VIDEO: ಇಟಲಿಯಲ್ಲಿ ಭೀಕರ ರಸ್ತೆ ಅಪಘಾತ; ಪ್ರಾಣಾಪಾಯದಿಂದ ಪಾರಾದ ಬಾಲಿವುಡ್ ನಟಿ, ಖ್ಯಾತ ಉದ್ಯಮಿ

ಸಾಲು ಸಾಲು ಸ್ಪೋರ್ಟ್ಸ್​ಕಾರುಗಳು ರಸ್ತೆಯಲ್ಲಿ ಸಾಗುತ್ತಿದ್ದವು. ವಿಕಾಸ್ ಅವರು ಲ್ಯಾಂಬೋರ್ಗಿನಿ ಕಾರನ್ನು ಚಲಾಯಿಸುತ್ತಿದ್ದರು. ಓವರ್​ಟೇಕ್ ಮಾಡುವಾಗ ಎಡವಟ್ಟು ಸಂಭವಿಸಿದೆ. ವಿಕಾಸ್ ಇದ್ದ ಕಾರು ಪಲ್ಟಿ ಆಗಿ ರಸ್ತೆಯಿಂದ ಕೆಳಕ್ಕೆ ಬಿದ್ದಿದೆ. ಆದರೆ, ಇಬ್ಬರೂ ಸೇಫ್ ಆಗಿದ್ದಾರೆ.

VIDEO: ಇಟಲಿಯಲ್ಲಿ ಭೀಕರ ರಸ್ತೆ ಅಪಘಾತ; ಪ್ರಾಣಾಪಾಯದಿಂದ ಪಾರಾದ ಬಾಲಿವುಡ್ ನಟಿ, ಖ್ಯಾತ ಉದ್ಯಮಿ
ವಿವೇಕ್-ಗಾಯತ್ರಿ

Updated on: Oct 04, 2023 | 10:44 AM

ಇಟಲಿಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಈ ವೇಳೆ ಮುಂಬೈನ ಉದ್ಯಮಿ ವಿಕಾಸ್ ಒಬೆರಾಯ್ (Vikas Oberoi) ಹಾಗೂ ಅವರ ಪತ್ನಿ, ಮಾಜಿ ನಟಿ ಗಾಯತ್ರಿ ಜೋಶಿ ಅವರು ರಸ್ತೆ ಅಪಘಾತಕ್ಕೆ ಒಳಗಾಗಿದ್ದಾರೆ. ಅದೃಷ್ಟವಶಾತ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮತ್ತೊಂದು ಕಾರಿನಲ್ಲಿ ಇದ್ದ ಇಬ್ಬರು ಮೃತಪಟ್ಟಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಗಾಯತ್ರಿ ಜೋಶಿ ಅವರು 2004ರಲ್ಲಿ ರಿಲೀಸ್ ಆದ ಶಾರುಖ್ ಖಾನ್ ನಟನೆಯ ‘ಸ್ವದೇಶ್’ ಚಿತ್ರದಲ್ಲಿ ನಟಿಸಿದರು. ಅವರು ಅಭಿನಯಿಸಿದ ಏಕೈಕ ಸಿನಿಮಾ ಇದು. ಅವರು ಮಾಡೆಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ. ಗಾಯತ್ರಿ 2005ರಲ್ಲಿ ವಿಕಾಸ್ ಅವರನ್ನು ವರಿಸಿದರು. ಆ ಬಳಿಕ ಚಿತ್ರರಂಗದಿಂದ ದೂರವೇ ಉಳಿದರು. ಈಗ ಅವರು ಪತಿಯ ಜೊತೆ ಇಟಲಿಗೆ ಪ್ರವಾಸಕ್ಕೆ ತೆರಳಿದ್ದರು. ಈ ವೇಳೆ ಅಪಘಾತ ಸಂಭವಿಸಿದೆ.

ಸಾಲು ಸಾಲು ಸ್ಪೋರ್ಟ್ಸ್​ಕಾರುಗಳು ರಸ್ತೆಯಲ್ಲಿ ಸಾಗುತ್ತಿದ್ದವು. ವಿಕಾಸ್ ಅವರು ಲ್ಯಾಂಬೋರ್ಗಿನಿ ಕಾರನ್ನು ಚಲಾಯಿಸುತ್ತಿದ್ದರು. ಓವರ್​ಟೇಕ್ ಮಾಡುವಾಗ ಎಡವಟ್ಟು ಸಂಭವಿಸಿದೆ. ವಿಕಾಸ್ ಇದ್ದ ಕಾರು ಪಲ್ಟಿ ಆಗಿ ರಸ್ತೆಯಿಂದ ಕೆಳಕ್ಕೆ ಬಿದ್ದಿದೆ. ಆದರೆ, ಇಬ್ಬರೂ ಸೇಫ್ ಆಗಿದ್ದಾರೆ.

ಕಿರಿದಾದ ರಸ್ತೆಯಲ್ಲಿ ವಾಹನಗಳು ಸಾಗುತ್ತಿತ್ತು. ಮುಂದಿದ್ದ ವ್ಯಾನ್ ಹಿಂದಿಕ್ಕಲು ಕೆಂಪು ಬಣ್ಣದ ಫೆರಾರಿ ಕಾರಿನವರು ಪ್ರಯತ್ನಿಸಿದ್ದರು. ಆಗ ಲ್ಯಾಂಬೋರ್ಗಿನಿಗೆ ಫೆರಾರಿ ಕಾರು ಡಿಕ್ಕಿ ಹೊಡೆದಿದೆ. ಈ ವೇಳೆ ಫೆರಾರಿಯಲ್ಲಿದ್ದ ಇಬ್ಬರೂ ಮೃತಪಟ್ಟಿದ್ದಾರೆ. ಮೃತರಿಬ್ಬರೂ ಸ್ವಿಜರ್​ಲೆಂಡ್​ ದಂಪತಿಗಳು. ಇವರ ವಯಸ್ಸು 60 ದಾಟಿದೆ.

ಇದನ್ನೂ ಓದಿ: ಬೆಂಗಳೂರಿನ ನೈಸ್ ರಸ್ತೆಯಲ್ಲಿ ಭೀಕರ ಅಪಘಾತ, 2 ವರ್ಷದ ಪುಟ್ಟ ಮಗು ಸೇರಿ ಇಬ್ಬರು ಸಾವು

‘ವಿಕಾಸ್ ಹಾಗೂ ನಾನು ಆರಾಮಾಗಿದ್ದೀವಿ. ಇಲ್ಲಿ ಸರಣಿ ಅಪಘಾತ ಆಗಿದೆ. ದೇವರ ದಯೆಯಿಂದ ಏನೂ ಆಗಿಲ್ಲ’ ಎಂದು ಗಾಯತ್ರಿ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಒಬೆರಾಯ್ ರಿಯಾಲ್ಟಿಗೆ ವಿಕಾಸ್ ಎಂಡಿ ಆಗಿದ್ದಾರೆ. ಇವರ ಆಸ್ತಿ ಮೊತ್ತ 30 ಸಾವಿರ ಕೋಟಿ ರೂಪಾಯಿ ದಾಟಿದೆ ಎನ್ನಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ