವನೊ ಜೀವನ ಪರ್ಯಂತ ಅವನ ಜೊತೆಯಲ್ಲಿಯೇ ಇರಬೇಕು ಅದೇ ತಮಿಳು ಸಂಸ್ಕೃತಿ. ನೀವು ಒಬ್ಬ ತಮಿಳು ಮಹಿಳೆಯಾಗಿ, ವಿಚ್ಛೇದನ ನೀಡಿ ಇನ್ನೊಬ್ಬನ ಮದುವೆ ಆಗುವುದಕ್ಕೆ ನಾಚಿಕೆ ಆಗುವುದಿಲ್ಲವೇ’ ಎನ್ನುತ್ತಾರೆ ವಿಜಯ್.

ಅಸಲಿಗೆ ವಿಜಯ್ ಆ ಸಿನಿಮಾದಲ್ಲಿ ಹೇಳಿದ್ದಕ್ಕೆ ವಿರುದ್ಧವೇ ಮಾಡುತ್ತಿದ್ದಾರೆ. ಪ್ರೀತಿ, ಮದುವೆ ಒಂದೇ ಬಾರಿ ಆಗಬೇಕು ಎಂದು ಹೇಳಿದ್ದ ವಿಜಯ್ ಇದೀಗ ಮದುವೆ ಆಗಿ, ಮಕ್ಕಳಾದ ಮೇಲೆ ನಟಿ ತ್ರಿಷಾ ಅವರನ್ನು ಪ್ರೀತಿಸಿದ್ದಾರೆ. ಈಗ ವಿಚ್ಛೇದನ ಆದ ಬಳಿಕ ಅವರೊಂದಿಗೆ ಮದುವೆ ಸಹ ಆಗಲಿದ್ದಾರೆ. ಇದು ತಮಿಳು ಸಂಸ್ಕೃತಿ ಅಲ್ಲ ಎಂದಿದ್ದರು. ಅದು ನಿಜವೇ ಆಗಿದ್ದರೆ ಈಗ ವಿಜಯ್ ಅವರೇ ಆ ಸಂಸ್ಕೃತಿಯ ವಿರುದ್ಧ ಹೊರಟಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us